Bangalore Murder: ಮಲಗುವ ಜಾಗಕ್ಕಾಗಿ ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ಚಪ್ಪಲಿಯಿಂದ ಸಿಕ್ಕಿಬಿದ್ದ ಕೊಲೆಗಾರ!

Bangalore Crime News | ಕೊಲೆಯಾದ ಸ್ಥಳದಲ್ಲಿ ರಕ್ತದಲ್ಲಿ ಚಪ್ಪಲಿ ಹೆಜ್ಜೆ ಗುರುತು ಕಂಡು ಬಂದಿದ್ದು ಪೊಲೀಸರು ಆ ಹೆಜ್ಜೆ ಗುರುತಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಕೆಲವು ಸ್ಥಳೀಯರು ಪಾರ್ಕ್ ನಲ್ಲಿ ಹಲವಾರು ಜನ ಮಲಗುತ್ತಿದ್ದರು ಎಂದು ಮಾಹಿತಿ ನೀಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂನ್ 7): ಅದು ಯಾವುದೇ ಥ್ರಿಲ್ಲರ್ ಸಿನಿಮಾಗಳಿಗಿಂತ ಕಡಿಮೆಯಿಲ್ಲದ ನೈಜ ಘಟನೆ. ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಸುಳಿವೆ ಇಲ್ಲದ ಕೇಸಲ್ಲಿ ಕುತೂಹಲಕಾರಿಯಾಗಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 

ಅದು ಸಾರ್ವಜನಿಕರು ವಾಕಿಂಗ್ ಮಾಡಲೆಂದು ಬಿಡಿಎ ನಿರ್ಮಾಣ ಮಾಡಿದ್ದ ಪಾರ್ಕ್. ಆದರೆ, ಇತ್ತೀಚಿಗೆ ಲಾಕ್ ಡೌನ್ ಇದ್ದರಿಂದ ಜನರ ಓಡಾಟ ಕಡಿಮೆಯಾಗಿದ್ದು ಅಲ್ಲಿ ಒಂದಷ್ಟು ಬೇರೆ ಬೇರೆ ಜನ ಬಂದು ಉಳಿದುಕೊಳ್ಳುತ್ತಿದ್ದರು. ಹೀಗೆ ಕಳೆದ ಮೇ 15 ರಂದು ಇಬ್ಬರು ವ್ಯಕ್ತಿಗಳು ಪಾರ್ಕ್ ನಲ್ಲಿ ಮಲಗುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು ಈ ವೇಳೆ ಓರ್ವನ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ.

ಕಲಬುರಗಿ ಮೂಲದ ಅಶೋಕ್ ಸುಮಾರು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದರಿಂದ ಬಾಬುಸಾಬ್ ಪಾಳ್ಯದ ಬಿಡಿಎ ಪಾರ್ಕ್ ನಲ್ಲಿ ರಾತ್ರಿ ವೇಳೆ ಮಲಗೋಕೆ ವ್ಯವಸ್ಥೆ ಮಾಡಿಕೊಂಡಿದ್ದನಂತೆ. ಹೀಗೆ ಮೇ 15ರ ರಾತ್ರಿ ಪಾರ್ಕ್ ನಲ್ಲಿ ಮಲಗಲು ಹೋದಾಗ ಅಲ್ಲಿ ಆಶೋಕ್ ಮತ್ತು ಸತೀಶ್ ನಡುವೆ ಜಾಗದ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಸತೀಶ್ ತನ್ನ ಬಳಿಯಿದ್ದ ಮಚ್ಚಿನಿಂದ ಸುಮಾರು 15ಕ್ಕೂ ಹೆಚ್ಚು ಬಾರಿ ಅಶೋಕ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಬಳಿಕ ಕೊಲೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿ ಸುಳಿವು ಪತ್ತೆಗೆ ನಾನಾ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ: Bangalore Swiggy: ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ಫ್ರೀ ಊಟ ಕೊಡದಿದ್ದಕ್ಕೆ ತಲೆಯನ್ನೇ ಒಡೆದರು!

ಇನ್ನೂ ಪೊಲೀಸರ ತನಿಖೆ ವೇಳೆ ಇಬ್ಬರು ಸಹ ಚಿಂದಿ ಹಾಯುವವರು ಎಂದು ತಿಳಿದು ಬಂದಿದೆ. ಇಬ್ಬರು ಸಹ ಮೊಬೈಲ್ ಬಳಸುತ್ತಿಲ್ಲ ಎಂದು ತಿಳಿದು ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಈ ವೇಳೆ ಕೊಲೆಯಾದ ಸ್ಥಳದಲ್ಲಿ ರಕ್ತದಲ್ಲಿ ಚಪ್ಪಲಿ ಹೆಜ್ಜೆ ಗುರುತು ಕಂಡು ಬಂದಿದ್ದು ಪೊಲೀಸರು ಆ ಹೆಜ್ಜೆ ಗುರುತಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಕೆಲವು ಸ್ಥಳೀಯರು ಪಾರ್ಕ್ ನಲ್ಲಿ ಹಲವಾರು ಜನ ಮಲಗುತ್ತಿದ್ದರು ಎಂದು ಮಾಹಿತಿ ನೀಡಿದ್ದರು.

ಪೊಲೀಸರು ಪಾರ್ಕ್ ನಲ್ಲಿ ಮಲಗುತ್ತಿದ್ದ ಸುಮಾರು 50 ಜನರನ್ನ ಠಾಣೆಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಹಾಗೂ ಅವರ ಅರಿವಿಗೆ ಬರದಂತೆ ನೀರಿನಲ್ಲಿ ಚಪ್ಪಲಿ ಕಾಲನ್ನ ತೊಳೆದು ನಂತರ ಮರಳಿನ ಮೇಲೆ ಹೆಜ್ಜೆ ಗುರುತು ಬರುವ ಹಾಗೆ ಇಡಿಸಿದ್ದಾರೆ. ಹೀಗೆ 50 ಮಂದಿ ಹೆಜ್ಜೆಯಲ್ಲಿ ಸತೀಶ್ ನ ಹೆಜ್ಜೆ ರಕ್ತದ ಕಲೆ ಹೆಜ್ಜೆಗೆ ಹೋಲಿಕೆಯಾಗಿದೆ. ಕೂಡಲೇ ಪೊಲೀಸರು ಸತೀಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.

ಸದ್ಯ ಹೆಣ್ಣೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸತೀಶ್​ನನ್ನು ಬಂಧಿಸಿದ್ದಾರೆ. ಅದೇನೇ ಇರಲಿ ಸಣ್ಣ ಸುಳಿವು ಇರದ ಕೊಲೆ ಕೇಸ್ ಗೆ ಚಪ್ಪಲಿ ಕೊಟ್ಟ ಸುಳಿವು ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ರೀತಿ ಕೇಸ್ ಪತ್ತೆ ಹಚ್ಚಲು ಕಾರಣವಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
Published by:Sushma Chakre
First published: