• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime: ಸಿಲಿಕಾನ್​ಸಿಟಿ ಜನರನ್ನು ಬೆಚ್ಚಿ ಬೀಳಿಸಿದ್ದ ಬಾಬ್ಲಿ ಕೊಲೆ ಆರೋಪಿಗಳ ಬಂಧನ

Crime: ಸಿಲಿಕಾನ್​ಸಿಟಿ ಜನರನ್ನು ಬೆಚ್ಚಿ ಬೀಳಿಸಿದ್ದ ಬಾಬ್ಲಿ ಕೊಲೆ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಯಾಂಕ್ ಒಳಗೆ ಹಾಡಹಗಲೇ ನಡೆದ ಈ ಬರ್ಬರ ಹತ್ಯೆಯಿಂದ ಸಿಲಿಕಾನ್ ಸಿಟಿ ಜನರನ್ನ ಭಯ ಭೀತರನ್ನಾಗಿಸಿತ್ತು

  • Share this:

ಬೆಂಗಳೂರು (ಜು. 21):  ಸಿಲಿಕಾನ್ ಸಿಟಿ ಜನರನ್ನ ಬೆಚ್ಚಿ ಬೀಳಿಸಿದ್ದ ಹಾಡುಹಗಲೇ ಭೀಕರ ಹತ್ಯೆ ನಡೆಸಿದ  ರೌಡಿ ಶೀಟರ್​ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ತಂಡ ರಚಿಸಿದ ಅಧಿಕಾರಿಗಳು ಹಂತಕರ ಶೋಧ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಸೋಮವಾರ ಬೆಂಗಳೂರಿನ ಕೋರಮಂಗಲದಲ್ಲಿ ರೌಡಿಶೀಟರ್ ಬಾಬ್ಲಿಯನ್ನ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಬ್ಯಾಂಕ್ ಒಳಗೆ ಹಾಡಹಗಲೇ ನಡೆದ ಈ ಬರ್ಬರ ಹತ್ಯೆಯಿಂದ ಸಿಲಿಕಾನ್ ಸಿಟಿ ಜನರನ್ನ ಭಯ ಭೀತರನ್ನಾಗಿಸಿತ್ತು. ಜೊಸೇಪ್ ಅಲಿಯಾಸ್ ಬಾಬ್ಲಿ ಹಂತಕರ ಪತ್ತೆ ಹಚ್ಚಲು ಖಾಕಿ ಪಡೆ ವಿಶೇಷ ತಂಡ ರಚಿಸಿ ಹಗಲಿರುಳು ಶೋಧ ನಡೆಸಿದ್ದರು. 


ಪೊಲೀಸರ ಕಾರ್ಯಾಚರಣೆ ವೇಳೆ ಬಾಬ್ಲಿ ಕೊಲೆಯ ಪ್ರಮುಖ ಆರೋಪಿಗಳಾದ ಪ್ರದೀಪ್ ಅಲಿಯಾಸ್ ಚೊಟ್ಟೆ ಮತ್ತು ರವಿ ಎಂಬಾತ ಬೇಗೂರು ಕೆರೆ ಬಳಿ ವುಡ್ ವರ್ಕ್ ಗೋಡಾನ್ ನಲ್ಲಿ ಅಡಗಿರುವುದು ಗೊತ್ತಾಗಿದೆ. ಕೂಡಲೇ ಕೋರಮಂಗಲ ಪೊಲೀಸರ ತಂಡ ಗೋಡಾನ್ ಬಳಿಗೆ ದೌಡಾಯಿಸಿದ್ದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪ್ರದೀಪ್ ಮತ್ತು ರವಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದು ಎಎಸ್ಐ ರವೀಂದ್ರ ಮತ್ತು ಪಿಎಸ್ಐ ಸಿದ್ದಪ್ಪ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರ ಮೇಲೆ ಅಟ್ಯಾಕ್ ಆಗ್ತಿದ್ದಂತೆ ಕೋರಮಂಗಲ ಇನ್ಸ್‌ಪೆಕ್ಟರ್ ರವಿ ಆತ್ಮ ರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.


ಇದನ್ನು ಓದಿ: ಸಿದ್ದರಾಮಯ್ಯ ಜೊತೆ ಮುನಿಸಿಲ್ಲ; ಬಿಜೆಪಿ ನಾಯಕತ್ವ ಬದಲಾವಣೆ ಆಗಲಿದೆ; ಡಿಕೆ ಶಿವಕುಮಾರ್​


ಬಂಧಿತ ಆರೋಪಿಗಳು ಹಳೆ ದ್ವೇಷದ  ತೀರಿಸಿಕೊಳ್ಳಲು ಬಾಬ್ಲಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಏಪ್ರಿಲ್ ನಲ್ಲಿ ಜೊಸೇಪ್ ಅಲಿಯಾಸ್ ಬಾಬ್ಲಿ ಮತ್ತು ಆತನ ಸಹಚರ ಜಾರ್ಜ್ ಜೊತೆಗೂಡಿ ಆರುಣ್ ಕುಮಾರ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರಂತೆ. ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾಗಿ ಆಗಿದ್ದರಂತೆ. ಹಲ್ಲೆಗೊಳಗಾಗಿದ್ದ ಆರುಣ್ ಕುಮಾರ್ ರೌಡಿಶೀಟರ್ ಶಿವು ಎಂಬಾತನ ಶಿಷ್ಯನಾಗಿದ್ದು, ಅಂದಿನಿಂದ ದ್ವೇಷ ತೀರಿಸಿಕೊಳ್ಳಲು ಸಂಚು ರೂಪಿಸುತ್ತಿದ್ದನಂತೆ. ಕಳೆದ ಸೋಮವಾರ ಬಾಬ್ಲಿ ಮನೆಯವರ ಜೊತೆ ಬ್ಯಾಂಕ್ ಗೆ ಬಂದಿದ್ದು, ಕೆಲಸ ಮುಗಿದ ಬಳಿಕ ವಾಪಸ್ ಹೊರಟಿದ್ದ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಹಂತಕರ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಾಬ್ಲಿ ಬ್ಯಾಂಕ್ ಒಳ ನುಗ್ಗಿದ್ದು ಈ ವೇಳೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.


ಇನ್ನೂ ಬಂಧಿತ ಆರೋಪಿ ಪ್ರದೀಪ್ ಆಶೋಕನಗರ ಠಾಣೆಯ ರೌಡಿಶೀಟರ್ ಅಗಿದ್ದು ನಾಲ್ಕೈದು ಪ್ರಕರಣಗಳಲ್ಲಿ ಭಾಗಿಯಾಗಿದ್ದನಂತೆ. ಮತ್ತೊಬ್ಬ ಆರೋಪಿ ರವಿ ಜೆಸಿ ನಗರ ಠಾಣೆಯ ರೌಡಿಶೀಟರ್ ಆಗಿದ್ದು ಜೈಲಿನಲ್ಲಿರುವ ತನ್ನ ಗುರು ಶಿವು ಅಣತಿಯಂತೆ ಬಾಬ್ಲಿ ಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ. ನಿನ್ನೆ ಪೊಲೀಸರು ಜೈಲಿನಲ್ಲಿ ಶಿವು ವಿಚಾರಣೆ ನಡೆಸಿ ಆರೋಪಿಗಳ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಕೋರಮಂಗಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು


Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು