Bangalore Lockdown: ಲಾಕ್ಡೌನ್ ವೇಳೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದೀರಾ?; ಹಾಗಾದರೆ ಕಾದಿದೆ ಕಂಟಕ
Bangalore Traffic Rules: ಲಾಕ್ ಡೌನ್ ವೇಳೆ ಹೇಳೋರಿಲ್ಲ, ಕೇಳೋರಿಲ್ಲ ಅಂತ ಸುಮ್ಮನೆ ಬೈಕ್, ಕಾರು ತಗೊಂಡು ಖಾಲಿ ರಸ್ತೆಗಳಲ್ಲಿ ಸುತ್ತಾಡಿದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಬೆಂಗಳೂರು (ಜೂನ್ 8): ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಲಾಕ್ ಡೌನ್ ನಲ್ಲಿ ಅಡ್ಡಾದಿಡ್ಡಿ ಓಡಾಡಿದ ಸವಾರರಿಗೆ ಕಂಟಕ ಶುರುವಾಗಿದೆ. ಪೊಲೀಸರ ಕಣ್ತಪ್ಪಿಸಿ ಗಲ್ಲಿ ಮತ್ತು ಅಡ್ಡ ರಸ್ತೆಗಳಲ್ಲಿ ಸುತ್ತಾಡಿದ ಬೈಕ್ ರೈಡರ್ ಗಳ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟಿದ್ದಾರೆ.
ಹೌದು... ಲಾಕ್ ಡೌನ್ ವೇಳೆ ಹೇಳೋರಿಲ್ಲ, ಕೇಳೋರಿಲ್ಲ ಅಂತ ಸುಮ್ಮನೆ ಬೈಕ್, ಕಾರು ತಗೊಂಡು ಖಾಲಿ ರಸ್ತೆಗಳಲ್ಲಿ ಸುತ್ತಾಡಿದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ರಸ್ತೆಯೆಲ್ಲಾ ನಂದೆ ಅಂತಾ ಬಿಂದಾಸ್ ಆಗಿ ವಾಹನ ಚಲಾಯಿಸಿದವರ ಮೇಲೆ ದಂಡಂ ದಶಗುಣಂ ಪ್ರಯೋಗ ಮಾಡಲು ಖಾಕಿ ಪಡೆ ಮುಂದಾಗಿದೆ.
ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದವರ ಜೇಬಿಗೆ ಕತ್ತರಿ ಹಾಕಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಲಾಕ್ ಡೌನ್ ನೆಪದಲ್ಲಿ ಖಾಲಿ ರೋಡ್ ನಲ್ಲಿ ಅಡ್ಡಾದಿಡ್ಡಿ ಓಡಾಟ, ಹೆಲ್ಮೆಟ್ ಹಾಕದೇ ಬಿಂದಾಸ್ ಆಗಿ ಬೈಕ್ ಓಡಿಸೋದು, ಬ್ಯಾರಿಕೇಡ್ ಸರಿಸಿ ಒನ್ ವೇಯಲ್ಲಿ ಸಂಚಾರ ಮಾಡಿದವರ ಪತ್ತೆಗೆ ಖಾಕಿ ಪಡೆ ಮುಂದಾಗಿದೆ. ಇನ್ನೂ ಲಾಕ್ ಡೌನ್ ಅಂತ ಟ್ರಾಫಿಕ್ ಪೊಲೀಸರು ಸುಮ್ಮನೆ ಕುಳಿತಿಲ್ಲ, ಬದಲಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಮೇಲೆ ವಿಶೇಷ ನಿಗಾ ಇಟ್ಟು ಎಲ್ಲವನ್ನೂ ಸೈಲೆಂಟ್ ಆಗಿ ಗಮನಿಸ್ತಿದ್ದಾರೆ. ಅದರಲ್ಲೂ ಪೊಲೀಸರ ಹೈ ಫೈ ಸಿಸಿ ಕ್ಯಾಮೆರಾಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರ ಪತ್ತೆ ಮಾಡ್ತಿದ್ದಾರೆ.
ರಸ್ತೆಗಳ ಸಿಸಿಟಿವಿ ದೃಶ್ಯ ಅಧರಿಸಿ ಸವಾರರ ಮೇಲೆ ಕಳೆದ ಒಂದುವರೆ ತಿಂಗಳಿನಿಂದ ವಾಹನಗಳ ಮೇಲೆ ಕಣ್ಣಿಟ್ಟು ಫೈನ್ ಹಾಕುತ್ತಿದ್ದಾರೆ. ಈಗಾಗಲೇ ನಗರದ ಎಲ್ಲಾ ಟ್ರಾಫಿಕ್ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿರೋ ಪೊಲೀಸರು ಹೆಲ್ಮೆಟ್, ಓನ್ ವೇ ರೈಡ್, ತ್ರಿಬಲ್ ರೈಡ್, ಮುಚ್ಚಿದ ರಸ್ತೆಗಳಲ್ಲಿ ಸುತ್ತಾಟ, ರ್ಯಾಷ್ ಡ್ರೈವಿಂಗ್, ಹೀಗೆ ಹಲವು ಕೇಸ್ ರೂಲ್ಸ್ ಬ್ರೇಕ್ ಪತ್ತೆ ಹಚ್ಚುತ್ತಿದ್ದಾರೆ.
ಇನ್ನೂ ಸಿಸಿಟಿವಿ ಜೊತೆಗೆ ಸೈಲೆಂಟ್ ಆಗಿ ಮೊಬೈಲ್ ನಲ್ಲಿ ತೆಗೆದಿರುವ ಪೋಟೊಗಳನ್ನ ಪರಿಶೀಲನೆ ನಡೆಸಿ ಕೇಸ್ ಹಾಕಿ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಲಾಕ್ ಡೌನ್ ಮುಗಿದ ಕೂಡಲೇ ವಾಹನ ಮಾಲೀಕರ ಮನೆ ಬಾಗಿಲಿಗೆ ನೋಟಿಸ್ ಕಳಿಸಲು ಸಿದ್ದತೆ ನಡೆಸಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ನಲ್ಲೂ ಇದೇ ರೀತಿ ಕೇಸ್ ಹಾಕಿ ದಂಡ ಕಲೆಕ್ಟ್ ಮಾಡಿದ್ದ ಪೊಲೀಸರು, ಸಾವಿರಾರು ವಾಹನಗಳ ಸಿಸಿಟಿವಿ ಪೂಟೇಜ್ ಸಂಗ್ರಹಿಸಿದ ನೋಟಿಸ್ ನೀಡಲು ಸಜ್ಜಾಗಿದ್ದಾರೆ.
ಅದೇನೇ ಇರಲಿ ಲಾಕ್ ಡೌನ್ ಅಂತ ಬೈಕ್ ಕಾರು ತಗೊಂಡು ಸಣ್ಣ ಪುಟ್ಟ ಕಾರಣ ಹೇಳಿ ಸುತ್ತಾಡಿದ ಸವಾರರಿಗೆ ಟ್ರಾಫಿಕ್ ಪೊಲೀಸರು ಸೈಲೆಂಟ್ ಆಗಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಹೆಲ್ಮೆಟ್ ಇಲ್ಲದೆ ರೌಂಡಿಂಗ್ ಮಾಡಿದ ಸವಾರರು ಈಗ ಓಡಾಡಿದ ತಪ್ಪಿಗೆ ದಂಡ ಕಟ್ಟಲು ರೆಡಿಯಾಗಬೇಕಿದೆ.