HOME » NEWS » State » BENGALURU URBAN BANGALORE POLICE ARREST ILLEGAL TELEPHONE EXCHANGE ACCUSED KMTV SESR

Bangalore Crime: ದುಬೈನಲ್ಲಿ ಡ್ರೈವರ್ ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​​ ದಂಧೆ ರೂವಾರಿ

ಗ್ರಾಹಕರು ಸಿಮ್ ಖರೀದಿಗೆ ದಾಖಲೆ ಕೊಟ್ಟಾಗ ಅದೇ ದಾಖಲೆ  ಆಧಾರದ ಮೇಲೆ ಈ ಆರೋಪಿಗಳು ಮೂರ್ನಾಲ್ಕು ಸಿಮ್ ಪಡೆಯುತ್ತಿದ್ದರು.

news18-kannada
Updated:June 15, 2021, 4:37 PM IST
Bangalore Crime: ದುಬೈನಲ್ಲಿ ಡ್ರೈವರ್ ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​​ ದಂಧೆ ರೂವಾರಿ
ಆರೋಪಿಗಳ ಬಂಧಿಸಿದ ಬೆಂಗಳೂರು ಪೊಲೀಸರು
  • Share this:
 ಬೆಂಗಳೂರು (ಜೂ. 15): ಸಿಮ್ ಕಾರ್ಡ್ ಖರೀದಿಗಾಗಿ ಎಲ್ಲೆಂದರಲ್ಲಿ ದಾಖಲೆ ಕೊಡುವ ಮುನ್ನ ಎಚ್ಚರವಹಿಸುವುದು ಅವಶ್ಯ. ಯಾಕಂದ್ರೆ ನೀವು ಕೊಡೊ ದಾಖಲೆಗಳೆ ಕೆಲವು ದಂಧೇಕೋರರ ಪಾಲಿಗೆ ಅಕ್ರಮಕ್ಕೆ ದಾರಿಯಾಗುತ್ತಿದೆ. ಸಿಮ್ ಖರೀದಿಗೆ ಸಾರ್ವಜನಿಕರು ಕೊಟ್ಟ ದಾಖಲೆಗಳನ್ನ ದುರುಪಯೋಗ ಪಡಿಸಿಕೊಂಡು ಸಾವಿರಾರು ಸಿಮ್ ಖರೀದಿಸಿದ ಅಸಾಮಿಗಳು ಅಕ್ರಮ ಟೆಲಿಫೋನ್ ಎಕ್ಸ್​ಚೆಂಜ್​ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ. ಇಂತಹದೊಂದು ಅಕ್ರಮ ಟೆಲಿಫೋನ್ ಎಕ್ಸ್ಚೆಂಜ್​ ದಂಧೆಯನ್ನ ಬೆಂಗಳೂರು ಎಟಿಸಿ ತಂಡ ಬಯಲಿಗೆ ಎಳೆದಿದೆ. ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡಿದ ಪ್ರಕರಣದ ತನಿಖೆಯನ್ನು ಎಟಿಸಿ ತಂಡ ಚುರುಕುಗೊಳಿಸಿತು. ಎಟಿಸಿ ತನಿಖೆ ವೇಳೆ ಸಿಮ್ ಕಾರ್ಡ್ ದಂಧೆ ಬಯಲಾಗಿದೆ. ಸಂತನ್ ಕುಮಾರ್ ಎಂಬಾತ ತಮಿಳುನಾಡು ಸೇರಿ ಹಲವೆಡೆ ಸಿಮ್ ಪಡೆದು ಅದನ್ನ ಜಯಗಣೇಶ್ ಮತ್ತು ಸುರೇಶ್ ಮೂಲಕ ನಗರಕ್ಕೆ ರವಾನೆ ಮಾಡುತ್ತಿದ್ದನಂತೆ. ಈ ಸಿಮ್ ಗಳನ್ನ ಬಳಸಿಕೊಂಡು ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​ ನಡೆಸುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಇಬ್ರಾಹಿಂ, ಗೌತಮ್, ಬಷೀರ್ ಮತ್ತು ಅನಸ್ ರಿಂದ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​ ನಡೆಸುತ್ತಿದ್ದರು‌. ಈ‌ ನಾಲ್ವರು ಆರೋಪಿಗಳಿಗೆ ಜಯಗಣೇಶ್ ಮತ್ತು ಸುರೇಶ್ ಸಿಮ್ ಕಾರ್ಡ್ ಕೊಡುತ್ತಿದ್ದರಂತೆ. ಗ್ರಾಹಕರು ಸಿಮ್ ಖರೀದಿಗೆ ದಾಖಲೆ ಕೊಟ್ಟಾಗ ಅದೇ ದಾಖಲೆ  ಆಧಾರದ ಮೇಲೆ ಈ ಆರೋಪಿಗಳು ಮೂರ್ನಾಲ್ಕು ಸಿಮ್ ಪಡೆಯುತ್ತಿದ್ದರು. ಅಷ್ಟೇ ಅಲ್ಲದೇ, ಇವರು ಗ್ರರಾಹಕರ ಹೆಬ್ಬೆಟ್ಟುಗಳನ್ನ ಕಾಪಿ ಮಾಡುತ್ತಿದ್ದರು ಎಂಬ ಸತ್ಯ ಬಯಲಾಗಿದೆ.

ಇನ್ನೂ ಆರೋಪಿಗಳು ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್​ ಹೊಂದಿದ್ದು ವಿದೇಶದಲ್ಲಿ ಸರ್ವರ್ ಪಾಯಿಂಟ್ ಇಟ್ಟಿದ್ದರಂತೆ. ಈ ಬಗ್ಗೆ ಎಟಿಸಿ ತಂಡ ಸರ್ವರ್ ಎಲ್ಲಿದೆ, ಎಲ್ಲಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಕ್ರಮ ಎಕ್ಸ್​ಚೇಂಜ್​ ಇದರೂ ಸರ್ವರ್ ಎಲ್ಲಿದೆ ಎಂಬುದು ನಿಗೂಢವಾಗಿದೆ. ಆರೋಪಿಗಳು ಹೊರದೇಶಗಳಲ್ಲಿ ಸರ್ವರ್ ಇಟ್ಟು ಅಪರೇಟ್ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: ಕೊರೊನಾ ಲಸಿಕೆಯಿಂದಲೇ ವ್ಯಕ್ತಿಯ ಸಾವು ಸಂಭವಿಸಿದೆ: ಮೊದಲ ಬಾರಿಗೆ ಒಪ್ಪಿಕೊಂಡ ಕೇಂದ್ರ ಸರ್ಕಾರ

ಪ್ರಕರಣದ ಪ್ರಮುಖ ಆರೋಪಿ ಇಬ್ರಾಹಿಂ ದುಬೈನಲ್ಲಿ ಡ್ರೈವರ್ ಅಗಿದ್ದು ,ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೆಂಜ್​ ದಂಧೆ ರೂವಾರಿಯಾಗಿದ್ದ. ದುಬೈನಲ್ಲಿ ಕರೆಗಳ ವಿನಿಮಯ ಬಗ್ಗೆ ತಿಳಿದುಕೊಂಡ ಅಸಾಮಿ ಬೆಂಗಳೂರಿಗೆ ವಾಪಸ್ ಬಂದ, ಖುದ್ದು ಅಕ್ರಮ ಟೆಲಿಫೋನ್ ಎಕ್ಸ್​ಚೆಂಜ್​ ಶುರು ಮಾಡಿದ್ದನಂತೆ. ಟೆಲಿಫೋನ್ ಎಕ್ಸ್​ಚೆಂಜ್​ ಗೆ ಸಿಮ್ ಬಾಕ್ಸ್ ಗಳನ್ನ ದುಬೈನಿಂದ ತರಿಸಿದ ಆರೋಪಿ ಇಬ್ರಾಹಿಂ, ಅಂತರಾಷ್ಟ್ರೀಯ ಕರೆಗಳ ವಿನಿಮಯಕ್ಕೆ ದುಬೈನಲ್ಲೆ ಗಿರಾಕಿ ಹಿಡಿದಿದ್ದನಂತೆ. ನಂತರ ಬೆಂಗಳೂರಿನಲ್ಲಿ ದಂಧೆ ಆರಂಭಿಸಿ ಕರೆಗಳ ಪರಿವರ್ತನೆ ಮಾಡಿ ಹಣ ಮಾಡುತ್ತಿದ್ದ ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಹೀಗೆ ಕರೆಗಳ ಪರಿವರ್ತನೆ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದು,ತನ್ನ ಕೈಯಡಿ ಕೆಲಸ ಮಾಡುವ ಸಿಬ್ಬಂದಿಗೆ 70 ರಿಂದ 80 ಸಾವಿರ ಸಂಬಳ ಕೊಡ್ತಿದ್ದರಂತೆ. ಸದ್ಯ ಪ್ರಕರಣದಲ್ಲಿ ಏಳು ಜನರನ್ನ ಬಂಧಿಸಿದ ಎಟಿಸಿ ತಂಡ ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಬೆಂಗಳೂರು, ಕೇರಳ, ತಮಿಳುನಾಡು ಸೇರಿ ವಿದೇಶಗಳಿಗೂ ಅಕ್ರಮ ಟೆಲಿಫೋನ್ ಎಕ್ಸ್​ಚೆಂಜ್​​ ದಂಧೆ ಲಿಂಕ್ ಪತ್ತೆಯಾಗಿದ್ದು ಈ ಬಗ್ಗೆ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 15, 2021, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories