ಬೆಂಗಳೂರು: ಅವರದ್ದು ಮುದ್ದಾದ ಕುಟುಂಬ. ಗಂಡ-ಹೆಂಡತಿ, ಮಗು ಚಿಕ್ಕದಾದ ಚೊಕ್ಕದಾದ ಕುಟುಂಬ. ಅನ್ನಪೂರ್ಣೇಶ್ವರಿ ನಗರದ ನಿವಾಸಿ ಕಾತರಾಜು ಹಾಗೂ ಆತನ ಪತ್ನಿ ರೂಪ ದಾಂಪತ್ಯ ಚನ್ನಾಗಿಯೇ ಇತ್ತು. ಆದರೆ 2 ದಿನಗಳ ಹಿಂದೆ ಅವರ ದಾಂಪತ್ಯ ರಕ್ತಸಿಕ್ತವಾಗಿದೆ. ತಾಯಿ ಕೊಲೆಯಾದರೆ, ತಂದೆ ಪೊಲೀಸರ ಅತಿಥಿಯಾಗಿದ್ದಾರೆ. ಏನೂ ಅರಿಯದ ಮಗು ಹೆತ್ತವರಿಂದ ದೂರವಾಗಿದೆ. ಎಲ್ಲವೂ ಚನ್ನಾಗಿದ್ದ ಕುಟುಂಬಕ್ಕೆ ಅನುಮಾನವೆಂಬುವುದು ವಿಲನ್ನಂತೆ ಎಂಟ್ರಿ ಕೊಟ್ಟಿತ್ತು. ಹೆಂಡತಿ ರೂಪಾ ಮೇಲೆ ಕಾಂತರಾಜುಗೆ ಅನುಮಾನ ಶುರುವಾಗಿತ್ತು. ಅಲ್ಲಿಂದ ನಡೆದಿದ್ದೆಲ್ಲವೂ ಅನಾಹುತಗಳೇ..
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮಾದರಿ ಕೊಲೆಗೆ ಸ್ಕೆಚ್
ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಹುಳು ಗಂಡನ ತಲೆಯಲ್ಲಿ ಕೊರೆಯಲು ಆರಂಭವಾಯಿತು. ಇದರಿಂದ ತೀವ್ರ ಖಿನ್ನೆತೆಗೆ ಒಳಾಗಾಗಿದ್ದ ಪತಿ ಕಾಂತರಾಜ್ ಕೊನೆಗೆ ಪತ್ನಿಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ತಂದು ಬಿಟ್ಟಿದ್ದ. ಹೇಗೆ ಕೊಲೆ ಮಾಡಬೇಕು ಅಂತ ಪ್ಲಾನ್ ಕೂಡ ಮಾಡಿದ್ದ. ಥೇಟ್ ಕನ್ನಡ ಸಿನಿಮಾ ಬಾ ನಲ್ಲೆ ಮಧುಚಂದ್ರಕೆ(kannada movie baa nalle madhuchandrake ) ಮಾದರಿ ಸ್ಕೆಚ್ ಹಾಕಿದ್ದ. ಪ್ರವಾಸಕ್ಕೆ ಕರೆದೊಯ್ದು ಎತ್ತರದಿಂದ ತಳ್ಳಿ ಪತ್ನಿಯನ್ನು ಕೊಲೆ ಮಾಡಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯೋಚಿಸಿದ್ದ.
2 ಬಾರಿ ಯತ್ನಿಸಿದ್ರು ಕೊಲೆ ಮಾಡಲಾಗಲಿಲ್ಲ..!
ತನ್ನ ಪ್ಲಾನ್ ಪ್ರಕಾರ ಟ್ರಿಪ್ಗೆ ಹೋಗೋಣ ಅಂತ ಪತ್ನಿಯೊಂದಿಗೆ ಕರಾವಳಿ ಭಾಗಕ್ಕೆ ತೆರಳಿದ್ದ. ಗಂಡನ ಜೊತೆ ಪ್ರವಾಸಕ್ಕೆ ಸಂತೋಷದಿಂದಲೇ ರೂಪಾ ಹೊರಟ್ಟಿದ್ದರು. ಟ್ರಿಪ್ ವೇಳೆ ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿ ಕೆಳಗೆ ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ ಗಂಡ. ಮೂರು ದಿನ ಕೊಲೆ ಮಾಡೋಕೆ ಟ್ರೈ ಮಾಡಿದ್ರು ಪ್ಲಾನ್ ಸಕ್ಸಸ್ ಆಗಿಲ್ಲ. ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡೊ ಪ್ಲಾನ್ ಕೂಡ ಸಫಲವಾಗಲಿಲ್ಲ. ಈ ಎರಡು ಪ್ಲಾನ್ಗಳಲ್ಲೂ ಪತ್ನಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಳು.
ಟ್ರಿಪ್ನಿಂದ ಬಂದಿದ್ದೇ ಮನೆಯಲ್ಲೇ ಕೊಲೆ..!
ಪ್ರವಾಸ ಮುಗಿಸಿ ಪತ್ನಿಯೊಂದಿಗೆ ಮನೆಗೆ ಬಂದ ಕಾಂತರಾಜುವಿನ ಕೋಪ ನೆತ್ತಿಗೇರಿತ್ತು. ಕೊಲೆ ಪ್ಲಾನ್ ಸಕ್ಸಸ್ ಆಗಲಿಲ್ಲ ಅಂತ ವ್ಯಗ್ರಗೊಂಡಿದ್ದ. ಇದೇ ಕೋಪದಲ್ಲಿ ಮನೆಗೆ ಬಂದು ಪತ್ನಿ ರೂಪಾನ ಚಾಕುವಿನಿಂದ ಇರಿದು ಕೊಲೆ ಮಾಡಿಯೇ ಬಿಟ್ಟ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಸೆಪ್ಟೆಂಬರ್ 22 ರಂದು ಕೊಲೆ ಮಾಡಲಾಗಿದೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಕಾಂತರಾಜು ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಎಪಿ ನಗರ ಠಾಣೆ ಪೊಲೀಸರಿಗೆ ವಿಚಾರಣೆ ವೇಳೆ ಕೊಲೆ ರಹಸ್ಯದ ಸುಳಿವು ಸಿಕ್ಕಿತ್ತು.
ಬೆಂಗಳೂರಲ್ಲಿ ಕೊಲೆ, ಹಾಸನದಲ್ಲಿ ಚಾಕು..!
ಕೊಲೆ ಮಾಡಿ ಚಾಕುವನ್ನ ಹಾಸನದಲ್ಲಿ ಎಸೆದು ಬಂದಿದ್ದ ಆರೋಪಿ ಕಾಂತರಾಜು. ಕೊಲೆ ಮಾಡಿದ ಕೊಡಲೇ ಚಾಕು ತೆಗೆದುಕೊಂಡು ಹಾಸನಕ್ಕೆ ತೆರಳಿದ್ದ, ಕೃತ್ಯಕ್ಕೆ ಬಳಸಿದ ಚಾಕು ಸಿಗಬಾರದು ಎಂಬ ಕಾರಣಕ್ಕೆ ಹಾಸನಕ್ಕೆ ಹೋಗಿ ಚಾಕು ಎಸೆದಿದ್ದ. ಈ ಹಿಂದೆ ಕೊಲೆ ಕೇಸಲ್ಲಿ ಜೈಲಿಗೆ ಹೋಗಿದ್ದಾಗ ಈ ವಿಷಯ ತಿಳಿದುಕೊಂಡಿದ್ದ. ಕೃತ್ಯಕ್ಕೆ ಬಳಸಿದ ಆಯುಧ ಸಿಗಲಿಲ್ಲ ಎಂದ್ರೆ ಕೇಸ್ ಖುಲಾಸೆಯಾಗುತ್ತೆ ಎಂದು ಈ ರೀತಿ ಚಾಕು ಎಸೆದು ಪುನಃ ನಗರಕ್ಕೆ ಬಂದಿದ್ದ.
ಇದನ್ನೂ ಓದಿ: Man Sets Wifes Lover Ablaze: ಹೆಂಡತಿ ಜೊತೆ ಅಕ್ರಮ ಸಂಬಂಧ; ರೊಚ್ಚಿಗೆದ್ದು ಲವರ್ಗೆ ಗತಿ ಕಾಣಿಸಿದ ಗಂಡ!
ಆದರೆ ಕಾಂತರಾಜುನ ಬುದ್ಧಿವಂತಿಕೆ ಬೇಧಿಸಲು ಪೊಲೀಸರಿಗೆ ಹೆಚ್ಚು ಸಮಯ ಹಿಡಿದಿಲ್ಲ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಇದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ಕೊಲೆಗೆ ಬಳಸಿದ ಚಾಕು ರಿಕವರಿ ಮಾಡಲು ಹಾಸನಕ್ಕೆ ಕರೆದೊಯ್ಯಲಾಗಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ