CM Bommai Govt @100days: ಬೊಮ್ಮಾಯಿ ಸಿಎಂ ಆಗಿ 100 ದಿನ; ಸಂಭ್ರಮವನ್ನು ಕಸಿಯಿತಾ ಹಾನಗಲ್ ಸೋಲು?

ಹಾನಗಲ್​​​​ನಲ್ಲಿ ಸಿ‌ಎಂ ಉದಾಸಿಯವರ ಬೇಸ್ ಮುಂದುವರೆಸಲು ಸ್ವಲ್ಪ ಮಟ್ಟಿಗೆ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ವೇಳೆ ಜನರ ಪರ ಕೆಲಸ ಮಾಡಿದ್ರು ಅನ್ನುವ ಭಾವನೆ ಜನರಲ್ಲಿತ್ತು. ಇವೆರಡು ನಮ್ಮ ಸೋಲಿಗೆ ಕಾರಣಗಳು ಎಂದು ವಿಶ್ಲೇಷಿಸಿದರು.

CM ಬಸವರಾಜ ಬೊಮ್ಮಾಯಿ

CM ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಬಸವರಾಜ ಬೊಮ್ಮಾಯಿ(Basavaraj Bommai) ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು 100 ದಿನಗಳು ಸಂದಿವೆ. ಈ ಬಗ್ಗೆ ತಮ್ಮ ಆರ್​.ಟಿ.ನಗರ ನಿವಾಸದಲ್ಲಿ (RT Nagar House) ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನೂರು ದಿನ ಅನ್ನೋದು ವಿಶೇಷ ಅಲ್ಲ. ನೂರು ದಿನಗಳಲ್ಲಿ ಏನು ಮಾಡಿದೀವಿ ಅನ್ನೋದು ಮುಖ್ಯ. ನೂರು ದಿನ ಒಂದು ವರ್ಷದ ಹಾಗೆ ಪ್ರಮುಖ ಘಟ್ಟ ಅಲ್ಲ. ನೂರು ದಿನಗಳಲ್ಲಿ ಏನು ಕೆಲಸ ಮಾಡಿದೀವಿ ಅಂತ ತಿಳಿಸುವ ಕೆಲಸ ಮಾಡ್ತೀವಿ. ನೂರು ದಿನಗಳಲ್ಲಿ ನಮ್ಮ ಅಭಿವೃದ್ಧಿ, ಸವಾಲುಗಳ (Development, Challenges)‌ ಬಗ್ಗೆ ಜನರಿಗೆ ಸ್ಥೂಲ ಮಾಹಿತಿ ಕೊಡ್ತೇವೆ ಎಂದರು. ಇನ್ನು ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಆಚರಿಸುತ್ತೇನೆ ಎಂದು ತಿಳಿಸಿದರು. ಇವತ್ತು ಹಿರಿಯರ ಹಬ್ಬ, ಹಾಗಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದು, ನಾಡಿದ್ದು ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದರು.

ಸೋಲು-ಗೆಲುವು ಸಮಪ್ರಮಾಣದಲ್ಲಿದೆ

ಇನ್ನು ಸಿಂದಗಿ, ಹಾನಗಲ್​ ಉಪ ಚುನಾವಣೆಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಫಲಿತಾಂಶ ವಿಚಾರದಲ್ಲಿ ವ್ಯಾಖ್ಯಾನ ಸಹಜ. ಒಂದು ಕಡೆ ಸೋಲಾಗಿದೆ ಮತ್ತೊಂದು ಕಡೆ ಗೆಲುವು ಸಿಕ್ಕಿದೆ. ಸೋಲು-ಗೆಲುವು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಗೆಲುವಿಗೆ ಶ್ರಮಪಟ್ಟ ನಮ್ಮ ನಾಯಕರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲಿನ ಅಂತರವನ್ನು ಸಾಧಿಸಬಹುದಿತ್ತು‌ ನಾವು, ಸೋಲಿನ ಕಾರಣಗಳನ್ನು ಮುಂದಿನ ದಿನಗಳಲ್ಲಿ ಆತ್ಮವಿಮರ್ಶೆ ಮಾಡಿ ಸರಿಪಡಿಸಿಕೊಳ್ತೇವೆ ಎಂದರು.

ಸೋಲಿಗೆ 2 ಕಾರಣಗಳು

ಹಾನಗಲ್​​​​ನಲ್ಲಿ ಸಿ‌ಎಂ ಉದಾಸಿಯವರ ಬೇಸ್ ಮುಂದುವರೆಸಲು ಸ್ವಲ್ಪ ಮಟ್ಟಿಗೆ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ವೇಳೆ ಜನರ ಪರ ಕೆಲಸ ಮಾಡಿದ್ರು ಅನ್ನುವ ಭಾವನೆ ಜನರಲ್ಲಿತ್ತು. ಇವೆರಡು ನಮ್ಮ ಸೋಲಿಗೆ ಕಾರಣಗಳು ಎಂದು ವಿಶ್ಲೇಷಿಸಿದರು. ಬೈ ಎಲೆಕ್ಷನ್​​ ಫಲಿತಾಂಶ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯಗೆ ತಿರುಗೇಟು

ಈ ಫಲಿತಾಂಶ ಮುಂದಿನ ಚುಣವಣೆಗೆ ದಿಕ್ಸೂಚಿ ಅಲ್ಲ, ದಿಕ್ಸೂಚಿ‌ ಅಂತ ವಿಪಕ್ಷಗಳು ಹೇಳೋದು ಸಹಜ. ಸಿಂದಗಿ ಫಲಿತಾಂಶ ಯಾವುದಕ್ಕೆ ದಿಕ್ಸೂಚಿ ಅಂತೆ ಎಂದ ಸಿದ್ದರಾಮಯ್ಯಗೆ ಸಿಎಂ ಪ್ರಶ್ನೆ ಮಾಡಿದರು. 31 ಸಾವಿರ ಅಂತರದಿಂದ ಕಾಂಗ್ರೆಸ್ ಸೋತಿದೆ, ಅದನ್ನ ಅವರು ಮೊದಲು ನೋಡಿಕೊಳ್ಳಲಿ. ದಿಕ್ಸೂಚಿ ಸಿಂದಗಿಯಿಂದಲೇ ಆರಂಭ ಆಗಬೇಕು ಅನ್ನೋದಾದರೆ ಹಿಂದೆ ಕಾಂಗ್ರೆಸ್ ನಂಜನಗೂಡು, ಗುಂಡ್ಲುಪೇಟೆಗಳಲ್ಲಿ ಗೆದ್ದಿದ್ರು. ಅದಾದ ಒಂದು ವರ್ಷದಲ್ಲಿ ಕಾಂಗ್ರೆಸ್ ಅವೆರಡೂ ಕ್ಷೇತ್ರ ಸೋತ್ರು. ನಂತರ ರಾಜ್ಯದಲ್ಲೂ ಸೋತರು. ಒಂದು ಚುನಾವಣೆ ಅಲ್ಲಿನ ಹಲವು ಕಾರಣ, ಸ್ಥಳೀಯ ಕಾರಣಗಳಿಗೆ ಆಗುತ್ವೆ ಎಂದರು.

ಇದನ್ನೂ ಓದಿ: CT Ravi V/S Siddaramaiah: ರಾಜಕೀಯ ಅಸ್ತಿತ್ವ ಕೊಟ್ಟ ದೇವೇಗೌಡರಿಗೆ ಸಿದ್ದು ಕ್ಷಮೆ ಕೇಳಲಿ: ಸಿಟಿ ರವಿ ಸವಾಲು

ಸಿದ್ದರಾಮಯ್ಯ ಕೂಡ ಸೋಲು ನೋಡಿದ್ದರು

ಸತ್ಯಾಂಶ ಏನು ಅಂದ್ರೆ ಅವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಉಪಚುನಾವಣೆ ಸೋತಿದ್ರು. ಉಪಚುನಾವಣೆ ಗಳಲ್ಲಿ ಸೋಲು ಗೆಲುವು ಸಹಜ. 2012 ರಿಂದ ರಿಂದ 2019ರ ಮಧ್ಯೆ ನಮ್ಮ ಎನ್ ಡಿಎ ಕೂಡ ಉಪ ಚುನಾವಣೆಯಗಳಲ್ಲಿ ಸೋಲ ಅನುಭವಿಸಿತ್ತು. ಆದ್ರೆ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲಿಗಿಂತಲೂ ಹೆಚ್ಚು ಜಯಭೇರಿ ಬಾರಿಸಿತು. ಇದು ಸಾರ್ವತ್ರಿಕ ಚುನಾವಣೆಗೆ ಅನ್ವಯಿಸೋದಿಲ್ಲ. ಫಲಿತಾಂಶದ ವಿಚಾರ ಹೈಕಮಾಂಡ್ ಗೆ ತಿಳಿಸುವ ಕೆಲಸ ಪಕ್ಷ ಮಾಡುತ್ತೆ ಎಂದರು.

ಅವರು ದಾಖಲೆ ಬಿಡುಗಡೆ ಮಾಡಬೇಕು

ಬಿಟ್‌ಕಾಯಿನ್ ಆರೋಪಪಟ್ಟಿ ಬಿಡುಗಡೆ ಮಾಡುವಂತೆ ವಿಪಕ್ಷಗಳ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಅವರು ಆರೋಪ ಮಾಡಿದ್ದಾರೆ. ಅವರು ದಾಖಲೆ ಬಿಡುಗಡೆ ಮಾಡಬೇಕು. ನಾವು ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಅದು ಪಬ್ಲಿಕ್ ಡೊಮೈನ್‌ನಲ್ಲೇ ಇದೆ ಎಂದರು.
Published by:Kavya V
First published: