HOME » NEWS » State » BENGALURU URBAN BANGALORE LOCKDOWN BENGALURU COVID 19 CASES MAY INCREASED TO 33 LAKH BY JUNE IF LOCKDOWN NOT IMPOSED SAYS IISC EXPERTS SCT

Bangalore Lockdown: ಬೆಂಗಳೂರಿನಲ್ಲಿ ಜೂನ್ ವೇಳೆಗೆ 33 ಲಕ್ಷ ಕೊರೋನಾ ಕೇಸ್!; IISCಯಿಂದ ಶಾಕಿಂಗ್ ಮಾಹಿತಿ

Karnataka Lockdown Updates: ರಾಜ್ಯದಲ್ಲಿ 30 ದಿನ ಕಠಿಣ ಲಾಕ್​ಡೌನ್ ಮಾಡದಿದ್ದರೆ ಬೆಂಗಳೂರಿನಲ್ಲಿ ಜೂನ್ ತಿಂಗಳ ವೇಳೆಗೆ 33 ಲಕ್ಷ ಕೊರೋನಾ ಕೇಸುಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ವರದಿ ನೀಡಿದೆ!

news18-kannada
Updated:May 6, 2021, 2:38 PM IST
Bangalore Lockdown: ಬೆಂಗಳೂರಿನಲ್ಲಿ ಜೂನ್ ವೇಳೆಗೆ 33 ಲಕ್ಷ ಕೊರೋನಾ ಕೇಸ್!; IISCಯಿಂದ ಶಾಕಿಂಗ್ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 6): ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 50 ಸಾವಿರಕ್ಕೂ ಅಧಿಕ ಕೊರೋನಾ ಕೇಸುಗಳು ದಾಖಲಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲೂ ನಿನ್ನೆ 23,106 ಕೊರೋನಾ ಕೇಸುಗಳು ಪತ್ತೆಯಾಗಿದ್ದು, ರಾಜ್ಯಾದ್ಯಂತ 346 ಜನರು ಕೊರೋನಾದಿಂದ ಸಾವನ್ನಪ್ಪಿರುವುದು ತೀವ್ರ ಆತಂಕ ಮೂಡಿಸಿದೆ. ಹೀಗಾಗಿ, ಮೇ 12ರ ಬಳಿಕವೂ ಕರ್ನಾಟಕದಲ್ಲಿ ಲಾಕ್​ಡೌನ್ ಮುಂದುವರೆಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದ್ದು, ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡದಿದ್ದರೆ ಬೆಂಗಳೂರಿನಲ್ಲಿ ಜೂನ್ ತಿಂಗಳ ವೇಳೆಗೆ 33 ಲಕ್ಷ ಕೊರೋನಾ ಕೇಸುಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ವರದಿ ನೀಡಿದೆ!

ಐಐಎಸ್​ಸಿ ತಜ್ಞರು ನೀಡಿರುವ ವರದಿಯಿಂದ ರಾಜ್ಯ ಸರ್ಕಾರ ಮತ್ತಷ್ಟು ಕಂಗಾಲಾಗಿದೆ. ಈಗಾಗಲೇ ಕೊರೋನಾ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗದೆ, ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗದೆ ಕೈ ಚೆಲ್ಲಿರುವ ರಾಜ್ಯ ಸರ್ಕಾರ ವಿರೋಧ ಪಕ್ಷಗಳು ಮಾತ್ರವಲ್ಲದೆ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದೆ. ಬಿಜೆಪಿ ಪಕ್ಷದಲ್ಲೇ ಅನೇಕ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರತೊಡಗಿದ್ದಾರೆ. ಈ ನಡುವೆ ಭಾರತೀಯ ವಿಜ್ಞಾನ ಸಂಸ್ಥೆ ಆತಂಕಕಾರಿ ವರದಿ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ಜೂನ್ ತಿಂಗಳ ವೇಳೆಗೆ 33 ಲಕ್ಷ ಕೊರೋನಾ ಕೇಸ್ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಸದ್ಯದ ಕೋವಿಡ್ ಸೋಂಕಿತರ ಸಂಖ್ಯೆಯ ಏರಿಕೆಯ ಅಂಕಿ- ಅಂಶ ಆಧರಿಸಿ ಐಐಎಸ್​ಸಿ ಅಧ್ಯಯನ ವರದಿ ನೀಡಿದೆ. ಬೆಂಗಳೂರಲ್ಲಿ ಲಾಕ್​ಡೌನ್ ಮಾಡದಿದ್ದರೆ ಜೂನ್ ವೇಳೆಗೆ 33 ಲಕ್ಷ ಕೇಸ್ ದಾಖಲಾಗುತ್ತದೆ. ಅಲ್ಲದೆ, 24,174 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇನ್ನೂ 15 ದಿನಗಳ ಕಾಲ ಕಠಿಣ ಲಾಕ್​ಡೌನ್ ಮಾಡದಿದ್ದರೆ ಜೂನ್ 11ರ ವೇಳೆಗೆ 17 ಲಕ್ಷ ಕೊರೋನಾ ಕೇಸುಗಳು ದಾಖಲಾಗುವ ಸಾಧ್ಯತೆಗಳಿವೆ. 15 ದಿನಗಳ ಲಾಕ್​ಡೌನ್ ಮಾಡದಿದ್ದರೆ 15,888 ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.

ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲ; ಸಂಪೂರ್ಣ ಲಾಕ್​ಡೌನ್​ಗೆ ಸರ್ಕಾರ ನಿರ್ಧಾರ?

ಕಟ್ಟುನಿಟ್ಟಿನ ಲಾಕ್​ಡೌನ್ ಮಾಡದಿದ್ದರೆ ಸಾವಿನ ಪ್ರಮಾಣ 24,174ಕ್ಕೆ ಏರಿಕೆಯಾಗಲಿದೆ ಎಂದು ಐಐಎಸ್​ಸಿಯ ಪ್ರೊ. ಶಶಿಕುಮಾರ್ ಗಣೇಶನ್, ಪ್ರೊ. ದೀಪಕ್ ಸುಬ್ರಮಣಿ ನೇತೃತ್ವದ ಅಧ್ಯಯನ ಸಮಿತಿ ವರದಿ ನೀಡಿದೆ. ಏಪ್ರಿಲ್ 27ರವರೆಗಿನ ಬೆಂಗಳೂರು ಕೊರೋನಾ ಅಂಕಿ ಅಂಶ ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಮೇ 4ರ ವೇಳೆಗೆ ಬೆಂಗಳೂರಿನಲ್ಲಿ 8.71 ಲಕ್ಷ ಮಂದಿಗೆ ಸೋಂಕು ತಗುಲಲಿದೆ ಮತ್ತು 7,102 ಮಂದಿ ಸಾವನ್ನಪ್ಪಲಿದ್ದಾರೆ ಎಂದು ತಜ್ಞರು ಈ ಹಿಂದೆ ಅಂದಾಜಿಸಿದ್ದರು. ಆ ವರದಿ ಈವರೆಗೆ ನಿಜವಾಗಿದೆ. ಹೀಗಾಗಿ, ಇದೀಗ ನೀಡಿರುವ ವರದಿ ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ತಲೆನೋವು ತಂದಿಟ್ಟಿದೆ.

ಈ ಹಿಂದೆ ನೀಡಿದ್ದ ವರದಿಯ ಅಂಕಿ- ಅಂಶವನ್ನು ಆಧರಿಸಿ ಜೂನ್ 11ರ ವೇಳೆಗೆ ಬೆಂಗಳೂರಿನಲ್ಲಿ 33 ಲಕ್ಷ ಕೇಸ್ ದಾಖಲಾಗಲಿದೆ ಎಂದು ವರದಿ ನೀಡಲಾಗಿದೆ. 30 ದಿನಗಳ ಕಠಿಣ ಲಾಕ್​ಡೌನ್ ಮಾಡಿದರೆ ಮಾತ್ರ ಕೊರೋನಾಗೆ ಬ್ರೇಕ್ ಬೀಳಲಿದೆ ಎನ್ನಲಾಗಿದೆ. ಒಂದುವೇಳೆ 30 ದಿನಗಳ ಕಠಿಣ ಲಾಕ್ಡೌನ್ ಮಾಡಿದರೆ ಬೆಂಗಳೂರಿನಲ್ಲಿ 14.9 ಲಕ್ಷ ಮಂದಿಗೆ ಸೋಂಕು ತಗುಲಲಿದೆ. ಈ ಪೈಕಿ ಜೂನ್ 11ರ ವೇಳೆಗೆ 11.4 ಲಕ್ಷ ಮಂದಿ ಗುಣಮುಖರಾಗಿ ಕೇವಲ 2.60 ಲಕ್ಷ ಸಕ್ರಿಯ ಸೋಂಕಿತರಿರುತ್ತಾರೆ. 30 ದಿನಗಳ ಕಠಿಣ ಲಾಕ್ಡೌನ್ ನಿಂದ ಸಾವಿನ ಪ್ರಮಾಣವನ್ನು 14,223 ಮಂದಿಗೆ ನಿಲ್ಲಿಸಬಹುದು. ಲಾಕ್​ಡೌನ್ ಮಾಡದಿದ್ದರೆ ನಾವು 24,174 ಮಂದಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆಂಗಳೂರಿನ ಎರಡನೇ ಅಲೆ ಏರಿಕೆ ಬಗ್ಗೆ ಅಧ್ಯಯನ ಮಾಡಿ ಐಐಎಸ್​ಸಿ ಪ್ರಾಧ್ಯಾಪಕರು ವರದಿ ನೀಡಿದ್ದಾರೆ.

IISC ವಿಜ್ಞಾನಿಗಳು ಬೆಂಗಳೂರಿನಲ್ಲಿ ಜೂನ್ ನಲ್ಲಿ 33 ಲಕ್ಷ ಹೆಚ್ಚಳ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಲಾಕ್​ಡೌನ್ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಕಠಿಣ ಲಾಕ್ ಡೌನ್ ಮಾಡಬೇಕಾಗಬಹುದು. ಸರ್ಕಾರದ ಮಟ್ಟದಲ್ಲಿ ಚಿಂತನೆ ಮಾಡುತ್ತಿದ್ದೇವೆ. ಬೆಂಗಳೂರಿನ ಸ್ಥಿತಿ ತುಂಬಾ ಹದಗೆಟ್ಟಿದೆ. ಈ ಸಂದರ್ಭದಲ್ಲಿ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.
Youtube Video

ಮೊದಲ ಬಾರಿಗೆ ಕರ್ನಾಟಕದಲ್ಲಿ ನಿನ್ನೆ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ನಿನ್ನೆ 23,106 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,63,380ಕ್ಕೆ ಏರಿಕೆಯಾಗಿದೆ.
Published by: Sushma Chakre
First published: May 6, 2021, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories