Man Kidnapped by Friends: ಹಣ ಇದೆ ಅಂತ ಹೇಳಿದ್ದೇ ತಪ್ಪಾಯ್ತು, ಸ್ನೇಹಿತರಿಂದಲೇ ಕಿಡ್ನ್ಯಾಪ್​​!

ರಾಘವೇಂದ್ರನ ಲಾಭದ ವಿಚಾರ ತಿಳಿದ ಕಿರಣ್ ಮತ್ತು ಸುರೇಶ್ ಆತನನ್ನ ಕಿಡ್ನಾಪ್ ಮಾಡಲು ಮೂವರು ವ್ಯಕ್ತಿಗಳಿಗೆ ಸುಪಾರಿ ನೀಡಿದ್ದರಂತೆ. ಪ್ಲಾನ್ ನಂತೆ ಇತ್ತೀಚಿಗೆ ರಾಘವೇಂದ್ರನನ್ನ ಕಿಡ್ನಾಪ್ ಮಾಡಿದ ಅಸಾಮಿಗಳು ಬಿಡದಿಯ ಲಾಡ್ಜ್ ವೊಂದರಲ್ಲಿ ಕೂಡಿಟ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಯಶವಂತಪುರ ಠಾಣೆ

ಯಶವಂತಪುರ ಠಾಣೆ

  • Share this:
ಬೆಂಗಳೂರು:  ದಿನೇ ದಿನೇ ಸ್ನೇಹ ಅನ್ನೋ ಪದಕ್ಕೆ ಬೆಲೆಯೆ ಇಲ್ಲದಂತಾಗ್ತಿದೆ. ದೋಸ್ತ್ ಗಳು ಅಂತ ಪ್ರತಿ ನಿತ್ಯ ಜೊತೆಯಲ್ಲಿದ್ದು ಉಂಡು ತಿಂದವರೆ ಬೆನ್ನಿಗೆ ಚೂರಿ ಹಾಕಿ ಜೊತೆಗಾರನನ್ನೇ ಕಿಡ್ನಾಪ್ ಮಾಡಿದ್ದಾರೆ. ನಗರದ ಯಶವಂತಪುರ ಮೂಲದ ರಾಘವೇಂದ್ರ ಎಂಬಾತನನ್ನ ಆತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರೇ ಕಿಡ್ನಾಪ್ ಮಾಡಿ ಈಗ ಜೈಲು ಸೇರಿದ್ದಾರೆ. ರಾಘವೇಂದ್ರ ತನ್ನ ಸ್ನೇಹಿತರಾದ ಕಿರಣ್ ಮತ್ತು ಸುರೇಶ್ ಅವರೊಂದಿಗೆ ವ್ಯವಹಾರ ನಡೆಸ್ತಿದ್ದರಂತೆ. ಕಳೆದ ತಿಂಗಳು ರಾಘವೇಂದ್ರನಿಗೆ ಒಳ್ಳೆಯ ಆದಾಯ ಬಂದಿದ್ದು ಈ ವಿಚಾರವನ್ನ ತನ್ನ ಇಬ್ಬರು ಸ್ನೇಹಿತರಿಗೆ ಹೇಳಿಕೊಂಡಿದ್ದನಂತೆ.

ರಾಘವೇಂದ್ರನ ಲಾಭದ ವಿಚಾರ ತಿಳಿದ ಕಿರಣ್ ಮತ್ತು ಸುರೇಶ್ ಆತನನ್ನ ಕಿಡ್ನಾಪ್ ಮಾಡಲು ಮೂವರು ವ್ಯಕ್ತಿಗಳಿಗೆ ಸುಪಾರಿ ನೀಡಿದ್ದರಂತೆ. ಪ್ಲಾನ್ ನಂತೆ ಇತ್ತೀಚಿಗೆ ರಾಘವೇಂದ್ರನನ್ನ ಕಿಡ್ನಾಪ್ ಮಾಡಿದ ಅಸಾಮಿಗಳು ಬಿಡದಿಯ ಲಾಡ್ಜ್ ವೊಂದರಲ್ಲಿ ಕೂಡಿಟ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಿಡ್ನಾಪ್ ಬಗ್ಗೆ ರಾಘವೇಂದ್ರನ ಕಡೆಯವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಕಿರಣ್, ಸುರೇಶ್ ಸೇರಿ ಆರು ಜನರನ್ನ ಬಂಧಿಸಿದ್ದಾರೆ.

ಇನ್ನೂ ಆರೋಪಿಗಳನ್ನ ಬಂಧಿಸಿ ವಿಚಾರಣೆ ವೇಳೆ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಆರೋಪಿಗಳು ವಯೋಸಹಜ ಖಾಯಿಲೆಯಿಂದ ಬಳಲುವ ವೃದ್ಧರನ್ನ ಟಾರ್ಗೆಟ್ ಮಾಡಿದ್ದು, ಪಾರ್ಕ್ ಮತ್ತು  ವಾಕಿಂಗ್ ಸ್ಥಳಗಳಲ್ಲಿ ವೃದ್ಧರ ನಂಬರ್ ಕಲೆಕ್ಟ್ ಮಾಡುತ್ತಿದ್ದರಂತೆ. ಬಳಿಕ ಪೋನ್ ನಂಬರ್ ಗಳನ್ನ ಕೆಲವು ವ್ಯಕ್ತಿಗಳಿಗೆ ನೀಡಿ, ಪ್ರತಿ ನಂಬರಿಗೆ 50 ರಿಂದ 100 ರೂ ಪಡೆಯುತ್ತಿದ್ದರಂತೆ. ಆ ಬಳಿಕ ಪೋನ್ ಮೂಲಕ ವೃದ್ಧರನ್ನ ಸಂಪರ್ಕಿಸಿ ಖಾಯಿಲೆಗೆ ಔಷಧಿ ನೀಡುವ ಹೆಸರಿನಲ್ಲಿ ಹಣ ಪಡೆದು ನಕಲಿ ಔಷಧಿ ನೀಡಿ ವಂಚಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: chikmagalur suicide case: ಕಾರಿನ ಸಮೇತ ನಾಲೆಗೆ ಹಾರಿ ಆತ್ಮಹತ್ಯೆ: ಅಳಿಯ-ಅತ್ತೆ ಸಾವು, ಮಗಳು-ಮೊಮ್ಮಗ ಪಾರು

ಪಾರ್ಕ್, ರಸ್ತೆ ಸೇರಿ ವಾಕಿಂಗ್ ಮಾಡುವ ಹಿರಿಯ ನಾಗರೀಕರನ್ನ ಪತ್ತೆ ಹಚ್ಚಿ ವಯೋ ಸಹಜ ಖಾಯಿಲೆ ಮತ್ತು ನೋವುಗಳಿಗೆ ಸಂಬಂಧಿಸಿದ ಔಷಧಿ ಕೊಡುವುದಾಗಿ ನಂಬಿಸುತ್ತಿದ್ದರಂತೆ. ಬಳಿಕ ವೃದ್ದರ ಬಳಿ‌ ಎಷ್ಟು ಸಾಧ್ಯನೋ ಅಷ್ಟು ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ನಗರದಲ್ಲಿ ಹೀಗೆ ನಿತ್ಯ ಹಲವಾರು ಮಂದಿಗೆ ಎಮಾರಿಸಿರೋ ಅಸಾಮಿಗಳು ಪ್ರತಿ ತಿಂಗಳು ಇಂತಿಷ್ಟು ನಂಬರ್ ಕಲೆಕ್ಟ್ ಮಾಡಿ ಹಣ ಮಾಡುತ್ತಿದ್ದರಂತೆ. ಸದ್ಯ ಆರೋಪಿಗಳ ವಂಚನೆ ಜಾಲವನ್ನ ಯಶವಂತಪುರ ಪೊಲೀಸರು ಪತ್ತೆ ಹಚ್ಚಿ ಆ ಬಗ್ಗೆಯೂ ಕೂಲಂಕುಷವಾಗಿ ತನಿಖೆ ಕೈಗೊಂಡಿದ್ದಾರೆ. ಇದರ ಹಿಂದೆ ಇರುವ ಕಾಣದ ಕೈಗಳನ್ನ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದು, ಕಿಡ್ನಾಪ್ ಕೇಸ್ ನಿಂದಾಗಿ ಮಹಾ ವಂಚನೆಯ ಮತ್ತೊಂದು ಜಾಲ ಖಾಕಿ ಬಲೆಗೆ ಬಿದ್ದಿದೆ.

ಸದ್ಯ ಯಶವಂತಪುರ ಪೊಲೀಸರು ಬಿಡದಿ ಹಾಗೂ ತಮಿಳುನಾಡಿನಲ್ಲಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ವೃದ್ಧರನ್ನ ವಂಚಿಸುತ್ತಿದ್ದ ಜಾಲ ಬೆಳಕಿಗೆ ಬಂದಿದ್ದು ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: