HOME » NEWS » State » BENGALURU URBAN BANGALORE LOCKDOWN BENGALURU POLICE FINED ALMOST 3 CRORE RUPEES FOR VIOLATING LOCKDOWN RULES SCT

Bangalore Lockdown: ಬೆಂಗಳೂರಿನಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದವರಿಂದ 2.79 ಕೋಟಿ ರೂ. ದಂಡ ವಸೂಲಿ!

Bangalore News: ಬೆಂಗಳೂರಿನಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆಗೆ ಒಟ್ಟು 8 ವಿಭಾಗದಿಂದ 1,16,212 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು ನಿಯಮ ಉಲ್ಲಂಘಿಸಿದವರಿಗೆ 2.79 ಕೋಟಿ ದಂಡ ವಿಧಿಸಲಾಗಿದೆ.

news18-kannada
Updated:May 4, 2021, 3:57 PM IST
Bangalore Lockdown: ಬೆಂಗಳೂರಿನಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದವರಿಂದ 2.79 ಕೋಟಿ ರೂ. ದಂಡ ವಸೂಲಿ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 4): ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ಬೆಂಗಳೂರು ನಗರ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸಾಮಾಜಿಕ ಅಂತರ ಪಾಲಿಸದೆ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆಗೆ ಒಟ್ಟು 8 ವಿಭಾಗದಿಂದ 1,16,212 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು ನಿಯಮ ಉಲ್ಲಂಘಿಸಿದವರಿಗೆ 2.79 ಕೋಟಿ ದಂಡ ವಿಧಿಸಲಾಗಿದೆ. ಕಳೆದ ಏಪ್ರಿಲ್ 1ರಿಂದ ಮೇ 4ರ ತನಕ ದಂಡ ಕಲೆ‌ ಹಾಕಲಾಗಿದೆ. ಮಾಸ್ಕ್ ಹಾಕದೆ ಓಡಾಡಿದವರ ವಿರುದ್ಧ 4 ಲಕ್ಷದ 9 ಸಾವಿರ ಪ್ರಕರಣ ದಾಖಲಾಗಿದೆ. ಮಾಸ್ಕ್ ಹಾಕದವರ ಬಳಿ 2 ಕೋಟಿ 55 ಲಕ್ಷ ದಂಡ ಕಲೆ ಹಾಕಲಾಗಿದೆ.

ಜನತಾ ಕರ್ಫ್ಯೂ ಆರಂಭದಿಂದ ಈವರೆಗೆ 7,832 ದ್ವಿಚಕ್ರ ವಾಹನಗಳ ಸೀಜ್ ಮಾಡಲಾಗಿದೆ. ಮೂರು ಚಕ್ರದ ವಾಹನಗಳು 383 ಸೀಜ್ ಮಾಡಲಾಗಿದೆ. ನಾಲ್ಕು ಚಕ್ರ ವಾಹನಗಳು 383 ಸೀಜ್ ಮಾಡಲಾಗಿದೆ. 4 ಮತ್ತು 4 ಜನರಿಗಿಂತ ಹೆಚ್ಚು ಗುಂಪು ಕೂಡಿದವರ ವಿರುದ್ಧ 41 ಪ್ರಕರಣ ದಾಖಲಾಗಿದೆ.
Youtube Video

ನಿಯಮ ಉಲ್ಲಂಘನೆ ಮಾಡಿದ ಹೋಟೆಲ್ 14 , ಅಂಗಡಿಗಳ ಸಂಖ್ಯೆ 18, ಕಾಫಿ ಶಾಪ್​ಗಳ ಸಂಖ್ಯೆ 8, ಒಂದು ಮಾಲ್ ಸೇರಿದಂತೆ ಒಟ್ಟು 41 ಶಾಪ್ ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರೋನಾ ಎರಡನೇ ಅಲೆಗೆ ಪೊಲೀಸ್ ಇಲಾಖೆ ಹೈರಾಣಾಗಿದೆ. ಇದುವರೆಗೆ ಬೆಂಗಳೂರಿನಲ್ಲಿ 740 ಪೊಲೀಸ್ ಸಿಬ್ಬಂದಿಗೆ ಕೊರೋನಾ ತಗುಲಿದೆ. ಓರ್ವ ಸಿಬ್ಬಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ಸಿಬ್ಬಂದಿಗೆ ಆಕ್ಸಿಜನ್ ಜೊತೆ ಚಿಕಿತ್ಸೆ ನೀಡಲಾಗುತ್ತಿದೆ. 34 ಸಿಬ್ಬಂದಿಗಳಿಗೆ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ 740 ಸಕ್ರಿಯ ಪ್ರಕರಣಗಳು ಇವೆ.
Published by: Sushma Chakre
First published: May 4, 2021, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories