Cyber Crime: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು Instagram ಅಶ್ಲೀಲವಾಗಿ ಟ್ರೋಲ್​ ಮಾಡುತ್ತಿದ್ದ ಆರೋಪಿ ಬಂಧನ

ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಳಿಕ ಮಹಿಳೆಯೊಂದಿಗೆ ಸಿಕ್ಕಾಪಟ್ಟೆ ಚಾಟಿಂಗ್​ ನಡೆಸಿ ಆತ್ಮೀಯವಾಗಿದ್ದ. ಈ ವೇಳೆ ಮಹಿಳೆ ಮಗಳ ಫೋಟೋ ಕಂಡ ತಕ್ಷಣ ಆಕೆಯ ರೂಪಕ್ಕೆ ಮರಳಾಗಿ ಆಕೆಯನ್ನು ತಾನು ಮದುವೆಯಾಗುವುದಾಗಿ ಪೀಡಿಸುತ್ತಿದ್ದ.

ಆರೋಪಿ

ಆರೋಪಿ

  • Share this:
ಬೆಂಗಳೂರು (ಸೆ. 21): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತೆ ಯುವತಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಆಕೆಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿ (Instagram troll) ಟ್ರೋಲ್​ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿಇನ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಲಬುರಗಿ ಮೂಲದ ಅವಿನಾಶ್​ ಎಂದು ಗುರುತಿಸಲಾಗಿದೆ ಲಾಕ್​​ಡೌನ್​ನಲ್ಲಿ (Lockdown) ಕೆಲಸ ಕಳೆದುಕೊಂಡಿದ್ದ ಆರೋಪಿ ​ ಟ್ರೋಲ್​ ಪೇಜ್ (Instagram Troll page)​ ಒಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಯುವತಿಯ ತಾಯಿಗೆ ಫ್ರೆಂಡ್ ರಿಕ್ವೆಸ್ಟ್​ ಕಳುಹಿಸಿದ್ದ. ಹೀಗೆ ಪರಿಚಯವಾದಗಾ ಆ ಮಹಿಳೆ ಮಗ ಮತ್ತು ಮಗಳ ಫೋಟೋವನ್ನು ಆರೋಪಿಯೊಂದಿಗೆ ಹಂಚಿಕೊಂಡಿದ್ದರು. ಈ ವೇಳೆ ಯುವತಿಯನ್ನು ನೋಡಿದ ಆತ ಆಕೆಯನ್ನು ಮದುವೆಯಾಗುವುದಾಗಿ ಟಾರ್ಚರ್​ ನೀಡುತ್ತಿದ್ದ. ಈ ವೇಳೆ ಆಕೆ ಒಪ್ಪದಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂಬುದು ಬಯಲಾಗಿದೆ.

ಏನಿದು ಘಟನೆ?
ಬೆಂಗಳೂರಿನಲ್ಲಿ ಎರಡು ವರ್ಷಗಳ ಕಾಲ ಎಲೆಕ್ಟ್ರಿಷಿಯನ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಲಬುರಗಿ ಜಿಲ್ಲೆಯ ಅವಿನಾಶ್​ ಎಂಬ ಆರೋಪಿ ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡು ಊರು ಸೇರಿದ್ದ. ಈ ವೇಳೆ ಆತನ ಇನ್ಸ್ಟಾಗ್ರಾಂನ goodboy_badtroll ಎಂಬ ಪೇಜ್​ನಲ್ಲಿ ಆಡ್ಮಿನ್​ ಸಹಾಯದಿಂದ ಕೆಲಸ ಪಡೆದು ಟ್ರೋಲ್ ಮಾಡಲು ಆರಂಭಿಸಿದ್ದ.

ಇದನ್ನು ಓದಿ: ಫೇಸ್​ಬುಕ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಬೇಕಾ?; ಹಾಗಾದ್ರೆ ಹೀಗೆ ಮಾಡಿ!

ತಾಯಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮಗಳಿಗೆ ಗಾಳ 

ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಬೆಂಗಳೂರಿನ ಎಚ್​ಎಸ್​ಆರ್​ ಬಡಾವಣೆ ನಿವಾಸಿ ಮಹಿಳೆಯೊಬ್ಬರನ್ನು ಫ್ರೆಂಡ್​​​ ಮಾಡಿಕೊಂಡಿದ್ದ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಳಿಕ ಮಹಿಳೆಯೊಂದಿಗೆ ಸಿಕ್ಕಾಪಟ್ಟೆ ಚಾಟಿಂಗ್​ ನಡೆಸಿ ಆತ್ಮೀಯವಾಗಿದ್ದ. ಈ ವೇಳೆ ಮಹಿಳೆ ಈತನ ನಂಬಿ ತನ್ನ ಮಕ್ಕಳ ಫೋಟೋವನ್ನು ಹಂಚಿಕೊಂಡಿದ್ದರು.
ಮಗಳ ಫೋಟೋ ಕಂಡ ತಕ್ಷಣ ಆಕೆಯ ರೂಪಕ್ಕೆ ಮರಳಾಗಿ ಆಕೆಯನ್ನು ತಾನು ಮದುವೆಯಾಗುವುದಾಗಿ ಪೀಡಿಸುತ್ತಿದ್ದ. ಯಾವಾಗ ಮಹಿಳೆ ಇದಕ್ಕೆ ಒಪ್ಪಲಿಲ್ಲವೋ ಈ ವೇಳೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ವೇಳೆ ಅಪ್ರಾಪ್ತ ಯುವತಿಯ ಇನ್ಸ್ಟಾಗ್ರಾಂ ಖಾತೆಗೆ ಕನ್ನ ಹಾಕಿ ಆಕೆಯ ಮತ್ತು ಆಕೆಯ ತಮ್ಮನ ಫೋಟೋಗಳನ್ನು ಈತ ಪಡೆದಿದ್ದ.

ಇದನ್ನು ಓದಿ: ಬಿಎಚ್​ ಸರಣಿ ವಾಹನ ನೋಂದಾಣಿ; ಮೋಟಾರು ವಿಮಾ ಪ್ರೀಮಿಯಂ ಉಳಿತಾಯದ ಬಗ್ಗೆ ತಿಳಿದಿದೆಯೇ?

ಹುಟ್ಟಿದ ದಿನವೇ ಯುವತಿಗೆ ಶಾಕ್
ಈ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ತನ್ನ ಇನ್ ಸ್ಟಾಗ್ರಾಂ ಅಕೌಂಟ್ rip_abhi ಯಲ್ಲಿ ಟ್ರೋಲ್​ ಮಾಡಿದ್ದ. ಅಷ್ಟೇ ಅಲ್ಲದೇ, ಯುವತಿ ಹುಟ್ಟಿದ ದಿನವೇ‌ ಕೆಲವು ಅಶ್ಲೀಲ ಫೋಟೋ ಟ್ರೋಲ್​ ಮಾಡಿ ಯುವತಿಗೆ ಶಾಕ್ ನೀಡಿದ್ದ.
ಈ ಪ್ರಕರಣ ಕುರಿತು ಸಂತ್ರಸ್ತ ಮಹಿಳೆ ಆಗ್ನೇಯ ವಿಭಾಗದ ಸಿಇಎನ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಸಿಡಿಆರ್​ ಮತ್ತು ನೆಟ್​ವರ್ಕ್​​ ಜಾಲ ಹಿಡಿದು ತನಿಖೆ ಕೈಗೊಂಡಾಗ ಆತ ಕಲಬುರಗಿಯಲ್ಲಿ ಇರುವುದು ಪತ್ತೆಯಾಗಿತ್ತು.

ಆರೋಪಿ ಬಂಧಿಸಿದ ಪೊಲೀಸರು
ಇನ್ನು ಈ ವೇಳೆ ತನಿಖೆ ನಡೆಸಿದಾಗ goodboy_badtroll ಎಂಬ ಟ್ರೋಲ್​ ಪೇಜ್​ ಮೂಲಕ ಅನೇಕರನ್ನು ಇವರು ಟ್ರೋಲ್​ ಮಾಡುತ್ತಿರುವುದು ತಿಳಿದು ಬಂದಿತು. ಈ ವೇಳೆ ಎಲ್ಲಾ ಟ್ರೋಲ್​ ಪೇಜ್​ಗಳ ಆಡ್ಮೀನ್​ಗಳು ವಾಟ್ಸ್​ಆಪ್​ ಗ್ರೂಪ್​ ಮಾಡಿಕೊಂಡು ಅದರಲ್ಲಿ ಟ್ರೋಲ್ ಮಾಡುವ ವಿಷಯದ ಕುರಿತು ಚರ್ಚೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
Published by:Seema R
First published: