ಬೆಂಗಳೂರು(ಜೂ.22): ಇತ್ತೀಚೆಗೆ ಜಿಮ್ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಅದೇ ರೀತಿ ಜಿಮ್ಗಳು ಸಹ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ಗಳನ್ನು ಕೊಡುವ ಆಸೆ ತೋರಿಸುತ್ತವೆ. ಅದೇ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಮ್ ಮಾಲೀಕ ತೋರಿದ ಆಮಿಷಕ್ಕೆ ಒಬ್ಬ ಟೆಕ್ಕಿ ಮೋಸ ಹೋಗಿದ್ದಾನೆ. ಕೇವಲ ಮೂರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವ ಆಸೆಯ ಬಲೆಗೆ ಬಿದ್ದು, ಸುಮಾರು 6 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ.
ಹೌದು, ಬನಶಂಕರಿ 3ನೇ ಸ್ಟೇಜ್ನಲ್ಲಿ ವಾಸವಿರುವ ಕಿಶೋರ್(ಹೆಸರು ಬದಲಾಯಿಸಲಾಗಿದೆ) ಮೋಸ ಹೋದ ವ್ಯಕ್ತಿ. ಈತನೇ ಜಿಮ್ ಮಾಲೀಕನಿಗೆ 6.2 ಲಕ್ಷ ಹಣ ಕೊಟ್ಟು ಬರ್ಬಾದ್ ಆಗಿರುವ ಟೆಕ್ಕಿ. ಜಿಮ್ ಮಾಲೀಖ ಫಿಟ್ನೆಸ್ ಹ್ಯಾಕ್ಸ್ ಆಫರ್ಗಳನ್ನು ತೋರಿಸಿ ಟೆಕ್ಕಿಯಿಂದ ಲಕ್ಷಾಂತರ ರೂ.ಹಣ ಪೀಕಿದ್ದಾನೆ.
ಕಿಶೋರ್ ಕಳೆದ ವರ್ಷ ಸೆಪ್ಟೆಂಬರ್ 19ರಲ್ಲಿ ಬೆಂಗಳೂರಿನ ಎಂಪವರ್ ಫಿಟ್ನೆಸ್ಗೆ ಸೇರಿಕೊಳ್ಳುತ್ತಾನೆ. ಈತ ಜಿಮ್ಗೆ ಸೇರಿಕೊಂಡಾಗ 3 ತಿಂಗಳ ಶುಲ್ಕವನ್ನಾಗಿ 3000 ರೂ.ಕಟ್ಟಿದ್ದ. ಜಿಮ್ ಮಾಲೀಕ ಮೋಹನ್ ಕುಮಾರ್ ಕಿಶೋರ್ ಜೊತೆ ಬಹಳ ಸಲುಗೆಯಿಂದ ಇದ್ದು, ಫಿಟ್ನೆಸ್ ಟಿಪ್ಸ್ ಆಫರ್ ನೀಡುತ್ತಿದ್ದ. ಇದರಿಂದ ಪುಳಕಿತನಾದ ಕಿಶೋರ್ ತಾನು ಕಡಿಮೆ ಸಮಯದಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕೆಂದು ಮೋಹನ್ ಕುಮಾರ್ ಬಳಿ ಇನ್ನೂ ಹೆಚ್ಚಿನ ಟಿಪ್ಸ್ ಕೇಳಿದ್ದಾನೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಜಿಮ್ ಮಾಲೀಕ ಮೋಹನ್, ಕಿಶೋರ್ನಿಂದ ಹಣ ಪಡೆಯಲು ಶುರು ಮಾಡಿದ್ದಾನೆ.
ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ; ಮಲೆನಾಡು, ಕರಾವಳಿಯಲ್ಲಿಂದು ಹಳದಿ ಅಲರ್ಟ್ ಘೋಷಣೆ
ನಾನು ನನ್ನ ಜಿಮ್ ಟ್ರೇನರ್ಗೆ ಹೆಚ್ಚುವರಿ ಶುಲ್ಕವನ್ನಾಗಿ 15 ಸಾವಿರ ರೂ. ಕೊಟ್ಟೆ ಎಂದು ಕಿಶೋರ್ ಹೇಳಿಕೊಂಡಿದ್ದಾನೆ. ಒಂದು ವಾರ ಕಳೆದ ಬಳಿಕ, ಕೇವಲ ಮೂರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವ ಜಿಮ್ ಮಾಲೀಕನ ಫಿಟ್ನೆಸ್ ಟಿಪ್ಸ್ ಕೇಳಿ ಕಿಶೋರ್ ಬಲೆಗೆ ಬಿದ್ದಿದ್ದ. ಮತ್ತೆ ಬೇರೆ ಪ್ಯಾಕೇಜ್ ಆಗಿ 62 ಸಾವಿರ ರೂ. ಹಣವನ್ನು ಮೋಹನ್ಗೆ ನೀಡಿದ್ದ.
ಹೀಗೆ ಕಿಶೋರ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವ ಆಸೆಯಿಂದ ಹಂತ-ಹಂತವಾಗಿ ಜಿಮ್ ಟ್ರೇನರ್ ಮೋಹನ್ಗೆ ಹಣ ನೀಡಲು ಶುರು ಮಾಡಿದ. ಒಂದು ದಿನ ಮೋಹನ್ ಕಿಶೋರ್ ಬಳಿ ಬಂದು, ನಾನೀಗ ಕಷ್ಟದಲ್ಲಿದ್ದೇನೆ, ಹಣದ ಅವಶ್ಯಕತೆ ತುಂಬಾ ಇದೆ. ಹೀಗಾಗಿ 1ಲಕ್ಷ ಹಣ ಕೊಡು ಎಂದು ಕೇಳಿದ್ದಾನೆ. ಆಗ ಕಿಶೋರ್ ತನ್ನ ಬಳಿ ಇಟ್ಟುಕೊಂಡಿದ್ದ 50 ಸಾವಿರ ಹಣದ ಜೊತೆಗೆ, 5 ಲಕ್ಷ ಪರ್ಸನಲ್ ಲೋನ್ ತೆಗೆದುಕೊಂಡು ಎಲ್ಲಾ ಹಣವನ್ನು ಮೋಹನ್ಕುಮಾರ್ಗೆ ಕೊಡುತ್ತಾನೆ. ಜೊತೆಗೆ ತಿಂಗಳ ಇನ್ಸ್ಟಾಲ್ಮೆಂಟ್ನಲ್ಲಿ ಹಣ ವಾಪಸ್ ಮಾಡಬೇಕೆಂದು ಕಿಶೋರ್ ಮೋಹನ್ಗೆ ಕಂಡಿಷನ್ ಹಾಕುತ್ತಾನೆ.
ಕುಮಾರ್ ಎರಡನೇ ಕಂತಿನ ಹಣ ನೀಡುವ ಮುಂಚೆಯೇ ಕಿಶೋರ್ ಬಳಿ ಇನ್ನೂ ಹೆಚ್ಚಿನ ಹಣ ಕೇಳಲು ಶುರು ಮಾಡುತ್ತಾನೆ. ಆಗ ಕಿಶೋರ್ ಮತ್ತೆ 2 ಲಕ್ಷ ಲೋನ್ಗೆ ಅಪ್ಲೆ ಮಾಡುತ್ತಾನೆ.
ಇದನ್ನೂ ಓದಿ:Bangalore: ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಅಸ್ತು
ಲೋನ್ಗೆ ಅಪ್ಲೆ ಮಾಡಿದ ಬಳಿಕ, ಬ್ಯಾಂಕ್ ಅಧಿಕಾರಿಗಳು ಪರಿಶೀಲನೆಗಾಗಿ ಕಿಶೋರ್ ಮನೆ ಬಳಿ ಬರುತ್ತಾರೆ. ಆಗ ಕಿಶೋರ್ ತಂದೆ ಅಷ್ಟು ಹಣ ಏಕೆ, ಮೊದಲು ತೆಗೆದುಕೊಂಡ ಲೋನ್ ಹಣ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಆಗ ಕಿಶೋರ್ ನಡೆದ ವಿಷಯವನ್ನು ತನ್ನ ತಂದೆ ಬಳಿ ಹೇಳುತ್ತಾರೆ. ಕಿಶೋರ್ ಹಾಗೂ ಆತನ ತಂದೆ ಇಬ್ಬರೂ ಕುಮಾರ್ ಬಳಿ ಹೋಗಿ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳುತ್ತಾರೆ.
ಆದರೆ ಮೋಹನ್ ಕುಮಾರ್ ಕೇವಲ 30 ಸಾವಿರ ಹಣವನ್ನು ಮಾತ್ರ ವಾಪಸ್ ಕೊಡುತ್ತಾನೆ. ಉಳಿದ ಹಣ ಕೊಡಲು ನಕಾರ ಮಾಡುತ್ತಾನೆ. ದಿಕ್ಕು ತೋಚದ ಅಪ್ಪ-ಮಗ ಕೊನೆಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೀಗಾಗಿ ಜಿಮ್ಗೆ ಹೋಗುವ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಫಿಟ್ನೆಸ್ ಆಸೆಯ ಬಲೆಗೆ ಬಿದ್ದರೆ ಕಿಶೋರ್ ರೀತಿ ಲಕ್ಷಗಟ್ಟಲೇ ಹಣವನ್ನು ಕಳೆದುಕೊಳ್ಳುತ್ತೀರಾ ಜೋಕೆ..!
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ