ಶಾಕಿಂಗ್​: ಬೆಂಗಳೂರಿನ ಅರ್ಧದಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಒಳಗಾದವರು; ಸಮೀಕ್ಷೆಯಲ್ಲಿ ಬಹಿರಂಗ

ಸಿಲಿಕಾನ್​ ಸಿಟಿಯ ಅರ್ಧದಷ್ಟು ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದಾರೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಮ. 4):  ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಸಾಕಷ್ಟು ಆತಂಕ ಮೂಡಿಸಿದೆ. ಸಮೀಕ್ಷೆಯ ಪ್ರಕಾರ ರಾಜಧಾನಿಯಲ್ಲಿ ಅರ್ಧದಷ್ಟು ಮಂದಿ ಸೋಂಕಿತರ ಸಂಪರ್ಕಕ್ಕೆ ಒಳಗಾದವರು ಎಂಬ ಶಾಕಿಂಗ್​ ವಿಷಯ ಬಹಿರಂಗವಾಗಿದೆ.  ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲಿ 48.5 ಲಕ್ಷ ಜನರು ಕೊರೋನಾ ಸೋಂಕಿತರ ಸಂಪರ್ಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಿಲಿಕಾನ್​ ಸಿಟಿಯ ಅರ್ಧದಷ್ಟು ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಮೇ 1ರವರೆಗೆ ನಡೆದ ಈ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ನಗರದಲ್ಲಿ ಸೋಂಕಿತರ ಸಂಪರ್ಕಕ್ಕೆ ಒಳಗಾದವರನ್ನು ಪತ್ತೆ ಮಾಡಲು ಮುಂದಾದಾಗ ಈ ಅಂಶ ಬಹಿರಂಗವಾಗಿದೆ.

  ಬಿಬಿಎಂಪಿ ತಿಳಿಸಿವಂತೆ ನಗರದಲ್ಲಿ 2020ರಲ್ಲಿ ಶೇ 40 ರಷ್ಟು ಪ್ರತಿಶತ ಜನ 2021ರಲ್ಲಿ ಶೇ 50ರಷ್ಟು ಪ್ರತಿಶತ ಜನರು ಸೋಂಕಿತರ ಸಂಪರ್ಕಕ್ಕೆ ಒಳಗಾದವರು. ಇನ್ನು ಕರ್ನಾಟಕ ವಾರ್​ ರೂಂ ದಾಖಲೆ ಪ್ರಕಾರ ಏಪ್ರಿಲ್​ 25ರವೆರೆಗೆ ಶೇ. 40 ರಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ಈ ಸಂಖ್ಯೆ ಶೇ 50ರಷ್ಟು ಮೀರಿದೆ ಎನ್ನಲಾಗಿದೆ.
  ನಗರದಲ್ಲಿ ಸೋಂಕಿತರ ಸಂರ್ಪಕ್ಕೆ ಒಳಗಾದವರ ಪತ್ತೆ ಹಚ್ಚುವುದು ಒಂದು ದೊಡ್ಡ ಸವಾಲ್​ ಆಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ತಿಳಿಸಿದ್ದಾರೆ ಎಂದು ಟೈಮ್​ ಆಫ್​ ಇಂಡಿಯಾ ವರದಿ ಮಾಡಿದೆ.

  ಸೋಂಕು ಹರಡುವುದನ್ನು ತಡೆಗಟ್ಟಲು ಸೋಂಕಿತರ ಸಂರ್ಪಕ್ಕೆ ಒಳಗಾದವರನ್ನು ಪತ್ತೆ ಮಾಡುವ ಕಾರ್ಯ ನಡೆಸಲಾಗಿದೆ. ಈ ಮೂಲಕ ಅವರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗದವರು ಅದರಲ್ಲೂ ವಿಶೇಷವಾಗಿ ತಕ್ಷಣ ಕುಟುಂಬದ ಸಂಪರ್ಕಕ್ಕೆ ಒಳಗಾಗವರಲ್ಲಿ ಸೋಂಕು ಬಲು ಬೇಗ ಹರಡುತ್ತದೆ. ಈ ಹಿನ್ನಲೆ ತ್ವರಿತ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

  ಇನ್ನು ವಲಯವಾರು ವಿಶ್ಲೇಷಣೆಯಲ್ಲಿ ಪ್ರಾಥಮಿಕ ಸಂಪರ್ಕಕ್ಕಿಂತ ದ್ವೀತಿಯ ಸಂಪರ್ಕಕ್ಕೆ ಒಳಗಾದವರಲ್ಲಿ ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆ ಎಂಬ ಅಂಶ ಬೆಳಕಿಗೆ ಬಂದಿದೆ, ಈ ಸಂಖ್ಯೆಯನ್ನು ಗಮನಿಸಿದಾಗ ಸಂರ್ಪಕ್ಕೆ ಒಳಗಾದವರ ನಿಖರವಾದ ಅಂಕಿ ಅಂಶ 51 ಲಕ್ಷಕ್ಕೂ ಹೆಚ್ಚು ಎನ್ನಲಾಗಿದೆ.

  ಇದನ್ನು ಓದಿ: ದ್ವೀತಿಯ ಪಿಯುಸಿ ಪರೀಕ್ಷೆ ಮುಂದೂಡಿಕೆ; ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಆದೇಶ

  ರಾಜ್ಯದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 16 ಲಕ್ಷ ದಾಟಿದೆ. ಈಗಾಗಲೇ ದಿನವೊಂದಕ್ಕೆ ಸರಿಸುಮಾರು 40 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ, ಬೆಂಗಳೂರಿನಲ್ಲಿಯೇ ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೇ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಈಗಾಗಲೇ ಲಸಿಕೆ ವಿತರಣೆ ಕಾರ್ಯ ಕೂಡ ಆರಂಭವಾಗಿದ್ದು, ಮೊದಲ ಮತ್ತು ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಎರಡು ಡೋಸ್​ ಲಸಿಕೆಗಳನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ   ಮೂರನೇ ಹಂತದ ಲಸಿಕೆ ಕಾರ್ಯ ಮೇ 1 ರಿಂದ ಸಾಕೇಂತಿಕವಾಗಿ ಆರಂಭವಾಗಿದೆ. ರಾಜ್ಯದಲ್ಲಿ ಲಸಿಕೆ ಸಮಸ್ಯೆ ಕೊರತೆ ಹಿನ್ನಲೆ ಲಸಿಕೆ ಕಾರ್ಯ ಆರಂಭವಾಗಿಲ್ಲ. ಈ ಕುರಿತು ಮಾತನಾಡಿರುವ ಸಿಎಂ ಬಿಎಸ್​ವೈ ಮತ್ತು ಆರೋಗ್ಯ ಸಚಿವ ಸುಧಾಕರ್​ ಲಸಿಕೆ ಕೊರತೆ ಇದ್ದು, ಈ ಕುರಿತು ಮನವಿ ಮಾಡಲಾಗಿದೆ. ಲಸಿಕೆ ಬಂದಾಕ್ಷಣ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ

  ನಿನ್ನೆ ಕೋವಿಡ್​ನಿಂದಾಗಿ 239 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 115 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು 44,438 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4, 44, 734 ಸಕ್ರಿಯ ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22,112 ಪ್ರಕರಣ ಪತ್ತೆಯಾಗಿದ್ದು, 2, 94, 917 ಸಕ್ರಿಯ ಪ್ರಕರಣಗಳು ಕಂಡು ಬಂದಿದೆ. ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಚಿತಾಗಾರದಲ್ಲಿ ಬಿಡುವಿಲ್ಲದ ಅಂತ್ಯಕ್ರಿಯೆ ಕಾರ್ಯ ನಡೆಯುತ್ತಿದೆ.
  Published by:Seema R
  First published: