Lockdown: ಬೆಂಗಳೂರಿನಲ್ಲಿ ಹಂತ ಹಂತವಾಗಿ ಲಾಕ್​ಡೌನ್​ ತೆರವಿಗೆ ಬಿಬಿಎಂಪಿ ಸಲಹೆ

ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಬೇಕು ಎನ್ನುವ ಅಭಿಪ್ರಾಯ ಹಿರಿಯ ಅಧಿಕಾರಿಗಳು ಹೊರಹಾಕಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ. 31): ರಾಜ್ಯ ಸರ್ಕಾರ ಕೊರೋನಾ ಸೋಂಕು ನಿಯಂತ್ರಣಕ್ಕೆ ಜೂನ್‌ 7ರ ವರೆಗೆ ಲಾಕ್​ಡೌನ್​ ಘೋಷಿಸಿದೆ. ಅದಾದ‌ ಬಳಿಕ ಮುಂದೇನು ಎಂಬ ಪ್ರಶ್ನೆ ಈಗ ಎಲ್ಲರಲ್ಲಿಯೂ ಇದೆ. ಸರ್ಕಾರ ಕೂಡ ಸಭೆಯ ಮೇಲೆ ಸಭೆ ಮಾಡಿ ಇನ್ನು‌ ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದೆ. ಇದರ ನಡುವೆ ಬೆಂಗಳೂರು ಮಹಾನಗರ ಪಾಲಿಕೆ ಲಾಕ್ ಡೌನ್ ಬೇಡ ಎಂಬ ಸಲಹೆ ಕೊಟ್ಟಿದೆ. ಲಾಕ್ ಡೌನ್ ಮಾಡಿದ ಮೇಲೆ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಒಂದೂವರೆ ಲಕ್ಷವಿದ್ದ ಸಂಖ್ಯೆ ಲಾಕ್ ಡೌನ್ ಮಾಡಿದ ಎರಡನೇ ವಾರದಲ್ಲೇ 50 ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಹೀಗಾಗಿ ಲಾಕ್ ಡೌನ್ ಯಶಸ್ವಿಯಾಗಿದೆ ಎಂದಿದೆ. ಅಲ್ಲದೇ  ಸರ್ಕಾರಕ್ಕೆ  ಜೂನ್ 7ರ ಬಳಿಕ ಹಂತ ಹಂತವಾಗಿ ಅನ್ ಲಾಕ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಸಲಹೆ ಕೊಟ್ಟಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅನ್ ಲಾಕ್ ಸುಳಿವು ಕೊಟ್ಟಿದ್ದಾರೆ. ಲಾಕ್ ಡೌನ್ ಮಾಡುವುದಾದರೆ ಸಡಿಲಿಕೆ ಹಂತ ಹಂತವಾಗಿ ಮಾಡಬೇಕು. ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಬೇಕು ಎನ್ನುವ ಅಭಿಪ್ರಾಯ ಹಿರಿಯ ಅಧಿಕಾರಿಗಳು ಹೊರಹಾಕಿದ್ದಾರೆ. ಪ್ರಕರಣ ಪ್ರಮಾಣ ಕಡಿಮೆ ಆಗಬೇಕು, ತಳಮಟ್ಟದಲ್ಲಿ ಸೋಂಕಿತರು ಐಸೋಲೇಷನ್ ಆಗಬೇಕು. ಸದ್ಯದ ಸ್ಥಿತಿಯಲ್ಲಿ ಎರಡೂ ಆಗುತ್ತಾ ಇದೆ ಅಂತ ಹೇಳಿದರು.

ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಸಲಹೆ ಕೊಟ್ಟ ಬಿಬಿಎಂಪಿ.!!

ಜೂನ್ 7ರ ಬಳಿಕ ಏಕಾಏಕಿಯಾಗಿ ಲಾಕ್ ಡೌನ್ ತೆರವು ಮಾಡದೇ, ಹಂತ ಹಂತವಾಗಿ ಅನ್ ಲಾಕ್ ಮಾಡುವುದು ಒಳ್ಳಯದು. ಆರಂಭದಲ್ಲೇ ಚಿತ್ರ ಮಂದಿರ, ಶಾಪಿಂಗ್ ಮಾಲ್, ಶಾಲೆ-ಕಾಲೇಜು ಅನ್ನು ತೆರಯಲು ಅನುಮತಿ ಕೊಡಬಾರದು‌. ಇದರ ಜೊತೆಗೆ ಸಾರಿಗೆ ಬಸ್ ಗಳಲ್ಲಿ ಶೆ. 50 ರಷ್ಟು ಆಸನ ವ್ಯವಸ್ಥೆ ಕಲ್ಪಿಸುವುದು. ಐಟಿ-ಬಿಟಿ ಕಂಪೆನಿಗಳನ್ನು ಅವಕಾಶ ನೀಡದೇ ಮುಂದಿನ ಮೂರು ತಿಂಗಳ ಕಾಲ ವರ್ಕ್ ಫ್ರಂ ಹೋಮ್ ಗೆ ಒತ್ತು ನೀಡುವುದು. ಜನ ಸಂದಣಿ ಹೆಚ್ಚಿರುವ ಪ್ರದೇಶವನ್ನು ಅನ್ ಲಾಕ್ ಮಾಡದೆ ಇರುವುದು. ಮಾರ್ಕೆಟ್ ಗಳನ್ನು ಪರಿಸ್ಥಿತಿ ನೋಡಿಕೊಂಡು ಓಪನ್ ಮಾಡುವುದು. ಮುಖ್ಯವಾಗಿ ಮೆಜೆಸ್ಟಿಕ್, ಚಿಕ್ಕಪೇಟೆ, ಕೆಆರ್ ಮಾರ್ಕೆಟ್ ವ್ಯಾಪಾರಿಗಳಿಗೆ ವಿಶೇಷ SOP ಬಿಡುಗಡೆ ಮಾಡಬೇಕು ಅಂತ ಸರ್ಕಾರಕ್ಕೆ ಪಾಲಿಕೆ‌ ಸಲಹೆ ಕೊಟ್ಟಿದೆ.

ಇಷ್ಟೇ ಅಲ್ಲದೆ ಪರಿಸ್ಥಿತಿ ತಿಳಿಯಾಗುವವರೆಗೂ ನಮ್ಮ ಮೆಟ್ರೋದಲ್ಲಿ ಕಾರ್ಡ್ ವ್ಯವಸ್ಥೆ ಮುಂದುವರೆಸುವುದು. ಓಲಾ ಊಬರ್ ಕ್ಯಾಬ್ ಗಳಲ್ಲಿ ಸೀಟ್‌ ಡೈವೈಡ್ ರೂಲ್ಸ್ ಕಡ್ಡಾಯವಾಗಿ ಜಾರಿಯಾಗುವಂತೆ ಅನುಸರಿಸಬೇಕು. ಎಲ್ಲಾ ಪಾಲಿಕೆ‌ ಹಾಗೂ ಸರ್ಕಾರದ ಕೆಲಸವನ್ನು ಆನ್ ಲೈನ್ ಮೂಲಕ ಆಗುವಂತೆ ನೋಡಿಕೊಳ್ಳುವುದು. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ನೋಡಿಕೊಂಡು ನೈಟ್ ಕರ್ಫ್ಯೂ ಅಗತ್ಯವಿದ್ದರೆ ಜಾರಿ ಮಾಡುವುದು. ಬೆಂಗಳೂರು ಗಡಿ ಭಾಗದಲ್ಲಿ ವಿಶೇಷ ಚೆಕ್ ಪೋಸ್ಟ್ ರಚಿಸಿ ಮಾಹಿತಿ ಕಲೆ ಹಾಕುವುದು. ಹಳೆಯ ಮಾದರಿಯಂತೆ ಗಡಿಯಲ್ಲಿ ಟೆಸ್ಟಿಂಗ್ ಸೆಂಟರ್ ಅನ್ನು ತೆರೆಯುವುದು. ಹೀಗೆ ಹಲವು ಹಂತವಾಗಿ ಲಾಕ್ ಡೌನ್ ತೆರವಿಗೆ ಪಾಲಿಕೆ ಸಲಹೆ ಕೊಟ್ಟಿದೆ. ಒಟ್ಟಾರೆಯಾಗಿ ಈ ಲಾಕ್ ಡೌನ್ ಕೊರೋನಾ ನಿಯಂತ್ರಣ ಮಾಡುವಲ್ಲಿ ಸಫಲವಾಗಿದೆ ಅಂತ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಕೂಡ ಲಾಕ್ ಡೌನ್ ನಿಂದ ಸೋಂಕು ಹರಡುವುದು‌ ಹತೋಟಿಗೆ ಬಂದಿದೆ ಅಂತ ಒಪ್ಪಿಕೊಂಡಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡುವ ಅಗತ್ಯವಿಲ್ಲ. ಹಂತ ಹಂತವಾಗಿ ಅನ್ ಲಾಕ್ ಮಾಡಬಹುದು ಅಂತ ಸರ್ಕಾರಕ್ಕೆ ಹೇಳಿದೆ.

(ವರದಿ- ಆಶಿಕ್ ಮುಲ್ಕಿ )
Published by:Seema R
First published: