Drug Peddler Arrested: 6 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್‌ ಡ್ರಗ್​​ ಪೆಡ್ಲರ್!

ಆರೋಪಿಗೆ ಇಬ್ಬರು ಮಡದಿಯರು ಮತ್ತು ಏಳು ಜನ ಮಕ್ಕಳಿದ್ದು, ಒಬ್ಬಾಕೆ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಬಂಧನ

ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಬಂಧನ

  • Share this:
ಆತ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ರೌಡಿ. ಆತನಿಗಾಗಿ ಕಳೆದ ಆರು ವರ್ಷಗಳಿಂದ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹುಡುಕಾಟ ನಡೆಸಿದ್ದರೂ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದೀಗ ನಟೋರಿಯಸ್ ಅಸಾಮಿ ಅಚಾನಕ್ ಆಗಿ ಖಾಕಿ ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಪೊಲೀಸರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿದ್ದ ನಟೋರಿಯಸ್ ರೌಡಿಯೊಬ್ಬನನ್ನ ಖಾಕಿ ಪಡೆ ಬಂಧಿಸಿದ್ದಾರೆ. ಮೋಸ್ಟ್ ವಾಂಟೆಡ್‌ ರೌಡಿಯಾಗಿದ್ದ ಅಸಾಮಿ ಗಾಂಜಾ ಪೆಡ್ಲಿಂಗ್ ಮಾಡೋದರಲ್ಲಿ ನಿಸ್ಸೀಮನಾಗಿದ್ದ. ಕಳೆದ ಆರೇಳು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೇರಚಿ ಎಸ್ಕೇಪ್ ಆಗ್ತಿದ್ದ ಆತನನ್ನ ಪೊಲೀಸರು ತಮ್ಮ ಖೆಡ್ಡಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೇ ಆ ಗಾಂಜಾ ಡೀಲಿಂಗ್ ಮಾಸ್ಟರ್ ಮ್ಯಾನ್  ಹೆಸರು ಹಮೀದ್.

ಬೆಂಗಳೂರಿನ ಉಲ್ಲಾಳ ಉಪನಗರ ನಿವಾಸಿಯಾದ ಈತನ ಕಸುಬು ಗಾಂಜಾ ಮಾರಾಟ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗೆ ಗಾಂಜಾ ಸಫ್ಲೈ ಮಾಡೋದರಲ್ಲಿ ಆರೋಪಿ ಎತ್ತಿದ ಕೈ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಮೂಟೆಗಟ್ಟಲೆ ಗಾಂಜಾ ತರಿಸುತ್ತಿದ್ದ ಅಸಾಮಿ ಅದನ್ನ ತನ್ನ ನೆಟ್ವರ್ಕ್ ಮೂಲಕ ಎಲ್ಲೆಡೆ ಸಪ್ಲೈ ಮಾಡಿ ಹಣ ಮಾಡ್ತಿದ್ದನಂತೆ. ಇಂತಹ ನಟೋರಿಯಸ್ ಗಾಂಜಾ ಪೆಡ್ಲರ್ ಗಾಗಿ ಬೆಂಗಳೂರು ಪೊಲೀಸರು ಸೇರಿ ಆರು ರಾಜ್ಯಗಳ ಪೊಲೀಸರು ತೀವ್ರ ಶೋಧ ನಡೆಸ್ತಿದ್ದರಂತೆ. ಪೊಲೀಸರು ಎಷ್ಟೇ ಹುಡುಕಾಟ ನಡೆಸಿದ್ರು, ಆರೋಪಿ ಹಮೀದ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ 2013 ರಿಂದ ನಾಪತ್ತೆಯಾಗಿದ್ದನಂತೆ.

ಬೆಂಗಳೂರು ಪೊಲೀಸರು ಈತನ ಪತ್ತೆಗಾಗಿ ಎಸಿಪಿ ನೇತೃತ್ವದ ತಂಡ ರಚನೆ ಮಾಡಿ ಹಗಲಿರುಳು ಕಾರ್ಯಾಚರಣೆ ನಡೆಸಿದ್ದಾರೆ. ಕೆಂಗೇರಿ ಗೇಟ್ ಎಸಿಪಿ ಕೃಷ್ಣಕುಮಾರ್, ಇನ್ಸ್‌ಪೆಕ್ಟರ್ ಗಳಾದ ಲಕ್ಷ್ಮಣ ನಾಯಕ್ ಮತ್ತು ಲೋಹೀತ್ ನೇತೃತ್ವದ ತಂಡ ತೀವ್ರ ನಿಗಾವಹಿಸಿದ್ದು, ಆರೋಪಿ ಹಮೀದ್ ಹಾಗೂ ಆತನ ತಮ್ಮನನ್ನ ಪೊಲೀಸರು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಮೀದ್ ಇತ್ತೀಚಿಗೆ ಉಲ್ಲಾಳದ ತನ್ನ ಮನೆಗೆ ಬಂದಿದ್ದು, ಈ ವೇಳೆ ಆತನ ಮೇಲೆ ನಿಗಾ ವಹಿಸಿದ ಖಾಕಿ ಪಡೆ ಕೂಡಲೇ ಖೆಡ್ಡಕ್ಕೆ ಬೀಳಿಸಿದ್ದಾರೆ. ಆರೋಪಿಯನ್ನ ಬಂಧಿಸಿದ ಪೊಲೀಸರ ವಿಶೇಷ ತಂಡ ತೀವ್ರ ವಿಚಾರಣೆ ನಡೆಸಿದ್ದು ಈ ವೇಳೆ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿ ಹಮೀದ್ ಈ ಮೊದಲು ಉಲ್ಲಾಳದಲ್ಲಿ ಶೆಡ್ ರೀತಿಯ ಮನೆಯಲ್ಲಿ ವಾಸವಾಗಿದ್ದನಂತೆ. ಅದ್ರೆ ಕಳೆದ ಒಂದು ವರ್ಷದ ನಂತರ ನಾಲ್ಕು ಅಂತಸ್ತಿನ ಮನೆ ಕಟ್ಟಲು ಮುಂದಾಗಿದ್ದಾನೆ‌. ಇದನ್ನ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ವೇಳೆ ಗಾಂಜಾ ಮಾರಾಟ ಮಾಡಿ ಗಳಿಸಿದ ಹಣದಿಂದ ಮನೆ ಕಟ್ಟಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: Man Stabs widow Girlfriend: ವಿಧವೆ ಮೇಲೆ ವಿವಾಹಿತನ ಮೋಹ; 2ನೇ ಮದುವೆಗೆ ಒಪ್ಪದಿದ್ದಕ್ಕೆ 17 ಬಾರಿ ಇರಿದೇ ಬಿಟ್ಟ!

ಇನ್ನೂ ಆರೋಪಿಗೆ ಇಬ್ಬರು ಮಡದಿಯರು ಮತ್ತು ಏಳು ಜನ ಮಕ್ಕಳಿದ್ದು, ಒಬ್ಬಾಕೆ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.   ಆರು ರಾಜ್ಯಗಳಲ್ಲಿ ಗಾಂಜಾ ಡೀಲ್ ನಡೆಸುತ್ತಿದ್ದ ಹಮೀದ್ ಹೆಚ್ಚಾಗಿ ಹೈದರಾಬಾದ್ ನಲ್ಲಿ ನೆಲೆಸ್ತಿದ್ದನಂತೆ. ಸದ್ಯ ಆರೋಪಿ ಹಮೀದ್ 15ಕ್ಕು ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: