Namma Metro: ಕೆಂಪಾಪುರದವರೆಗೆ 2 ಕಿಲೋ ಮೀಟರ್ ಮೆಟ್ರೋ ವಿಸ್ತರಣೆ

ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 22 ನಿಲ್ದಾಣಗಳೊಂದಿಗೆ 32.15 ಕಿ.ಮೀ. ಮಾರ್ಗವನ್ನು ಹೊಂದಿದೆ. 'ಹಿಂದಿನ ಯೋಜನೆಯ ಪ್ರಕಾರ, ಹಂತ-3 ಹೆಬ್ಬಾಳ ರೈಲು ನಿಲ್ದಾಣದಲ್ಲಿ ಕೊನೆಗೊಳಿಸಬೇಕಾಗಿತ್ತು. ಆದರೆ, ಈಗ ಅದನ್ನು ಕೆಂಪಾಪುರದವರೆಗೆ ಹೆಚ್ಚುವರಿ 2 ಕಿ.ಮೀ. ವಿಸ್ತರಿಸಲು ನಿರ್ಧರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 2): ನಮ್ಮ ಮೆಟ್ರೊ (Metro) 3ನೇ ಹಂತವನ್ನು 2 ಕಿ.ಮೀ ವಿಸ್ತರಿಸಲು ನಿರ್ಧರಿಸಲಾಗಿದೆ. ಜೆ.ಪಿ ನಗರದಿಂದ (JP Nagar) ಹೆಬ್ಬಾಳದವರೆಗಿನ (Hebbala) ಮಾರ್ಗವನ್ನು ಕೆಂಪಾಪುರದವರೆಗೆ (Kempapura) ವಿಸ್ತರಿಸಲಾಗುತ್ತಿದೆ. ಈ ಸಂಬಂಧ ಭಾರತೀಯ ರೈಲ್ವೆ ತಾಂತ್ರಿಕ ಮತ್ತು ಆರ್ಥಿಕ ಸೇವೆ ಲಿಮಿಟೆಡ್‌ (ರೈಟ್ಸ್‌), ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಷನ್‌ಗೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಲ್ಲಿಸಿದೆ. ಡಿಪಿಆರ್‌ ಅನ್ನು ಬಿಎಂಆರ್‌ಸಿಎಲ್‌ (BMRCL) ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ. ಬಳಿಕ ರಾಜ್ಯ ಸರಕಾರ ಕೇಂದ್ರದ ಅನುಮತಿಗಾಗಿ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೆಂಪಾಪುರದವರೆಗೆ ಮೆಟ್ರೋ ವಿಸ್ತರಣೆ

ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 22 ನಿಲ್ದಾಣಗಳೊಂದಿಗೆ 32.15 ಕಿ.ಮೀ. ಮಾರ್ಗವನ್ನು ಹೊಂದಿದೆ. 'ಹಿಂದಿನ ಯೋಜನೆಯ ಪ್ರಕಾರ, ಹಂತ-3 ಹೆಬ್ಬಾಳ ರೈಲು ನಿಲ್ದಾಣದಲ್ಲಿ ಕೊನೆಗೊಳಿಸಬೇಕಾಗಿತ್ತು. ಆದರೆ, ಈಗ ಅದನ್ನು ಕೆಂಪಾಪುರದವರೆಗೆ ಹೆಚ್ಚುವರಿ 2 ಕಿ.ಮೀ. ವಿಸ್ತರಿಸಲು ನಿರ್ಧರಿಸಲಾಗಿದ್ದು, ವಿಮಾನ ನಿಲ್ದಾಣ ಮಾರ್ಗ (ಹಂತ 2 ಎ, 2 ಬಿ)ಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಎಲಿವೇಟೆಡ್‌ ಕಾರಿಡಾರ್‌

ಈ ಮಾರ್ಗ ಎರಡು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಒಳಗೊಂಡಿದೆ. 13,500 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. 44.65 ಕಿ.ಮೀ. ಮಾರ್ಗದಲ್ಲಿ31 ನಿಲ್ದಾಣಗಳಿರಲಿವೆ. ಐದು ನಿಲ್ದಾಣಗಳು ಇತರ ಮೆಟ್ರೊ ಮಾರ್ಗಗಳೊಂದಿಗೆ ಸಂಪರ್ಕ ಸಾಧಿಸಲಿವೆ. ಜೆಪಿ ನಗರದಿಂದ ಹೆಬ್ಬಾಳ, ಹೊಸಹಳ್ಳಿ ಟೋಲ್‌ನಿಂದ ಕಡಬಗೆರೆ ಹೀಗೆ ಎರಡು ಕಾರಿಡಾರ್‌ನಲ್ಲಿ ಒಟ್ಟು 44 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣವಾಗಲಿದೆ. ಜೆಪಿ ನಗರದಿಂದ ಹೆಬ್ಬಾಳದವರೆಗೆ 32.15 ಕಿ.ಮೀ. ಉದ್ದ ಒಂದನೆಯ ಕಾರಿಡಾರ್‌ ಇರಲಿದೆ. ಇದರಲ್ಲಿ22 ನಿಲ್ದಾಣಗಳು ಬರಲಿವೆ.

ಇದನ್ನೂ ಓದಿ: Namma Metro: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಜೆಪಿ ನಗರ ನಾಲ್ಕು ಮತ್ತು ಐದನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್‌ ಡಿಪೋ, ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮೈಸೂರು ರಸ್ತೆ, ನಾಗರಬಾವಿ ಸರ್ಕಲ್‌, ವಿನಾಯಕ ಬಡಾವಣೆ, ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಕ್ರಾಸ್‌, ಚೌಡೇಶ್ವರಿನಗರ, ಫ್ರೀಡಂ ಫೈಟರ್‌ ಕ್ರಾಸ್‌, ಕ್ರಾಂತಿವೀರ ಸ್ಟುಡಿಯೋ, ಪೀಣ್ಯ, ಬಾಹುಬಲಿ ನಗರ, ಬಿಇಎಲ್‌ ಸರ್ಕಲ್‌, ಪಟೇಲಪ್ಪ ಬಡಾವಣೆ, ಹೆಬ್ಬಾಳ ಮತ್ತು ಕೆಂಪಾಪುರದಲ್ಲಿ ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ಇದೆ.

ಕಾರಿಡಾರ್‌-2 ಸುಮಾರು 12.5 ಕಿ.ಮೀ. ಇರಲಿದ್ದು, ಕಡಬಗೆರೆ, ಫಾರೆಸ್ಟ್‌ ಗೇಟ್‌, ಬ್ಯಾಡರಹಳ್ಳಿ, ಹೇರೋಹಳ್ಳಿ. ಸುಂಕದಕಟ್ಟೆ, ಸುಮನಹಳ್ಳಿ ಕ್ರಾಸ್‌, ವಿನಾಯಕ ನಗರ, ಕೆಎಚ್‌ಬಿ ಕಾಲೋನಿ ಮತ್ತು ಹೊಸಹಳ್ಳಿ ನಿಲ್ದಾಣಗಳು ಬರಲಿದೆ. ಎರಡನೇ ಹಂತದ ಯೋಜನೆಯ ಮುಕ್ತಾಯದ ನಂತರ ಮೆಟ್ರೊ ಒಟ್ಟು 177 ಕಿ.ಮೀ. ಉದ್ದದ ಜಾಲವನ್ನು ಹೊಂದಲಿದೆ.

ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್

ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್ ಎರಡು 9 ನಿಲ್ದಾಣಗಳೊಂದಿಗೆ 12.5 ಕಿ.ಮೀ., ಸರ್ಜಾಪುರದಿಂದ ಹೆಬ್ಬಾಳದವರೆಗಿನ ಹೆಚ್ಚುವರಿ ಮಾರ್ಗವನ್ನೂ ಹಂತ-3ಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇನ್ನೊಂದು ಮೂಲವು, "ಕರಡನ್ನು RITES ನಿಂದ BMRCLಗೆ ಸಲ್ಲಿಸಲಾಗಿದೆ. ನಾವು ನಮ್ಮ ಇನ್‌ಪುಟ್‌ಗಳನ್ನು ಶೀಘ್ರದಲ್ಲೇ ಕಳುಹಿಸುತ್ತೇವೆ ಮತ್ತು ಅವರು ಅಂತಿಮ ಡಿಪಿಆರ್ (DPR) ಅನ್ನು 15 ರಿಂದ 20 ದಿನಗಳಲ್ಲಿ ಸಲ್ಲಿಸಬಹುದು.

ಇದನ್ನೂ ಓದಿ: ನಮ್ಮ ಮೆಟ್ರೊ ಸ್ಪೆಷಲ್ ಪಾಸ್ ಕೇಳೋರೇ ಇಲ್ಲ, ಹೊಸಾ ಆಫರ್ ರಿಜೆಕ್ಟ್ ಮಾಡಿದ ಬೆಂಗ್ಳೂರು ಜನ!

ಹೆಬ್ಬಾಳ ಮಾರ್ಗಕ್ಕೆ ಬಿಡ್ ಪೂರ್ವ ಸಭೆ

ಸರ್ಜಾಪುರ- ಹೆಬ್ಬಾಳ ಮಾರ್ಗಕ್ಕೆ ಬಿಡ್ ಪೂರ್ವ ಸಭೆ ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೈರಿ ಸರ್ಕಲ್ ಮೂಲಕ ಹೆಬ್ಬಾಳದವರೆಗೆ ಹಂತ-3ರ ಅಡಿಯಲ್ಲಿ ಪ್ರಸ್ತಾಪಿಸಲಾದ ಹೊಸ 37 ಕಿಮೀ ಮೆಟ್ರೋ ಮಾರ್ಗದ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಕನಿಷ್ಠ 14 ಬಿಡ್‌ದಾರರು ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದಾರೆ. ಟೆಂಡರ್‌ಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಬಿಎಂಆರ್‌ಸಿಎಲ್ ಏಪ್ರಿಲ್ 25ರಂದು ನಡೆಸಿತ್ತು.
Published by:Pavana HS
First published: