ಬಾಂಗ್ಲಾ ಯುವತಿ ಗ್ಯಾಂಗ್​​ರೇಪ್​​ ಕೇಸ್: ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಿರುವ NIA

ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು. ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು.

ಆರೋಪಿಗಳು

ಆರೋಪಿಗಳು

  • Share this:
ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಆತ್ಯಾಚಾರ ಪ್ರಕರಣ ಸಂಬಂಧ ಎನ್ಐಎ ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದೆ. ಬಾಡಿ ವಾರೆಂಟ್ ಮೇರೆಗೆ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಎನ್ಐಎ ವಶಕ್ಕೆ ಪಡೆದುಕೊಳ್ಳಲಿದೆ. ಮೇ 27ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗ್ಯಾಂಗ್​ ರೇಪ್​​ ಪ್ರಕರಣದಲ್ಲಿ 10 ಆರೋಪಿಗಳನ್ನ ಬಂಧಿಸಿಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು. ಆರೋಪಿಗಳ ವಶದಲ್ಲಿದ್ದ 7 ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು.

ನಕಲಿ ಭಾರತೀಯ ದಾಖಲೆಗಳ ಸಹಿತ ಯುವತಿಯರನ್ನ ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣ ಹೆಣ್ಣೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವತಿಯರನ್ನ ಬೆಂಗಳೂರಿಗೆ ಕರೆತಂದಿದ್ದ ಹಿನ್ನೆಲೆ ಎನ್ಐಎ ಅಧಿಕೃತವಾಗಿ ಎಫ್ಐಆರ್ ದಾಖಲಿಸಿಕೊಂಡಿದೆ.

ಆರೋಪಿಗಳ ಪೋನ್ ನ ಟೆಕ್ನಿಕಲ್ ಎವಿಡೆನ್ಸ್, ಅರೋಪಿಗಳ‌ ಮೊಬೈಲ್ ನಲ್ಲಿ ಸೆರೆಯಾಗಿರುವ ಡಿಜಿಟಲ್ ಎವಿಡೆನ್ಸ್, ಸ್ಥಳದ ಸಾಕ್ಷಿಗಳು FSL ಟೀಂ ನಿಂದ ಸಂಗ್ರಹ ಮಾಡಿ ಆರೋಪಿಗಳ ಡಿಎನ್ಎ ಸ್ಯಾಂಪಲ್ ಪಡೆದು ರವಾನೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಎಲ್ಲಾ ಆರೋಪಿಗಳ ಮೊಬೈಲ್ ಸೀಜ್ ಮಾಡಲಾಗಿದೆ. ಅವರ ಮೊಬೈಲ್ ನ ಡಿಜಿಟಲ್ ಎವಿಡೆನ್ಸ್ ರಿಪೋರ್ಟ್ ಬರಬೇಕಿದೆ. ಪೊಲೀಸರು ಆರೋಪಿಗಳ ವಾಯ್ಸ್ ಸ್ಯಾಂಪಲ್ ಸಹ ಪಡೆದಿದ್ದಾರೆ.

ಇದನ್ನೂ ಓದಿ: ಮದುವೆಯ ಬಳಿಕವೂ ಹಳೆ ಪ್ರೇಮಿಗಳ ಸರಸ.. ಗಂಡ-ತಂದೆಯ ಕೋಪಾಗ್ನಿಯಲ್ಲಿ ಬೆಂದ ಪ್ರಿಯಕರ!

ಪ್ರಮುಖ ಆರೋಪಿಗಳು ಯುವತಿಯರನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಅವರಲ್ಲಿ ಸಂತ್ರಸ್ತೆ ತಪ್ಪಿಸಿಕೊಂಡಿದ್ದರು. ಅಲ್ಲದೇ ದಂಧೆಯಿಂದ 4 ಮಂದಿ ಯುವತಿಯರನ್ನು ದೂರ ಮಾಡಿದ್ದಳು. ಇದರಿಂದ ಯುವತಿಯರ ಮೇಲೆ ಏಳು ಲಕ್ಷ ಬಂಡವಾಳದ ಹಣ ಲಾಸ್ ಆಗಿತ್ತು. ಈ ವಿಷಯಕ್ಕೆ ಇಡೀ ಘಟನೆ ನಡೆದಿರುವುದಾಗಿ ತನಿಖೆಯಲ್ಲಿ ಪತ್ತೆ ಆಗಿದೆ. ಚಾರ್ಜ್ ಶೀಟ್ ನಲ್ಲಿ ಈ ಅಂಶಗಳನ್ನು ಪೊಲೀಸರು ಹೇಳಲಿದ್ದಾರೆ ಎಂದು ಪೊಲೀಸ್ ತನಿಖಾ ಮೂಲಗಳ ಮಾಹಿತಿ ಸಿಕ್ಕಿದೆ.

ಹಣಕಾಸಿನ ವಿಚಾರಕ್ಕಾಗಿಯೇ ದೌರ್ಜನ್ಯ ಮಾಡಲಾಗಿದೆ ಎಂದು ಸಂತ್ರಸ್ತ ಯುವತಿ (28 ವರ್ಷ) ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಘಟನೆ ನಡೆದ ಸಂದರ್ಭದಲ್ಲಿ ಓರ್ವ ಯುವತಿ ಸಹ ಇದ್ದಳು ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಳೆ. ಸಂತ್ರಸ್ತೆಯ ಹೇಳಿಕೆ ಪಡೆದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ಹಾಗೂ ಇತರೆ ಆರೊಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಯುವತಿ ತನ್ನ ಬಾಯ್​ಫ್ರೆಂಡ್​ ಜೊತೆ ಎಲ್ಲವನ್ನೂ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆಗ ಆತ ನೀನು ಬೆಂಗಳೂರಿನಲ್ಲಿ ಇರುವುದು ಬೇಡ, ಕೇರಳಕ್ಕೆ ಬಾ ಎಂದು ಹೇಳಿದ್ದನು. ಹೀಗಾಗಿ ಘಟನೆ ನಡೆದ ಮರುದಿನವೇ ಯುವತಿ ಕೇರಳಕ್ಕೆ ತೆರಳಿದ್ದಳು. ಬಳಿಕ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ ಕೇರಳದಿಂದ ಬೆಂಗಳೂರಿಗೆ ಕರೆತಂದಿದ್ದರು.
Published by:Kavya V
First published: