Banashankari Women Murder Twist: 17 ವರ್ಷದ ಬಾಲಕನೊಂದಿಗೆ ಲವ್ವಿಡವ್ವಿ; ಆಂಟಿ ಪ್ರೀತ್ಸೆ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ!

ರಕ್ತ ಸಿಕ್ತವಾದ ಬಟ್ಟೆಯನ್ನ ಬದಲಿಸಿದ್ದ ಆರೋಪಿ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಹೋಗಿದ್ದಾನೆ.  ಪ್ರಕರಣ ದಾಖಲಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಪೋನ್ ಕರೆಗಳನ್ನು ಪರಿಶೀಲನೆ ನಡೆಸಿ ಅಪ್ರಾಪ್ತ ಬಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ಕೊಲೆಯಾದ ಆಪ್ರೀನ್ ಖಾನಂ ಹಾಗೂ ಕೊಲೆ ನಡೆದ ಜಾಗ

ಕೊಲೆಯಾದ ಆಪ್ರೀನ್ ಖಾನಂ ಹಾಗೂ ಕೊಲೆ ನಡೆದ ಜಾಗ

  • Share this:
    bangalore crime news: ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ (yarab nagar) ಗೃಹಿಣಿಯೊಬ್ಬರು ಅವರ ಮನೆಯಲ್ಲಿಯೇ ಬರ್ಬರವಾಗಿ ಕೊಲೆಯಾಗಿದ್ದರು. (brutal murder). ಮೃತ ಮಹಿಳೆಯನ್ನು ಆಪ್ರೀನ್ ಖಾನಂ(28) ಎಂದು ಗುರುತಿಸಲಾಗಿದೆ. ಕೊಲೆಗಾರ ಚೂಪಾದ ಕಂಬಿಯಿಂದ ಹತ್ಯೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ. ರಾತ್ರಿ ಆಪ್ರೀನ್ ಗಂಡ ಮನೆಗೆ ಬಂದಾಗ ಕೊಲೆ ಬಗ್ಗೆ ಗೊತ್ತಾಗಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.

    ಕೊಲೆಯಾದ ಆಪ್ರೀನ್ ಹಾಗೂ ಪತಿ ಲಾಲು ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಬ್ಬರಿಗೆ 6 ವರ್ಷ ಮಗ ಹಾಗೂ 4 ವರ್ಷದ ಮಗಳಿದ್ದಾರೆ. ಪತಿ ಟಿಂಬರ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ವೇಳೆ ಮನೆಯಲ್ಲಿರಲಿಲ್ಲ. ಈ ಸಮಯದಲ್ಲಿ ಪರಿಚಿತ ವ್ಯಕ್ತಿ ಮನೆಗೆ ಬಂದು ಹತ್ಯೆ ಮಾಡಿ ಬೀಗ ಹಾಕಿಕೊಂಡು ಹೋಗಿದ್ದಾನೆ ಎಂದು ಪತಿ ಆರೋಪಿಸಿದ್ದರು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕೊಲೆಗೆ ಕಾರಣನಾದ ಆರೋಪಿಯನ್ನು ಪತ್ತೆ ಮಾಡಿದ್ದಾರೆ.

    ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್

    ಆಪ್ರೀನ್ ಖಾನಂ ಕೊಲೆ ಪ್ರಕರಣಕ್ಕೆ ಇದೀಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಆಪ್ರೀನ್ ಕೊಲೆಗೆ ಆತನ ಪ್ರಿಯಕರ ಅಪ್ರಾಪ್ತ ಬಾಲಕನೇ ಕಾರಣ ಎಂಬುದು ತನಿಖೆ ವೇಳೆ ಕಂಡುಬಂದಿದೆ. ಮೃತ ಅಫ್ರೀನ್ ಖಾನಂ ಜೊತೆ 17 ವರ್ಷದ ಅಪ್ರಾಪ್ತ ಬಾಲಕ ಅನೈತಿಕ ಸಂಬಂಧ ಇರಿಸಿಕೊಂಡಿದ್ದನಂತೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಷ್ಟಕ್ಕೂ ಆ ಬಾಲಕ ಬೇರೆ ಯಾರು ಅಲ್ಲ ಕೊಲೆಯಾದ ಆಪ್ರೀನ್ ಖಾನಂಳ ಅಕ್ಕನ ಮಗನೇ ಆಗಿದ್ದಾನೆ.

    ಓಡಿಹೋಗಲು ಪ್ಲಾನ್​ ಮಾಡಿದ್ದ ಮಹಿಳೆ

    ಹೆಂಡತಿ ಆಗಾಗ್ಗೆ ಯಾರೊಂದಿಗೊ ಫೋನ್​ ಮಾಡುವುದು, ಮೆಸೇಜ್ ಮಾಡುವುದು ಗಂಡನ ಗಮನಕ್ಕೂ ಬಂದಿತ್ತು. ಇದೇ ವಿಷಯವಾಗಿ ಲಾಲು ಹೆಂಡತಿಯೊಂದಿಗೆ ಜಗಳ ಕೂಡ ಆಡುತ್ತಿದ್ದರಂತೆ. ಆದರೆ, ಅಕ್ಕನ ಮಗನೇ ಪತ್ನಿಯ ಜೊತೆ ಲವ್ ಮಾಡುವುದು ಎಂಬುದು ಗೊತ್ತಿರಲಿಲ್ಲ. ಇದೇ ವಿಷಯವಾಗಿ ನಿನ್ನೆ ಬೆಳಗ್ಗೆ ಸಹ ಗಂಡ- ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಮಾಡಿಕೊಂಡ ಬಳಿಕ ಹದಿನೇಳು ವರ್ಷದ ಅಪ್ರಾಪ್ತ ಬಾಲಕನ ಜೊತೆ ಓಡಿಹೋಗಲು ಆಪ್ರೀನ್ ಖಾನಂ ಪ್ಲಾನ್ ಮಾಡಿದ್ದರಂತೆ. ನೆನ್ನೆ ಮಕ್ಕಳನ್ನ ಅಮ್ಮನ ಮನೆಗೆ ಕಳಿಸಿ ಪ್ರಿಯಕರನನ್ನು ಕರೆಸಿಕೊಂಡಿದ್ದಳು. ಇದೇ ವೇಳೆ ಇಬ್ಬರೂ ಎಲ್ಲಾದರೂ ಹೋಗೋಣ ಎಂದು ಆಪ್ರೀನ್ ಖಾನ್ ಪಟ್ಟು ಹಿಡಿದಿದ್ದಾಳೆ.

    ಇದನ್ನು ಓದಿ: Banashankari Murder Case: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

    ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕ ಈಗ ಓಡಿ ಹೋದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ, ಬೇಡವೆಂದು ಹೇಳಿದ್ದ. ಇಷ್ಟಾದರೂ ಬಾಲಕನನ್ನು ಮಹಿಳೆ ಪೀಡಿಸಿದ್ದಳಂತೆ. ಅಲ್ಲದೇ ಬ್ಲಾಕ್ ಮೇಲ್ ಸಹ ಮಾಡಿದ್ದಳಂತೆ. ಇದರಿಂದ ಕೋಪಗೊಂಡ ಬಾಲಕ ಮನೆಯಲ್ಲಿ ಚಾಕು ತೆಗೆದುಕೊಂಡು ಮನಬಂದತೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಬೆಡ್ ಪಕ್ಕದಲ್ಲಿದ್ದ ಕತ್ತರಿ ತೆಗೆದುಕೊಂಡು ಆಪ್ರೀನ್ ಖಾನಂ ಕತ್ತಿಗೆ ತಿವಿದಿದ್ದಾನೆ.  ಬಳಿಕ ಗ್ಯಾಸ್ ಹಚ್ಚಿ ಬಟ್ಟೆಗೆ ಬೆಂಕಿ ತಗುಲಿಸಿ ದೇಹದ ಮೇಲೆ ಬಿಸಾಡಿದ್ದ. ಆನಂತರ ರಕ್ತ ಸಿಕ್ತವಾದ ಬಟ್ಟೆಯನ್ನ ಬದಲಿಸಿದ್ದ ಆರೋಪಿ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಹೋಗಿದ್ದಾನೆ.  ಪ್ರಕರಣ ದಾಖಲಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಪೋನ್ ಕರೆಗಳನ್ನು ಪರಿಶೀಲನೆ ನಡೆಸಿ ಅಪ್ರಾಪ್ತ ಬಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.
    Published by:HR Ramesh
    First published: