Bangalore Crime: ಬ್ಯಾಂಡೇಜ್ ಹಾಕೋಕೆ ಲೇಡಿ ನರ್ಸ್ ಬೇಕು!; ಬೆಂಗಳೂರಲ್ಲಿ ಯುವಕರ ಹೈಡ್ರಾಮಾ

Bangalore Viral News: ಆಕ್ಸಿಡೆಂಟ್​​ನಿಂದ ಗಾಯವಾಗಿ ಚಿಕಿತ್ಸೆ ಪಡೆಯಲು ಬೆಂಗಳೂರಿನ ಆಸ್ಪತ್ರೆಗೆ ಬಂದಿದ್ದ ಯುವಕರಿಬ್ಬರು ಲೇಡಿ ನರ್ಸ್​ಗಳೇ ತಮಗೆ ಬ್ಯಾಂಡೇಜ್ ಹಾಕಬೇಕೆಂದು ಹಠ ಹಿಡಿದಿರುವ ವಿಚಿತ್ರ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಜೂನ್ 7): ರಸ್ತೆ ಅಪಘಾತದಲ್ಲಿ ಗಾಯವಾಗಿ ರಕ್ತ ಸೋರುತ್ತಿದ್ದರೂ ತಮಗೆ ಬ್ಯಾಂಡೇಜ್ ಹಾಕಲು ಲೇಡಿ ನರ್ಸೇ ಬೇಕೆಂದು ಗಾಯಾಳು ಯುವಕರು ಹಠ ಹಿಡಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲೇಡಿ ನರ್ಸ್​ ಇಲ್ಲವೆಂಬ ಕಾರಣಕ್ಕೆ ಯುವಕರಿಬ್ಬರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ.

ಬೈಕ್ ಆ್ಯಕ್ಸಿಡೆಂಟ್​ನಲ್ಲಿ ಗಾಯಗೊಂಡ ಇಬ್ಬರು ಯುವಕರನ್ನು ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ನಾಗಪ್ಪ ರೆಡ್ಡಿ ಲೇಔಟ್​ನ ಶ್ರೀಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ 4.15ರ ವೇಳೆಗೆ ಆಸ್ಪತ್ರೆಗೆ ಬಂದ ಕಿರಣ್ ಕುಮಾರ್ ಮತ್ತು ಹೇಮಂತ್ ಎಂಬ ಗಾಯಾಳು ಯುವಕರ ಕಾಲು, ಕೈಯಿಂದ ರಕ್ತ ಸೋರುತ್ತಿದ್ದರೂ ಪುರುಷ ನರ್ಸ್​ಗಳ ಕೈಯಿಂದ ಡ್ರೆಸಿಂಗ್ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದರು. ಲೇಡಿ ನರ್ಸ್​ಗಳಿದ್ದರೆ ಮಾತ್ರ ಬ್ಯಾಂಡೇಜ್ ಹಾಕಿ ಎಂದು ಗಲಾಟೆ ಮಾಡಿದ್ದಾರೆ.

ಇದನ್ನೂ ಓದಿ: Bangalore Swiggy: ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ಫ್ರೀ ಊಟ ಕೊಡದಿದ್ದಕ್ಕೆ ತಲೆಯನ್ನೇ ಒಡೆದರು!

ಈ ಬಗ್ಗೆ ಶ್ರೀಲಕ್ಷ್ಮಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ವಿಚಾರಕ ಡಾ. ಎಂ.ಬಿ. ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮೇಲೆ ಮನಬಂದಂತೆ ಕೂಗಾಡಿದ ಇಬ್ಬರು ಯುವಕರು ತಮಗೆ ಲೇಡಿ ನರ್ಸ್​ ಬೇಕೆಂದು ಗಲಾಟೆ ಮಾಡಿದರು. ಬ್ಯಾಂಡೇಜ್ ಹಾಕಲು ಹೋದ ಪ್ರಶಾಂತ್ ಎಂಬ ಪುರುಷ ನರ್ಸ್​ ಮೇಲೆ ಹಲ್ಲೆಯನ್ನೂ ಮಾಡಿದರು. ನಂತರ ತಮ್ಮ ಸ್ನೇಹಿತರಿಗೆ ಫೋನ್ ಮಾಡಿ, ಈ ಆಸ್ಪತ್ರೆಯವರು ನಮಗೆ ಹಿಂಸೆ ನೀಡುತ್ತಿದ್ದಾರೆಂದು ಸುಳ್ಳು ಹೇಳಿ ಅವರನ್ನೂ ಕರೆಸಿಕೊಂಡರು. ಆಸ್ಪತ್ರೆಗೆ ಬಂದ ಆತನ ಸ್ನೇಹಿತರು ಕೂಡ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ಇಬ್ಬರು ಯುವಕರು ನಿಜವಾಗಿಯೂ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರಾ ಅಥವಾ ಆಸ್ಪತ್ರೆಯವರೇ ಸುಳ್ಳು ದೂರು ನೀಡಿದ್ದಾರಾ, ಲೇಡಿ ನರ್ಸ್ ಇಲ್ಲವೆಂಬ ಕಾರಣಕ್ಕೆ ಅಲ್ಲಿ ಗಲಾಟೆ ನಡೆಯಿತಾ? ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.
Published by:Sushma Chakre
First published: