HOME » NEWS » State » BENGALURU URBAN BBMP ABANDONED BU NUMBERING SYSTEM FOR INFECTED BED BOOKING AMTV SESR

BBMP: ಸೋಂಕಿತರ ಬೆಡ್ ಬುಕ್ಕಿಂಗ್ ಗೆ BU ನಂಬರ್ ಪದ್ದತಿ ಕೈಬಿಟ್ಟ ಬಿಬಿಎಂಪಿ

ಸದ್ಯಕ್ಕೆ ನಗರದಲ್ಲಿರುವ ಬೆಡ್‌ಗಳ ಪೈಕಿ ಮೂರನೇ ಅಲೆಗೆ 15% ಬೆಡ್ ಗಳ ಹೆಚ್ಚಳ ಮಾಡಲು ಪ್ರಯತ್ನಿಸುತ್ತಿದೆ.

news18-kannada
Updated:June 22, 2021, 5:55 PM IST
BBMP: ಸೋಂಕಿತರ ಬೆಡ್ ಬುಕ್ಕಿಂಗ್ ಗೆ BU ನಂಬರ್ ಪದ್ದತಿ ಕೈಬಿಟ್ಟ ಬಿಬಿಎಂಪಿ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಜೂ. 22): ಎರಡನೇ ಅಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡಿ ಹೋಗಿದ್ದರು‌. ಇದಕ್ಕೆ ಪ್ರಮುಖ ಕಾರಣ BU ನಂಬರ್ ಸರಿಯಾದ ಸಮಯಕ್ಕೆ ಸೋಂಕಿತರಿಗೆ ಸಿಗದೆ ಇದ್ದಿದ್ದು. ಇದರ ಜೊತೆಗೆ BU ನಂಬರ್ ಬೇಕಾದರೆ ಹಣ ವಸೂಲಿ ಪ್ರಕರಣವೂ ಬೆಳಕಿಗೆ ಬಂದಿದ್ದವು‌. ಈ ಹಿನ್ನೆಲೆ ಮೂರನೇ ಅಲೆಯಲ್ಲಿ ಆ ಸಮಸ್ಯೆಯನ್ನು ಬಗೆ ಹರಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಮೂರನೇ ಅಲೆಯಲ್ಲಿ BU ನಂಬರ್ ಕಡ್ಡಾಯ ಅಲ್ಲ ಅಂತ ಪಾಲಿಕೆ ಸ್ಪಷ್ಟ ಪಡಿಸಿದೆ. ಆದರೆ BU ನಂಬರ್ ಬದಲಿಗೆ ಮೂರನೇ ಅಲೆಯಲ್ಲಿ SRF ನಂಬರ್ ಮುಖ್ಯ. SRF ನಂಬರ್ ಕೊರೋನಾ ಪರೀಕ್ಷೆ ವರದಿಯ ಜೊತೆಗೆ ಸೋಂಕಿತರಿಗೆ ಸಿಗಲಿದೆ. ಈ ಮೂಲಕ ಬೆಡ್ ಬುಕ್ ಮಾಡಲು ಮೂರನೇ ಅಲೆಯಲ್ಲಿ ಪರದಾಟ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೋನಾ ವರದಿ ಪಾಸಿಟಿವ್ ಬಂದ ಕೂಡಲೇ ಸೋಂಕಿತರ ಸಂಪರ್ಕಕಕ್ಕೆ ವ್ಯವಸ್ಥೆ.!!

ಇನ್ನು ಮೊದಲ ಮತ್ತು ಎರಡನೇ ಅವಧಿಯಲ್ಲಿ ಪಾಸಿಟಿವ್ ಬಂದು ದಿನ ಎರಡಾದರೂ ಸೋಂಕಿತರನ್ನು ಸಂಬಂಧಿತ ಅಧಿಕಾರಿಗಳು ಸಿಬ್ಬಂದಿಗಳು ಸಂಪರ್ಕಿಸುತ್ತಿರಲಿಲ್ಲ. ಇದರಿಂದ ಭೀತಿಗೊಳಗಾಗಿ ಹಲವು ಮಂದಿ‌ ಆಸ್ಪತ್ರೆ ಸೇರಿದ್ದುಂಟು. ಆದರೆ ಮೂರ‌ನೇ ಅಲೆಯಲ್ಲಿ ಪಾಸಿಟಿವ್ ವರದಿ ಬಂದ ಒಂದು ತಾಸಿನ ಒಳಗಡೆ ಸೋಂಕಿತರನ್ನು ಸಂಪರ್ಕಸಲು ಬೇಕಾಗಿ ಪಾಲಿಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇದಕ್ಕಂತಲೇ ಕಂಟ್ರೋಲ್‌ ರೂಮಲ್ಲಿ‌ ಸೂಪರ್‌ ಯೂಸರ್ ವಿಂಗ್ ಮಾಡಲು ಬಿಬಿಎಂಪಿ ಮುಂದಾಗಿದೆ. ತ್ವರಿತಗತಿಯಲ್ಲಿ ಸೋಂಕಿತರ ಸಂಪರ್ಕಿಸಲು ಕಂಟ್ರೋಲ್ ರೂಂನ ಈ ವಿಶೇಷ ಸೂಪರ್ ಯೂಸರ್ ತಂಡ ಇರಲಿದೆ. ಈ‌ ಸೂಪರ್ ಯೂಸರ್ ವ್ಯವಸ್ಥೆ ಮೂಲಕ ಒಂದು ತಾಸಿನ ಒಳಗಡೆಯೇ ಸೋಂಕಿತರ ಸಂಪರ್ಕಮಾಡಲಿದೆ ಪಾಲಿಕೆ. ಹೀಗೆ ಮಾಡುವುದರಿಂದ ಸೋಂಕಿತರು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಹುದು. ಆರಂಭದಲ್ಲೇ ಪ್ರತಿ ಸೋಂಕಿತರ ಸಂಪರ್ಕ ಸಾಧ್ಯವಾದರೆ ಸಾವು ನೋವು ತಡೆಗಟ್ಟಬಹುದು ಎಂಬ ಲೆಕ್ಕಾಚಾರ ಪಾಲಿಕೆಯದ್ದು‌.

ಇದರ ಹೊರತಾಗಿಯೂ ಮೂರನೇ ಅಲೆ ಎದುರಿಸಲು ಸಜ್ಜಾಗ್ತಿದೆ ಪಾಲಿಕೆ. ಸದ್ಯಕ್ಕೆ ನಗರದಲ್ಲಿರುವ ಬೆಡ್‌ಗಳ ಪೈಕಿ ಮೂರನೇ ಅಲೆಗೆ 15% ಬೆಡ್ ಗಳ ಹೆಚ್ಚಳ ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಎಂಬ ಊಹಾಪೋಹಗಳೂ ಹರಿದಾಡುತ್ತಿವೆ. ಹೀಗಾಗಿ ನಗರದಲ್ಲಿ 250 ಪಿಡಿಯಾಟ್ರಿಕ್ ಬೆಡ್ ವ್ಯವಸ್ಥೆಯನ್ನು ಪಾಲಿಕೆ ವಿವಿಧ ಆಸ್ಪತ್ರೆಗಳ ಜತೆ ಸೇರಿ ಮಾಡಿಕೊಂಡಿದೆ ಬಿಬಿಎಂಪಿ. ಮಕ್ಕಳಿಗೆ ವಿಶೇಷವಾಗಿ ಪಿಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ ಕೂಡ ಶೀಘ್ರವೇ ಓಪನ್ ಆಗಲಿದೆ.

ಸದ್ಯಕ್ಕಿರುವ ಯಾವ ಕೋವಿಡ್ ಕೇರ್ ಸೆಂಟರ್ ಗಳನ್ನೂ ಪಾಲಿಕೆ ಮುಚ್ಚುವುದಿಲ್ಲ. ಒಂದು ವೇಳೆ ಮಕ್ಕಳಿಗೆ ಹೆಚ್ಚು ವೈರಸ್ ತಗುಲಿದರೆ ಅರ್ಧಕ್ಕರ್ಧ ಕೋವಿಡ್ ಕೇರ್ ಸೆಂಟರ್ ಗಳು ಪಿಡಿಯಾಟ್ರಿಕ್ ಕೇರ್ ಸೆಂಟರ್ ಗಳಾಗಲಿವೆ. ಒಟ್ಟಾರೆಯಾಗಿ ಇನ್ನು ಕೆಲವೇ ವಾರದಲ್ಲಿ ರಾಜ್ಯಕ್ಕೂ ಮೂರ‌ನೆ ಅಲೆ ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಹೀಗಾಗಿ ಮೊದಲ & ಎರಡನೇ ಅಲೆಯಲ್ಲಿ ಆದ ಅನಾಹುತಗಳು ಮೂರನೇ ಅಲೆಯಲ್ಲಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಬೆಂಗಳೂರು ಮಹಾನಗರ ಪಾಲಿಕೆ ಮೇಲಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 22, 2021, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories