ದೇಶದಲ್ಲಿ ಸಂಚಲನ ಮೂಡಿಸಿದ್ದ ಯುವತಿ ಅತ್ಯಾಚಾರ ವಿಡಿಯೋ ಆರೋಪಿಗಳ ಬಂಧಿಸಿದ ಬೆಂಗಳೂರು ಪೊಲೀಸರು

ಹಣಕಾಸಿನ ವ್ಯವಹಾರ ಹಿನ್ನಲೆ ಈ ಕೃತ್ಯ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಕುರಿತು ಪೊಲೀಸರು ಸುಮೋಟೊ ಕೇಸ್​ ದಾಖಲಿಸಿ ಆರೋಪಿಗಳ ಬಂಧಿಸಿದ್ದಾರೆ.

ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕರು

ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕರು

 • Share this:
  ಬೆಂಗಳೂರು (ಮೇ. 27):  ಯುವತಿಯೊಬ್ಬಳ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ರಾಮಮೂರ್ತಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊರ್ವಳ ಮೇಲೆ ಅಮಾನುಷ, ಭೀಕರವಾಗಿ ಆಕೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಘಟನೆಯಲ್ಲಿ ಕಂಡು ಬಂದ ಯುವತಿ ಚಹರೆ ಈಶಾನ್ಯ ರಾಜ್ಯದ ಯುವತಿ ಎಂಬುದು ಸ್ಪಷ್ಟವಾಗಿತ್ತು. ಈ ಹಿನ್ನಲೆ ಈ ವಿಡಿಯೋದಲ್ಲಿನ ಆರೋಪಿಗಳ ಚಹರೆಯನ್ನು ಹಂಚಿಕೊಂಡಿದ್ದ ಅಸ್ಸಾಂ ಮೂಲದ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಅಲ್ಲದೇ, ಆರೋಪಿಗಳನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೇ ಪ್ರಕರಣದ ಆರೋಪಿಗಳು ಈಗ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದಾರೆ.

  ವಿಡಿಯೋದಲ್ಲಿ ಕಂಡು ಬಂದಿದ್ದ ನಾಲ್ವರು ಯುವಕರು ಹಾಗೂ ಮಹಿಳೆಯನ್ನು ಬಂಧಿಸಲಾಗಿದೆ, ಈ ಆರೋಪಿಗಳು ರಾಮಮೂರ್ತಿ ನಗರದ ಎನ್​ಆರ್​ಐ ಕಾಲೋನಿಯಲ್ಲಿ ವಾಸವಾಗಿದ್ದರು. ಈ ಪ್ರಕರಣ ಕುರಿತು ತಿಳಿಯುತ್ತಿದ್ದಂತೆ ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆಗೆ ಇಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲಾ ಬಾಂಗ್ಲಾ ದೇಶ ಪ್ರಜೆಗಳಾಗಿದ್ದು, ಅಕ್ರಮವಾಗಿ ಇಲ್ಲಿ ನೆಲೆಸಿದ್ದರು ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಆರೋಪಿಗಳು ಆಧಾರ್​ ಕಾರ್ಡ್​ನ್ನು ಕೂಡ ಪಡೆದು ಇಲ್ಲಿಯೇ ವಾಸವಾಗಿದ್ದರು ಎಂಬುದು ಪತ್ತೆಯಾಗಿದೆ. ​  ಈ ಪ್ರಕರಣದ ವಿಡಿಯೋ ದೇಶದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ, ಬಾಂಗ್ಲಾದೇಶದಲ್ಲೂ ವೈರಲ್​ ಆಗಿತ್ತು. ಈ ಹಿನ್ನಲೆ ಆರೋಪಿಗಳು ರಾಮಮೂರ್ತಿ ನಗರದ ಆವಲಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದರು.  ಈ ಆರೋಪಿಗಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸಂತ್ರಸ್ತೆ ಯುವತಿ ಜೊತೆ ಹಣಕಾಸಿನ ವ್ಯವಹಾರದಲ್ಲಿ ದ್ವೇಷ ಇದ್ದ ಹಿನ್ನಲೆ ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.

  ಆರೋಪಿಗಳು ಕಳೆದ ಆರು ತಿಂಗಳ ಹಿಂದೆ ಇಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಹಣಕಾಸಿನ ವ್ಯವಹಾರ ಹಿನ್ನಲೆ ಈ ಕೃತ್ಯ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಕುರಿತು ಪೊಲೀಸರು ಸುಮೋಟೊ ಕೇಸ್​ ದಾಖಲಿಸಿ ಆರೋಪಿಗಳ ಬಂಧಿಸಿದ್ದಾರೆ.

  ಇದನ್ನು ಓದಿ: ನಾಗಾಲ್ಯಾಂಡ್​ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ವಿಡಿಯೋ ವೈರಲ್​; ಏನಿದು ಘಟನೆ?

  ಏನಿದು ಪ್ರಕರಣ?

  ಮೇ 26ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಈ ವಿಡಿಯೋದಲ್ಲಿ ಮಹಿಳೆ ಮೇಲೆ ನಾಲ್ವರು ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ತಕ್ಷಣಕ್ಕೆ ನಾಗಾಲ್ಯಾಂಡ್​ ಮೂಲಕ ಲೋವಿಕಲಿ ಸುಮಿ ಎಂಬ ಮಹಿಳೆ ಜೋದ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

  ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಎಚ್ಚೆತ್ತ ಪೊಲೀಸರು, ವಿಡಿಯೋದಲ್ಲಿರುವ ಆರೋಪಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜೋಧ್ಪುರ ಪೊಲೀಸರು,  ಜೋದ್ಪುರದಲ್ಲಿ  ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮತ್ತು ಸಂತ್ರಸ್ತೆ ಬೇರೆ ಎಂದಿದ್ದಾರೆ

  ಘಟನೆ ಕುರಿತು ಟ್ವೀಟ್​ ಮಾಡಿರುವ ಸಚಿವ ಕಿರಣ್​ ರಿಜಿಜು ಕೂಡ ವಿಡಿಯೋದಲ್ಲಿರುವ ಮಹಿಳೆ, ಆತ್ಮಹತ್ಯೆ ಮಾಡಿಕೊಂಡಿರುವವರು ಒಬ್ಬರೇ ಅಲ್ಲ ಎಂದ್ದಿದ್ದಾರೆ. ಅಲ್ಲದೇ ಈ  ಘಟನೆ ಕುರಿತು ಪೊಲೀಸರೊಂದಿಗೆ ಚರ್ಚೆ ನಡೆಸುತ್ತೇನೆ. ವಿಡಿಯೋದಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ಎಸಗಿದ  ಆರೋಪಿಗಳನ್ನು ಹುಡುಕಿ ಬಂಧಿಸಲು ಪೊಲೀಸರು ಎಲ್ಲಾ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದ್ದರು.

  ಈ ವಿಡಿಯೋ ವೈರಲ್​ ಆದ ಬೆನಲ್ಲೇ ಕಾಮುಕರ ಫೋಟೋವನ್ನು ಅಸ್ಸಾಂ ಪೊಲೀಸರು ಬಿಡುಗಡೆ ಮಾಡಿದ್ದು, ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
  Published by:Seema R
  First published: