HOME » NEWS » State » BENGALURU URBAN BANGALORE PEENYA CRIME MINOR BOY KILLED HIS PARENTS ANLM SESR

ಅಪ್ಪ-ಅಮ್ಮನ ಕೊಲೆಗೆ ಸಂಚು ರೂಪಿಸಿದ ಅಪ್ರಾಪ್ತ; ಪೀಣ್ಯದ ಸರ್ಕಾರಿ ಕಚೇರಿಯಲ್ಲಿ ನಡೆದ ಕೊಲೆ ರಹಸ್ಯ ಬಯಲು

ತಂದೆ ತಾಯಿಯನ್ನು ಕೊಲೆ ಮಾಡಲು 14 ವರ್ಷ ಅಪ್ರಾಪ್ತ ಬಾಲಕ ಕೊಲೆಗೆ ಯೋಜನೆಯನ್ನು ರೂಪಿಸಿದ್ದನಂತೆ. ಅಪ್ಪ ಕಚೇರಿಯಲ್ಲಿ ಮಲಗುವ ಸ್ಥಳದಲ್ಲಿ ಮೊದಲೇ ಒಂದು ದಪ್ಪ ಕಲ್ಲು ತಂದಿಟ್ಟು ಕೊಂಡು ಅಂದು ರಾತ್ರಿ ಕೊಲ್ಲುವ ಸ್ಕೆಚ್ ಹಾಕಿದ್ದನಂತೆ.

news18-kannada
Updated:May 9, 2021, 7:50 AM IST
ಅಪ್ಪ-ಅಮ್ಮನ ಕೊಲೆಗೆ ಸಂಚು ರೂಪಿಸಿದ ಅಪ್ರಾಪ್ತ; ಪೀಣ್ಯದ ಸರ್ಕಾರಿ ಕಚೇರಿಯಲ್ಲಿ ನಡೆದ ಕೊಲೆ ರಹಸ್ಯ ಬಯಲು
ಕೊಲೆಯಾದ ದಂಪತಿ
  • Share this:
ಬೆಂಗಳೂರು: ನಗರದ ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ ಕರಿಹೋಬಹಳ್ಳಿಯಲ್ಲಿನ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿಗಳ ಕಚೇರಿಯ ಮುಖ್ಯಾಧಿಕಾರಿ ರಮೇಶ್‌ ಕೊಠಡಿಯ ಶೌಚಾಲಯದಲ್ಲಿ ಇಬ್ಬರು ಹೆಣವಾಗಿ ಪತ್ತೆಯಾಗಿದ್ದರು. ಅವರು ಅದೇ  ಕಟ್ಟಡದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ 44 ವರ್ಷದ ಹನುಮಂತರಾಯ ಹಾಗೂ ಕಚೇರಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಹನುಮಂತರಾಯನ 34 ವರ್ಷದ ಹೆಂಡತಿ ಹೊನ್ನಮ್ಮ.  ಕಚೇರಿಯ ಕಾಪೌಂಡ್‌ನ ಕಚ್ಚಾ ಮನೆಯೊಂದರಲ್ಲಿ ವಾಸಿಸುತ್ತಿದ್ದ ದಂಪತಿಗಳು ಹೀಗೆ ಕೊಲೆಯಾಗಿರುವುದು ಕಚೇರಿಯ ಸಿಬ್ಬಂದಿಗಳಲ್ಲೂ ದಿಗ್ಭ್ರಮೆ ಮೂಡಿಸಿತ್ತು. ಸೆಕ್ಯೂರಿಟಿ ಕರ್ತವ್ಯ ನಿರ್ವಹಿಸುತ್ತಿದ್ದ ದಂಪತಿಗಳನ್ನು ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಕುರಿತು ಅಚ್ಚರಿ ಕೂಡ ವ್ಯಕ್ತವಾಗಿತ್ತು. ಇದೇ ಹಿನ್ನಲೆ ಈ ಪ್ರಕರಣದ ಬೆನ್ನತ್ತಿದೆ ಪೀಣ್ಯ ಪೊಲೀಸರಿರಗೆ ಆಘಾತವೊಂದು ಕಾದಿತ್ತು

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಕಾಣೆಯಾದಾಗ ಸಿಬ್ಬಂದಿಗಳು ಅಲ್ಲಿ ಇಲ್ಲಿ ಹುಡುಕಿ ಸುಮ್ಮನಾಗಿದ್ದರು, ಆದರೆ, ಶೌಚಾಲಯದಲ್ಲಿ ಹೆಣವಾಗಿ ಬಿದ್ದ ಅವರನ್ನು ನೋಡಿದವರಿಗೆ ಗಾಬರಿಯಾಗಿತ್ತು. ಅವರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಶೌಚಾಲಯದಲ್ಲಿ ಹಾಕಿ ಹೊರಗಿನಿಂದ ಬೀಗ ಹಾಕಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಾಗ ದಂಪತಿಯ ಎರಡನೇ ಮಗನೇ ಅವರನ್ನು ಹತ್ಯೆ ಮಾಡಿದ ಎಂಬ ಮಾಹಿತಿ ಹೊರ ಬಿದ್ದಿತು.

ತಂದೆ ತಾಯಿಯನ್ನು ಕೊಲೆ ಮಾಡಲು 14 ವರ್ಷ ಅಪ್ರಾಪ್ತ ಬಾಲಕ ಕೊಲೆಗೆ ಯೋಜನೆಯನ್ನು ರೂಪಿಸಿದ್ದನಂತೆ. ಅಪ್ಪ ಕಚೇರಿಯಲ್ಲಿ ಮಲಗುವ ಸ್ಥಳದಲ್ಲಿ ಮೊದಲೇ ಒಂದು ದಪ್ಪ ಕಲ್ಲು ತಂದಿಟ್ಟು ಕೊಂಡು ಅಂದು ರಾತ್ರಿ ಕೊಲ್ಲುವ ಸ್ಕೆಚ್ ಹಾಕಿದ್ದನಂತೆ. ತನ್ನ ಯೋಜನೆಯಂತೆ ಕಚೇರಿ ಒಳಗೆ ಮಲಗಿದ್ದ ಅಪ್ಪನನ್ನು ಮುಗಿಸಲು ಹೋಗಿದ್ದ ವೇಳೆ ಅಲ್ಲೇ ಮಲಗಿದ್ದ ತಾಯಿಯ ಮೇಲೆ ಮೊದಲು ಕಲ್ಲು ಎತ್ತುಹಾಕಿದ್ದಾನೆ. ತಾಯಿ ಪ್ರಜ್ಞೆ ತಪ್ಪಿದ ಬೆನ್ನಲ್ಲೆ ತಂದೆ ತಲೆ ಮೇಲೆ ಕಲ್ಲು ಹಾಕಿ ಕೊಂದಿದ್ದಾನೆ. ನಂತರ ಇಬ್ಬರ ಶವವನ್ನು ಕಚೇರಿಯ ಶೌಚಾಲಯದಲ್ಲಿ ಮೃತ ದೇಹ ಅಡಗಿಸಿಟ್ಟನಂತೆ. ಕಚೇರಿಯಲ್ಲಿ ರಕ್ತದ ಕಲೆಗಳನ್ನು ಬಟ್ಟೆಯಿಂದ ಶುಚಿ ಮಾಡಿ ತನಗೇನೂ ಗೊತ್ತಿಲ್ಲ ಅನ್ನೋ ಆಗೆ ಇದ್ದನಂತೆ.

ಇದನ್ನು ಓದಿ: ಸಿಟಿ ಸ್ಕ್ಯಾನ್​ಗೆ ನಿನ್ನೆ ಒಂದು ದರ, ಇಂದು ಒಂದು ದರ; ಇದು ದುಬಾರಿ ಸರ್ಕಾರ

ಇನ್ನು ಈ ಕೊಲೆಯನ್ನು ಯಾವ ಉದ್ದೇಶಕ್ಕಾಗಿ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕ, ಅವರು ನನಗೆ ಶಾಲೆಗೆ ಹೋಗು ಒಳ್ಳೆಯವರ ಸಹವಾಸ ಮಾಡಿ ಒಳ್ಳೆ ಬುದ್ದಿ ಕಲಿ ಎಂದು ಒತ್ತಾಯಿಸುತ್ತಿದ್ದರು ಎಂದಿದ್ದಾನೆ. ತಮ್ಮಂತೆ ಮಗು ಕಷ್ಟದಲ್ಲಿ ಬೀಳಬಾರದು. ಓದಿ ವಿದ್ಯೆ ಕಲಿತು ಬುದ್ಧಿವಂತನಾಗಬೇಕು. ಪೋಲಿಗಳ ಸಹವಾಸಕ್ಕೆ ಬೀಳದೆ ಉತ್ತಮ ವ್ಯಕ್ತಿಯಾಗು ಎಂದು ಬುದ್ದಿ ಹೇಳಿದ್ದೆ ದೊಡ್ಡ ಮಹಾಪರಾಧವಾಗಿದೆ.

ಇನ್ನು ಅಪ್ರಾಪ್ತ ಬಾಲಕ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನಲೆ ಪೋಷಕರು ಇತ್ತೀಚೆಗೆ ಜ್ಯೋತಿಷಿಗಳ ಮೊರೆ ಹೋಗಿದ್ದ ವಿಷಯವೂ ಬಹಿರಂಗವಾಗಿದೆ. ಅಪ್ಪ ಅಮ್ಮ ಬುದ್ದಿ ಮಾತು ಹೇಳೋದನ್ನೆ ತಪ್ಪು ಅಂದುಕೊಂಡ ಮಗ ತನ್ನ ಹೆತ್ತವರನ್ನೆ ಕೊಲೆ ಮಾಡಿ ಸದ್ಯ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ.‌
Published by: Seema R
First published: May 9, 2021, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories