Bengaluru Crime: ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್ ದಂಧೆ ಪತ್ತೆ; ಐವರನ್ನು ಬಂಧಿಸಿದ ಪೊಲೀಸರಿಗೆ 50 ಸಾವಿರ ರೂ. ಬಹುಮಾನ

Bengaluru Crime News: ಅಂತಾರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡಿ ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಮತ್ತೊಂದು ದೊಡ್ಡ ಗ್ಯಾಂಗ್ ಎಟಿಸಿ ಬಲೆಗೆ ಬಿದ್ದಿದೆ.

ಬೆಂಗಳೂರಲ್ಲಿ ಸೀಜ್ ಆದ ಡಿವೈಸ್​ಗಳು

ಬೆಂಗಳೂರಲ್ಲಿ ಸೀಜ್ ಆದ ಡಿವೈಸ್​ಗಳು

  • Share this:
ಬೆಂಗಳೂರು (ಜೂನ್ 15): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಲಾಕ್​ಡೌನ್ ಇದ್ದಾಗಲೂ ಅಪರಾಧ ಪ್ರಕರಣಗಳು ಮಾತ್ರ ಕಡಿಮೆಯಾಗಿರಲಿಲ್ಲ. ಅದೊಂದು ನಟೋರಿಯಸ್ ಗ್ಯಾಂಗ್. ಸ್ವಯಂ ಅಕ್ರಮ ಟೆಲಿಫೋನ್ ಎಕ್ಸ್​ಚೇಂಜ್ ದಂಧೆಯನ್ನೆ ಆರಂಭಿಸಿದ ಆ ಖದೀಮರು ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟು ಮಾಡಿ ತಮ್ಮ ದಂಧೆ ಶುರು ಮಾಡಿದ್ದರು. ಇಂತಹ ಗ್ಯಾಂಗ್​ವೊಂದನ್ನು ಎಟಿಸಿ ತಂಡ ಬಂಧಿಸಿದೆ.

ಅಕ್ಕಪಕ್ಕದ ಬಾಹ್ಯ ಶಕ್ತಿಗಳ ಉಪಟಳ ನಿಯಂತ್ರಣ, ಸ್ನೇಹವೃದ್ಧಿಯ ಬಗ್ಗೆ ಭಾರತ ಮುಂದಡಿಯಿಡುತ್ತಿದ್ದರೆ, ಇತ್ತ ನಮ್ಮದೇ ದೇಶದೊಳಗಿನ ಕೆಲವು ದುಷ್ಟ ವ್ಯಕ್ತಿಗಳು ತಮ್ಮದೇ ಪಡೆ ಕಟ್ಟಿಕೊಂಡು ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ನಡೆಸ್ತಿರೋದು ಪತ್ತೆಯಾಗಿದೆ. ಬೆಂಗಳೂರಿನ ಭಯೋತ್ಪಾದನಾ ನಿಗ್ರಹ ದಳ ಮತ್ತೆ ಐವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ದೊಡ್ಡ ಜಾಲವನ್ನು ಭೇದಿಸಿದ್ದಾರೆ.

ಇದನ್ನೂ ಓದಿ: ಕೊಡಗು: ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವವರಿಗೆ ವ್ಯಾಕ್ಸಿನ್ ವಿತರಣೆ

ಹೌದು..‌. ಅಂತಾರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡಿ ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಮತ್ತೊಂದು ದೊಡ್ಡ ಗ್ಯಾಂಗ್ ಎಟಿಸಿ ಬಲೆಗೆ ಬಿದ್ದಿದೆ. ದೂರಸಂಪರ್ಕ ಇಲಾಖೆಯಲ್ಲದೆ ದೇಶದ ಭದ್ರತೆಗೂ ಆತಂಕ ತಂದೊಡ್ಡುತ್ತಿದ್ದ ಐವರು ಆರೋಪಿಗಳನ್ನ ಬೆಂಗಳೂರು, ಕೇರಳ ಮತ್ತು ತಮಿಳುನಾಡಿನಲ್ಲಿ ಎಟಿಸಿ ತಂಡ ಬಂಧಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಇಬ್ರಾಹಿಂ ಮತ್ತು ಗೌತಮ್ ಬಂಧಿಸಿದ ಎಟಿಸಿ ತಂಡ ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳು ಕೊಟ್ಟ ಸುಳಿವಿನ ಮೇಲೆ ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೋರಮಂಗಲ ಹಾಗೂ ಮೈಕೋ ಲೇಔಟ್, ಬಿಟಿಎಂ ಲೇಔಟ್ ನಲ್ಲಿ ದಾಳಿ ನಡೆಸಿದ ಎಟಿಎಸ್ ತಂಡ ಕೇರಳ ಮೂಲದ ಮಹಮ್ಮದ್ ಬಷೀರ್, ಅನಸ್ ಅತ್ತಿಮನ್ನೀಲ್, ಹಾಗೂ ತಮಿಳುನಾಡಿನ ತೂತುಕುಡಿಯ ಸಂತನ್ ಕುಮಾರ್, ಸುರೇಶ್ ತಂಗವೇಲು ಹಾಗೂ  ಜೈ ಗಣೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Sanchari Vijay RIP| ಸಂಚಾರಿ ವಿಜಯ್ ಹುಟ್ಟೂರಲ್ಲಿ ನೀರವ ಮೌನ; ನಟನನ್ನು ನೆನೆದು ಕಣ್ಣೀರಿಟ್ಟ ಗೆಳೆಯ, ಸಾಕಿ ಬೆಳೆಸಿದ ತಾಯಿ!

ಎಟಿಸಿ ಪೊಲೀಸರ ದಾಳಿ ವೇಳೆ ಕೃತ್ಯಕ್ಕೆ ಬಳಕೆಯಾಗುತ್ತಿದ್ದ ಟೆಲಿಫೋನ್ ಎಕ್ಸ್​ಚೇಂಜ್ ಉಪಕರಣಗಳ ಸಹಿತ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಆಪರೇಟ್ ಮಾಡುತ್ತಿದ್ದ ಇಬ್ರಾಹಿಂ, ಗೌತಮ್, ಮಹಮ್ಮದ್ ಬಶೀರ್ ಹಾಗೂ ಅನಸ್ ತಮಿಳುನಾಡು ಮೂಲದ ಸಂತನ್ ಕುಮಾರ್ ಮೂಲಕ ನಕಲಿ ಸಿಮ್ ಕಾರ್ಡ್ ತರಿಸಿಕೊಳ್ತಿದ್ರಂತೆ. ಸಿಮ್ ಕಾರ್ಡ್ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ ಸಂತನ್ ಕುಮಾರ್ ಸಾವಿರಾರು ಸಿಮ್ ಕಾರ್ಡ್​ಗಳನ್ನು ಪೂರೈಕೆ ಮಾಡಿದ್ದನಂತೆ. ಇನ್ನು, ಸಿಮ್ ಬಾಕ್ಸ್ ಡಿವೈಸ್ ಮತ್ತಿತರ ಉಪಕರಣಗಳನ್ನು ಕೇರಳ ಮೂಲದ ಮತ್ತಿಬ್ಬರು ಆರೋಪಿಗಳು ಕಳಿಸಿಕೊಡುತ್ತಿದ್ದು ಆ ಮೂಲಕ  ಬೆಂಗಳೂರಿನಲ್ಲಿ ಕುಳಿತು ವಿಶ್ವದ ಎಲ್ಲಿಂದ ಕರೆ ಬಂದರೂ ಅದನ್ನ ಸುಲಭವಾಗಿ ಸ್ಥಳೀಯ ಕರೆಯನ್ನಾಗಿ ಕನ್ವರ್ಟ್ ಮಾಡಿ ಹಣ ಮಾಡುತ್ತಿದ್ದರಂತೆ.

ಸದ್ಯ ಈ ಬೃಹತ್ ಟೆಲಿಫೋನ್ ಎಕ್ಸ್ಚೇಂಜ್ ಜಾಲ ಬೇಧಿಸಿದ ಎಟಿಸಿ ತಂಡ 3 ಸಾವಿರಕ್ಕೂ ಅಧಿಕ ಸಿಮ್ ಕಾರ್ಡ್ಸ್, 109 ಸಿಮ್ ಬಾಕ್ಸ್ ಡಿವೈಸ್, 23 ಲ್ಯಾಪ್‌ಟಾಪ್ಸ್, 10 ಪೆನ್ ಡ್ರೈವ್, 14 ಯುಪಿಎಸ್, 17ರೂಟರ್ಸ್ ಗಳನ್ನ ವಶಕ್ಕೆ ಪಡೆದಿದೆ. ಬೆಂಗಳೂರು ಎಟಿಸಿ ಪೊಲೀಸರಿಗೆ ಆರಂಭಿಕ ಯಶಸ್ಸು ದೊರೆತಿದ್ದು ಕಾರ್ಯಾಚರಣೆಯಲ್ಲಿ ಭಾಗಿಯಾದ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್  50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ‌‌.
Published by:Sushma Chakre
First published: