ಮಕ್ಕಳಿಲ್ಲ ಎನ್ನುವ ಕೊರಗೇ ಇವರ ಬಂಡವಾಳ; ರಾಜ್ಯದಲ್ಲಿ ಬೃಹತ್​ ಮಕ್ಕಳ ಮಾರಾಟ ಜಾಲ ಪತ್ತೆ

ಮುಂಬೈನಿಂದ ಮಗು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ವೇಳೆ ಈ ಗ್ಯಾಂಗ್​​ ಅನ್ನು ಬಂಧಿಸಲಾಗಿದೆ

ಆರೋಪಿಗಳು

ಆರೋಪಿಗಳು

 • Share this:
  ಬೆಂಗಳೂರು (ಅ. 6): ಮಕ್ಕಳಿಲ್ಲ ಎಂದು ಕಣ್ಣೀರು ಹಾಕುವ ದಂಪತಿಗಳ ಕೊರಗನ್ನೇ ಬಂಡಾವಳ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಗ್ಯಾಂಗ್​ವೊಂದನ್ನು ಪತ್ತೆ ಮಾಡುವಲ್ಲಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ  (bangalore south dcp harish pandey) ನೇತೃತ್ವದ ತಂಡ ಯಶಸ್ವಿಯಾಗಿದೆ. ಮಕ್ಕಳಿಲ್ಲ ಎಂಬ ದಂಪತಿಗಳ ಕೊರಗನ್ನು ಬಂಡಾವಳ ಮಾಡಿಕೊಂಡ ಈ ತಂಡದ ಸದಸ್ಯರು ಬಾಡಿಗೆ ತಾಯಿ ಮೂಲಕ ಮಗು ಕೊಡಿಸುವುದಾಗಿ ನಂಬಿಸುತ್ತಿದ್ದರು. ಆದರೆ, ಬಾಡಿಗೆ ತಾಯಿ (surrogacy mother) ಬದಲು ಬಡ ಪೋಷಕರ ಮಕ್ಕಳನ್ನು ಮಾರಾಟ ಮಾಡಿ ಅದನ್ನು ನೀಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೇವಿ ಷಣ್ಮುಗಮ್ಮ , ಮಹೇಶ್, ರಾಜಣ್ಣ, ಜನಾರ್ಧನ್ ಮತ್ತು ಧನಲಕ್ಷ್ಮೀ ಬಂಧಿತ ಆರೋಪಿಗಳು.

  ಮಕ್ಕಳಿಲ್ಲ ಎಂಬ ನೋವೇ ಇವರಿಗೆ ಹಣದ ಮಾರ್ಗ
  ಮಕ್ಕಳಿಲ್ಲದ ಅನೇಕ ದಂಪತಿಗಳು ಬಾಡಿಗೆ ತಾಯಿತನ ಮೂಲಕ ಮಗುವನ್ನು ಪಡೆಯುವ ಕನಸು ಕಾಣುತ್ತಿರುತ್ತಾರೆ. ಅಂತಹ ಪೋಷಕರ ಕೊರಗನ್ನು ಉಪಯೋಗಿಸಿಕೊಳ್ಳುವ ಈ ಗ್ಯಾಂಗ್​ ಸದಸ್ಯರು ಬಾಡಿಗೆ ತಾಯಿ ಮೂಲಕ ನಾವು ಮಗುವನ್ನು ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಈ ವೇಳೆ ಬಾಡಿಗೆ ತಾಯಿ ವಿವರಣೆ ನೀಡುವುದಿಲ್ಲ. ಹೆರಿಗೆಯಾದ ಮೇಲೆ ಮಗುವನ್ನು ಕರೆದುಕೊಂಡು ಬರುತ್ತೇವೆ ಎಂದು ನಂಬಿಸುತ್ತಾರೆ. ಇವರ ಮಾತಿನ ಮೇಲೆ ಭರವಸೆ ಇಟ್ಟು ಪೋಷಕರು ಲಕ್ಷ ಲಕ್ಷ ಹಣ ನೀಡುತ್ತಾರೆ.

  ಬೇರೆಯವರ ಬಡತನ ಇವರಿಗೆ ಲಾಭಾ
  ಬಾಡಿಗೆ ತಾಯಿ ಹುಡುಕದ ಈ ಗ್ಯಾಂಗ್​ ಸದಸ್ಯರು ಇದಕ್ಕಾಗಿ ಇವರು ಆರಿಸಿಕೊಳ್ಳುವುದು ಬಡತನದ ಕುಟುಂಬವನ್ನು. ಅನೇಕ ಮಕ್ಕಳಿದ್ದು ಅಥವಾ ಮಗುವನ್ನು ಸಾಕಾಲಾರದ ಅಸಹಾಯಕ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿ ಅವರ ಮಗುವನ್ನು ಮಾರಾಟ ಮಾಡಿಸಲು ಒತ್ತಾಯಿಸುತ್ತಾರೆ. ತಮ್ಮ ಬಡತನದಲ್ಲಿ ಮಗುವು ನರಳುವುದು ಬೇಡ ಎಂದು ಪೋಷಕರು ಕೂಡ ಮಕ್ಕಳ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
  ಬೆಂಗಳೂರು, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ಗ್ಯಾಂಗ್​
  ಈ ಗ್ಯಾಂಗ್​ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯವರಿಗೆ ವಂಚಿಸಿದೆ. ಅಷ್ಟೇ ಅಲ್ಲದೇ, ಈ ಮಕ್ಕಳ ಮಾರಾಟದ ಜಾಲ ನೆರೆಯ ಚೆನ್ನೈ ಮತ್ತು ಮಹಾರಾಷ್ಟ್ರದಲ್ಲೂ ಸಕ್ರಿಯವಾಗಿದ್ದು, ಮಗು ಮಾರಾಟ ಮಾಡಿದ್ದ ಮಾಹಿತಿ ಪತ್ತೆ ಆಗಿದೆ.

  ಇದನ್ನು ಓದಿ: ಬಾಗಿಲು ತೆರೆದ ಶಿರಡಿ ಬಾಬಾ ಮಂದಿರ; ನವರಾತ್ರಿಯಿಂದ ಸಾರ್ವಜನಿಕರಿಗೆ ಸಿಗಲಿದೆ ಸಾಯಿ ದರ್ಶನ

  ಬೃಹತ್​ ಮಾರಾಟ ಜಾಲ ಪತ್ತೆ
  ಚಾಮರಾಜಪೇಟೆ ಅಸ್ಪತ್ರೆಯಿಂದ ಒಂದು ಮಗು ಕಳ್ಳತನ ಮಾಡಿ ಮಾರಾಟ ಮಾಡಿದ ಪ್ರಕರಣ ದಾಖಲಾಗುತ್ತಿದ್ದಂತೆ ಈ ಮಾರಾಟ ಜಾಲ ಪತ್ತೆಗಾಗಿ ಮುಂದಾದ ಪೊಲೀಸರು ಇದಕ್ಕಾಗಿ ವಿಶೇಷ ತಂಡ ರಚಿಸಿದರು. ಈ ಪ್ರಕರಣದ ತನಿಖೆ ವೇಳೆ ಅಸ್ಪತ್ರೆಯಲ್ಲಿ ರೋಗಿ ಮತ್ತು ಅಸ್ಪತ್ರೆಯವರಲ್ಲದೆ ಯಾರು ಓಡಾಡುತ್ತಿದ್ದಾರೆ ಎಂದು ಪರಿಶೀಲನೆ ನಡೆಸಿದಾಗ ಮಕ್ಕಳ ಮಾರಾಟದ ನಾಲ್ಕು ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತ್ತು. ತನಿಖೆ ವೇಳೆ ಓರ್ವ ಮಹಿಳೆ ಮನೆಯಲ್ಲಿ ಒಂದೇ ಮನೆಯಲ್ಲಿ 28 ತಾಯಿ ಕಾರ್ಡ್ ಸಿಕ್ಕಿತ್ತು. ಅದು ಕೆಂಗೇರಿ ಅಸ್ಪತ್ರೆಯಿಂದ ಕಾರ್ಡ್ ಕೊಟ್ಟಿದ್ದರು. ಈ ಜಾಲ ಬೆನ್ನತ್ತಿದಾಗ ಮಾರಾಟವಾಗಿದ್ದ 11 ಮಕ್ಕಳನ್ನ ರಾಜ್ಯದಲ್ಲಿ ಪತ್ತೆ ಹಚ್ಚಲಾಗಿದೆ. ಮಕ್ಕಳ ಪೋಷಕರು ಸಹ ಪತ್ತೆಯಾಗಿದ್ದಾರೆ. ಇನ್ನೂ ಕೆಲವು ಮಕ್ಕಳನ್ನ ಪತ್ತೆ ಹಚ್ಚಬೇಕಿದೆ.

  ಇದನ್ನು ಓದಿ: ಅಜಯ್ ಮಿಶ್ರಾ ಪುತ್ರ ಓಡಿ ಹೋದ ಎನ್ನಲಾದ ವಿಡಿಯೋ ವೈರಲ್; ಇಲ್ಲಿದೆ ಸತ್ಯ

  ಮಗು ಬೇಕು ಎಂಬ ಸೋಗಿನಲ್ಲಿ ತಂಡ ಪತ್ತೆ
  ಇನ್ನು ಈ ತಂಡವನ್ನು ಪತ್ತೆ ಮಾಡಲು ಪೊಲೀಸರು ಕೂಡ ಮಾರುವೇಷದಲ್ಲಿ ಮಗು ಬೇಕು ಎಂದು ಈ ತಂಡದ ಸದಸ್ಯರಿಗೆ ತಿಳಿಸಿದ್ದರು. ಅಲ್ಲದೇ ಇದಕ್ಕಾಗಿ 5 ಲಕ್ಷ ರೂ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಆರೋಪಿಗಳು ಮಗು ನೀಡಲು ಮುಂದಾದಾಗ ಈ ಗ್ಯಾಂಗ್​ ಅನ್ನು ಬಂಧಿಸಲಾಗಿದೆ. ಮಕ್ಕಳನ್ನ ಮಾರಾಟ ಮಾಡಲು ಒಬ್ಬೊಬ್ಬರ ಬಳಿ ಒಂದೊಂದು ರೀತಿ ಹಣ ಪಡೆದಿದ್ದಾರೆ. ಆರು ಲಕ್ಷದಿಂದ ಹಿಡಿದು ಅವರ ಆರ್ಥಿಕ ಸ್ಥಿತಿಗೆ ಅನುಸಾರ ಹಣ ನೀಡಿದ್ದಾರೆ. ಇನ್ನು ಇವರು ಮಕ್ಕಳ ತಂದೆತಾಯಿಗೆ 80 ಸಾವಿರ ಕೊಡುತ್ತಿದ್ದರು. ಮಗು ಆರೋಗ್ಯವಾಗಿದ್ರೆ ಒಂದು ಲಕ್ಷಕ್ಕೂ ಹೆಚ್ಚು ಹಣ ಕೊಡುತ್ತಿದ್ದರು. ಮುಂಬೈನಿಂದ ಮಗು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ವೇಳೆ ಈ ಗ್ಯಾಂಗ್​​ ಅನ್ನು ಬಂಧಿಸಲಾಗಿದೆ
  Published by:Seema R
  First published: