ಬೆಂಗಳೂರು(ಮೇ 28): ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ, ಸಂತ್ರಸ್ತೆ ಮೇಲೆ ಹಲ್ಲೆ ಮಾಡುತ್ತಿರುವ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಈ ಮೊದಲು ಕಾಮುಕರು ಯುವತಿ ಮೇಲೆ ದೌರ್ಜನ್ಯ ಎಸಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾಮುಕರು ಯುವತಿಗೆ ಸತತ 1 ಗಂಟೆಗಳ ಕಾಲ ಟಾರ್ಚರ್ ನೀಡಿ, ಮನಬಂದಂತೆ ಥಳಿಸಿದ್ದರು ಎಂದು ತಿಳಿದು ಬಂದಿದೆ. A1 ಆರೋಪಿ ಸಾಗರ್ ಯುವತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದ. ನಂತರ ಮತ್ತೊಬ್ಬ ಯುವಕ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದ. ಯುವತಿ ಕಾಮುಕರ ಕಾಲು ಹಿಡಿದುಕೊಂಡು ಬಿಟ್ಟುಬಿಡಿ ಎಂದು ಗೋಗರೆದರೂ ಬಿಡದ ನೀಚರು, ಆಕೆಯನ್ನು ಮನಬಂದಂತೆ ಥಳಿಸಿದ್ದರು ಎನ್ನಲಾಗಿದೆ.
ಯುವತಿ ಮೇಲೆ ಹಲ್ಲೆ ಮಾಡುವ ಬಗ್ಗೆ ಆರೋಪಿಗಳು 2 ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿದ್ದರು. ಯುವತಿ ತಾವು ಹೇಳಿದಂತೆ ಕೇಳದಿದ್ದಿರೆ ಈ ರೀತಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:Bengaluru Gangrape: ಬೆಂಗಳೂರು ಗ್ಯಾಂಗ್ರೇಪ್ ಕೇಸ್: ಆರೋಪಿಗಳ ಮೇಲೆ ಫೈರಿಂಗ್; ಪೋಲೀಸರು ಗುಂಡು ಹಾರಿಸಿದ್ದೇಕೆ?
ಕೇರಳದಲ್ಲಿ ಸಂತ್ರಸ್ತೆ ಪತ್ತೆ
ಸದ್ಯ ಹಲ್ಲೆಗೊಳಗಾದ ಯುವತಿ ಕೇರಳದ ಕ್ಯಾಲಿಕಟ್ನಲ್ಲಿ ಪತ್ತೆಯಾಗಿದ್ದು, ತನ್ನ ಸ್ನೇಹಿತರ ಜತೆ ಇದ್ದಾಳೆಂದು ಮಾಹಿತಿ ಲಭಿಸಿದೆ. ಆರೋಪಿಗಳ ಹೇಳಿಕೆ ಮೇರೆಗೆ ಯುವತಿಯನ್ನು ಕರೆತರಲು ಬೆಂಗಳೂರು ಪೊಲೀಸ್ ತಂಡ ಕೇರಳಕ್ಕೆ ಹೋಗಿದೆ. ಪ್ರಕರಣದ ತನಿಖೆ ಬಗ್ಗೆ, ಪ್ರತಿ ಬೆಳವಣಿಗೆ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ಪಡೆಯುತ್ತಿದ್ದಾರೆ.
ಸಂತ್ರಸ್ತ ಯುವತಿ ಬಾಣಸವಾಡಿ ಇನ್ಸ್ಪೆಕ್ಟರ್ ಸತೀಶ್, ಮಹಿಳಾ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಮಹಿಳಾ ಸಿಬ್ಬಂದಿ ವಶದಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಸಂಜೆಯೊಳಗೆ ಯುವತಿಯನ್ನ ಬೆಂಗಳೂರಿಗೆ ಕರೆ ತರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇದನ್ನೂ ಓದಿ:Mehul Choski: ಮೆಹುಲ್ ಚೋಕ್ಸಿ ಭಾರತದ ನಾಗರಿಕನಲ್ಲ, ಹಾಗಾಗಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ?; ಮತ್ತಷ್ಟು ಬಿಕ್ಕಟ್ಟು
ಆರೋಪಿಗಳ ಬಳಿ ಆಧಾರ್ ಕಾರ್ಡ್ ಪತ್ತೆ
ಇನ್ನು, ಆರೋಪಿಗಳ ಬಳಿ ಆಧಾರ್ ಕಾರ್ಡ್ ಪತ್ತೆ ಹಿನ್ನೆಲೆ, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಓರ್ವ ಆರೋಪಿ ಮೊಹಮ್ಮದ್ ಬಾಬು ಶೇಕ್ ಹೆಸರಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆಧಾರ್ ಕಾರ್ಡ್ನಲ್ಲಿ ಸುಬ್ರಹ್ಮಣ್ಯನಗರ ವಿಳಾಸವಿದೆ. ಉಳಿದ ಆರೋಪಿಗಳ ಬಳಿ ಏನಾದರೂ ಸರ್ಕಾರಿ ದಾಖಲೆ, ಐಡಿ ಕಾರ್ಡ್ ಇರೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೊಹಮ್ಮದ್ ಬಾಬು ಶೇಕ್ ಹೇಗೆ ಆಧಾರ್ ಕಾರ್ಡ್ ಪಡೆದ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ಬಳಿಯಿರುವ ಆಧಾರ್ ಕಾರ್ಡ್ ನಕಲಿಯೋ, ಅಸಲಿಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರಾಮಮೂರ್ತಿನಗರ ಠಾಣೆಗೆ ಆಗಮಿಸಿ, ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸಂತ್ರಸ್ತ ಯುವತಿ ಹಾಗೂ ಆರೋಪಿಗಳ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ಆಗಿತ್ತು ಎಂಬ ವಿಷಯವೂ ಸಹ ಸದ್ಯಕ್ಕೆ ಬೆಳಕಿಗೆ ಬಂದಿದೆ. ಗಲಾಟೆ ಬಳಿಕ ಸಂತ್ರಸ್ತ ಯುವತಿ ಇಬ್ಬರು ಯುವತಿಯರ ಜೊತೆ ಕೇರಳಕ್ಕೆ ಹೋಗಿದ್ದಳು. ಕೇರಳಕ್ಕೆ ಹೋದವರನ್ನು ಆರೋಪಿಗಳು ವಾಪಸ್ ಕರೆಸಿಕೊಂಡಿದ್ದರು. ಕರೆಸಿಕೊಂಡು ಕಳೆದ ಆರು ದಿನಗಳ ಹಿಂದೆ ಮೀಟಿಂಗ್ ಮಾಡಿದ್ದರು. ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಆರೋಪಿಗಳು ಪಾರ್ಟಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಪಾರ್ಟಿ ಬಳಿಕ ಹಣಕಾಸು ವಿಚಾರಕ್ಕೆ ಮತ್ತೆ ಗಲಾಟೆ ಮಾಡಿದ್ದರು. ಗಲಾಟೆ ವೇಳೆ ಆರೋಪಿಗಳು ಯುವತಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆದಿದ್ದಾರೆ ಎಂಬ ವಿಷಯ ಬಯಲಾಗಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ