• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Basavaraj Horatti: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ; ದೇವೇಗೌಡರು ಹಾಗೂ HDK ಮೇಲೆ ಯಾವ ಬೇಸರವೂ ಇಲ್ಲ

Basavaraj Horatti: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ; ದೇವೇಗೌಡರು ಹಾಗೂ HDK ಮೇಲೆ ಯಾವ ಬೇಸರವೂ ಇಲ್ಲ

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತೆ ಎಂದರು. ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಹೊರಟ್ಟಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಮೇ 16): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ (Basavaraj Horatti)  ರಾಜೀನಾಮೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ (Press Meet) ನಡೆಸಿದ ಮಾತಾಡಿದ ಬಸವರಾಜ್​ ಹೊರಟ್ಟಿ, ರಾಜೀನಾಮೆ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಜೆಡಿಎಸ್​ಗೆ ಗುಡ್​ ಬಾಯ್​ (Good Bye)  ಹೇಳಿರೋ ಹೊರಟ್ಟಿ ಮಂಗಳವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ (BJP Join). ಸಭಾಪತಿಯಾಗಿ 30 ಸಭೆ ಮಾಡಿದ್ದೀನಿ, ಏನು ಸಭೆ ಮಾಡಿದ್ದೀನಿ, ಅದರ ಪ್ರತಿಫಲ ಏನು ಅನ್ನೋದ್ರ ಪುಸ್ತಕ ಮಾಡಿದ್ದೀವಿ. ಸದನವನ್ನ ಈ ಬಾರಿ ಏನು ಅಜೆಂಡಾ ಇತ್ತು 95% ಪೂರ್ಣ ಮಾಡಿದ್ದೇನೆ. ಕೆಲವೊಮ್ಮೆ ಪ್ರತಿಭಟನೆ (Protest) ಸಂದರ್ಭದಲ್ಲಿ ಮಾತ್ರ ಮುಂದೂಡಿದ್ದೇವೆ ಎಂದು ಇದೇ ವೇಳೆ ಹೊರಟ್ಟಿ ಹೇಳಿದ್ದಾರೆ.


'ಬಿಜೆಪಿ ಸೇರ್ಪಡೆಗೆ ಯಾವುದೇ ಷರತ್ತು ಹಾಕಿಲ್ಲ'


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತೆ ಎಂದರು. ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.  ಕುಮಾರಸ್ವಾಮಿ ಅವರಿಗೆ ವಿಚಾರ ತಿಳಿಸಿದ್ದೇನೆ. ಅವರೇ ಖುದ್ದಾಗಿ ನಮ್ಮ ಮನೆಗೆ ಬಂದು ಮಾತಾಡಿದ್ದಾರೆ. ಅವರಿಗೆ ನನ್ನ ನಿಲುವನ್ನು ತಿಳಿಸಿದ್ದೇನೆ. ಜೆಡಿಎಸ್ ನಲ್ಲಿದ್ದಾಗ ಕುಮಾರಸ್ವಾಮಿ ನನಗೆ ಒಳ್ಳೆಯ ಉಪಕಾರವನ್ನೇ ಮಾಡಿದ್ದಾರೆ ಎಂದರು.


ಇದನ್ನೂ ಓದಿ: Priyanka Gandhi: ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುತ್ತಾರಾ ಪ್ರಿಯಾಂಕಾ ಗಾಂಧಿ? ಕಾಂಗ್ರೆಸ್ ನಾಯಕಿಗೆ ಡಿಕೆಶಿ ಆಹ್ವಾನ


ನನಗೆ ಎಲ್ಲ ಪಕ್ಷದವರು ಸಹಕಾರ ನೀಡಿದ್ರು


ಬಿಜೆಪಿಯ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. 1980ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿ ಇದ್ದೆ. 2000ದಿಂದ ಇಲ್ಲಿಯವರೆಗೆ ಜೆಡಿಎಸ್‌ನಲ್ಲಿ ಇದ್ದೆ. ಜೆಡಿಎಸ್ ನಲ್ಲಿ ಕುಟುಂಬ ಸದಸ್ಯರ ತರ ನೋಡಿಕೊಂಡರು ಎಂದರು.


ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ


ಭಾರತದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಪ್ರಬುದ್ಧ ರಾಜಕಾರಣಿ. ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ, ಆತ್ಮೀಯರು ಸಾಕಷ್ಟು ಒತ್ತಾಯ ಮಾಡಿದರು, ಆಕಸ್ಮಿಕವಾಗಿ ಕೆಲವು ಬದಲಾವಣೆ ಅಗತ್ಯ ಎಂದು ಹೇಳಿದರು.


ಈ ರೀತಿಯ ಬದಲಾವಣೆ ಅನಿವಾರ್ಯ ಆಗಿತ್ತು


ಕೆಲವೊಮ್ಮೆ ಆಕಸ್ಮಿಕವಾಗಿ ಬದಲಾವಣೆಗಳು ಆಗುತ್ತಿರುತ್ತವೆ. ಕೆಲವು ಸಾರಿ ಈ ರೀತಿಯ ಬದಲಾವಣೆ ಅನಿವಾರ್ಯ ಆಗಿತ್ತು. ಅದಕ್ಕಾಗಿ ನಾನು ಈ‌ ನಿರ್ಧಾರ ಮಾಡಿದ್ದೇನೆ ಎಂದು ಜೆಡಿಎಸ್ ತೊರೆಯುವ ನಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ನನ್ನ ಸೇರ್ಪಡೆಯಿಂದ ಬಿಜೆಪಿಯಲ್ಲಿ ವಿರೋಧ ಇಲ್ಲ. ಆದರೆ, ಒಬ್ಬರನ್ನು ಬಿಟ್ಟು ಬೇರೆ ಯಾರಿಗೂ ವಿರೋಧ ಇಲ್ಲ ಎಂದು ಪರೋಕ್ಷವಾಗಿ ಮೋಹನ್ ಲಿಂಬೀಕಾಯಿ ವಿರುದ್ಧ ಹೊರಟ್ಟಿ ಅಸಮಾಧಾನ ಹೊರಹಾಕಿದರು.


ದನ್ನೂ ಓದಿ: HDK v/s Rahul Gandhi: "ಆಪರೇಷನ್‌ ಕಮಲಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?" ರಾಹುಲ್‌ ಗಾಂಧಿ ವಿರುದ್ಧ ಎಚ್‌ಡಿಕೆ ಕಿಡಿಕಿಡಿ


ದೇವೇಗೌಡರು, ಕುಮಾರಸ್ವಾಮಿ ಮೇಲೆ ಬೇಸರ ಇಲ್ಲ


ದೇವೇಗೌಡರ ಮೇಲೆ ಆಗಲಿ ಕುಮಾರಸ್ವಾಮಿ ಮೇಲೆ ಆಗಲಿ ಬೇಸರ ಇಲ್ಲ. ಆದರೆ, ದೇವೇಗೌಡರನ್ನು ಭೇಟಿ ಮಾಡಿ ಮಾತನಾಡುವ ಧೈರ್ಯ ಇಲ್ಲ. ಹಾಗಾಗಿ ಹತ್ತು ಪುಟಗಳ ಒಂದು ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ವಿಚಾರ ತಿಳಿಸಿದ್ದೇನೆ. ಅವರೇ ಖುದ್ದಾಗಿ ನಮ್ಮ ಮನೆಗೆ ಬಂದು ಮಾತಾಡಿದ್ದಾರೆ. ಅವರಿಗೆ ನನ್ನ ನಿಲುವನ್ನು ತಿಳಿಸಿದ್ದೇನೆ. ಜೆಡಿಎಸ್ ನಲ್ಲಿದ್ದಾಗ ಕುಮಾರಸ್ವಾಮಿ ನನಗೆ ಒಳ್ಳೆಯ ಉಪಕಾರವನ್ನೇ ಮಾಡಿದ್ದಾರೆ ಎಂದರು.

top videos
    First published: