Bangalore Crime: ಆರು ತಿಂಗಳಲ್ಲಿ 10 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ ಬೆಂಗಳೂರು ಪೊಲೀಸರು

2,500 ಕೆಜಿ ಗಾಂಜಾ, 960 ಗ್ರಾಂ ಅಫೀಮ್, ಹೇರಾಯಿನ್ 872 ಗ್ರಾಂ, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಸ್ ಆಯಿಲ್, 96.43 ಗ್ರಾಂ ಕೊಕೇನ್​​ನ್ನು ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜೂ.26): ಇಂದು ಅಂತರಾಷ್ಟ್ರೀಯ ಮಾದಕ ವಸ್ತು ರಹಿತ ದಿನಾಚರಣೆ. ಹೀಗಾಗಿ ಬೆಂಗಳೂರು ಪೊಲೀಸರು ವರ್ಷವಿಡೀ ಜಪ್ತಿಯಾದ ಮಾದಕ ವಸ್ತುಗಳ ವಿಲೇವಾಡಿ ಪರೇಡ್ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಪರೇಡ್ ನಡೆದಿದೆ. ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್, ಹಿರಿಯ ಎಡಿಜಿಪಿ ಮತ್ತು ಐಜಿಪಿಗಳು ಪರೇಡ್​ನಲ್ಲಿ ಭಾಗಿಯಾಗಿದ್ದರು. 

  ಆರು ತಿಂಗಳಲ್ಲಿ ಸುಮಾರು ಹತ್ತು ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿರುವ ಮಾದಕ ವಸ್ತುಗಳು  ಸಿಲಿಕಾನ್ ಸಿಟಿ ಬೆಂಗಳೂರಿಗೆ ಸರಬರಾಜಾಗುತ್ತಿದ್ದವು ಎಂದು ತಿಳಿದು ಬಂದಿದೆ.  ಡ್ರಗ್ಸ್ ಸೀಜ್ ಸಂಬಂಧ ಸುಮಾರು 382 ಪ್ರಕರಣಗಳು ದಾಖಲಾಗಿವೆ.  ಬೆಂಗಳೂರಿನ ಎಂಟು ವಿಭಾಗ ಮತ್ತು ಸಿಸಿಬಿ ಪೊಲೀಸರು ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

  2,500 ಕೆಜಿ ಗಾಂಜಾ, 960 ಗ್ರಾಂ ಅಫೀಮ್, ಹೇರಾಯಿನ್ 872 ಗ್ರಾಂ, 82 ಗ್ರಾಂ ಎಂಡಿಎಂಎ ಮಾತ್ರೆ, 9.4 ಕೆಜಿ ಚರಸ್, 90 ಕೆಜಿ ಮೆಥಾಕ್ಲೀನ್, 10.2 ಕೆಜಿ ಹ್ಯಾಶಿಸ್ ಆಯಿಲ್, 96.43 ಗ್ರಾಂ ಕೊಕೇನ್​​ನ್ನು ವಶಕ್ಕೆ ಪಡೆದಿದ್ದಾರೆ.

  ಇದನ್ನೂ ಓದಿ:C.P.Yogeshwar: ಪರೀಕ್ಷೆ ಬರೆದು ರಿಸಲ್ಟ್ ನೋಡಲು ದೆಹಲಿಗೆ ಬಂದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

  ಲಾಕ್ ಡೌನ್ ವೇಳೆಯೂ ನಗರಕ್ಕೆ ಸರಾಗವಾಗಿ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಕಲೆ ಹಾಕಿದ ಬೆಂಗಳೂರು ಪೊಲೀಸರು ಸುಮಾರು  10 ಕೋಟಿ ಮೌಲ್ಯದ ಮಾದಕವಸ್ತುಗಳನ್ನ ಜಪ್ತಿ ಮಾಡಿದ್ದಾರೆ.

  ಇನ್ನು, ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಎನ್ ಸಿಬಿ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.  ಅಲ್ಪ್ರಾಜೋಲಂ ಡ್ರಗ್ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ, ಸುಮಾರು 92 ಕೆಜಿ ಅಲ್ಪ್ರಾಜೋಲಂ ಡ್ರಗ್ಸ್ ಹಾಗೂ 62 ಲಕ್ಷ ನಗದು ಹಣ ಜಪ್ತಿ ಮಾಡಿದ್ದಾರೆ. ಜೊತೆಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಎನ್ ಸಿಬಿ ಬೆಂಗಳೂರು ಹಾಗೂ ಹೈದರಾಬಾದ್ ವಲಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

  ಕಳೆದ ಒಂದು ತಿಂಗಳಿಂದ ಅಲ್ಪ್ರಾಜೋಲಂ ಡ್ರಗ್ ತಯಾರಿಕಾ ಘಟಕ ಮತ್ತು ಸಾಗಣೆ ಮೇಲೆ ಎನ್​ಸಿಬಿ  ನಿಗಾ ಇಟ್ಟಿತ್ತು.  ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಿಗಾ ವಹಿಸಿತ್ತು.  ಖಚಿತ ಮಾಹಿತಿ ಮೇರೆಗೆ ನಿನ್ನೆ ಕೋಲಾರ ಕೈಗಾರಿಕಾ ಪ್ರದೇಶ ಮತ್ತು ಬೀದರ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.  ಕೋಲಾರದಲ್ಲಿ ದಾಳಿ ವೇಳೆ ಮಿನಿಟ್ರಕ್ ನಲ್ಲಿ ಅಲ್ರಾಜೋಲಂ ಡ್ರಗ್ಸ್ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು.  91.5 ಕೆಜಿ ಅಲ್ಪ್ರಾಜೋಲಂ ಡ್ರಗ್ಸ್ ವಶಕ್ಕೆ ಪಡೆದಿದ್ದರು.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

  ಇಂದು ಬೀದರ್ ಡ್ರಗ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದಾಗ, ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ಪೌಡರ್ ಗಳು ಪತ್ತೆಯಾಗಿವೆ. ಹೈದರಾಬಾದ್ ಮೂಲದ ವ್ಯಕ್ತಿಗೆ ಸೇರಿದ ಡ್ರಗ್ಸ್ ತಯಾರಿಕಾ ಘಟಕ ಎಂದು ತಿಳಿದು ಬಂದಿದೆ. ಹೈದರಾಬಾದ್ ಎನ್ ಸಿಬಿ ಅಧಿಕಾರಿಗಳು ಎನ್ ವಿ ರೆಡ್ಡಿ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಎನ್ ವಿ ರೆಡ್ಡಿ ಅಕ್ರಮವಾಗಿ ಅಲ್ಪ್ರಾಜೋಲಂ ಡ್ರಗ್ಸ್ ಘಟಕ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ದಾಳಿ ವೇಳೆ 62 ಲಕ್ಷ ನಗದು ಪತ್ತೆಯಾಗಿದೆ.

  ಪ್ರಕರಣದ ಕಿಂಗ್ ಪಿನ್ ಎಸ್ ಭಾಸ್ಕರ್, ಕೆಮಿಕಲ್ ಎಕ್ಸ್ ಫರ್ಟ್ ವೈ ವಿ ರೆಡ್ಡಿ ಎಂಬುದು ಬೆಳಕಿಗೆ ಬಂದಿದೆ. ಎನ್ ಸಿಬಿ ದಾಳಿ ವೇಳೆ ಈ ಇಬ್ಬರು ವ್ಯಕ್ತಿಗಳು ಎಸ್ಕೇಪ್ ಆಗಲು ಯತ್ನಿಸಿದ್ದರು. ಎನ್ ಸಿಬಿ ಅಧಿಕಾರಿಗಳ ಚಾಕಚಕ್ಯತೆಯಿಂದ ಇಬ್ಬರನ್ನು ಬಂಧಿಸಲಾಗಿದೆ.  ಅಕ್ರಮ ಡ್ರಗ್ಸ್ ತಯಾರಿಕಾ ಘಟಕ ಸಂಬಂಧ ಐವರನ್ನು ಅರೆಸ್ಟ್ ಮಾಡಲಾಗಿದೆ. ಎಸ್ ಭಾಸ್ಕರ್, ವೈ ವಿ ರೆಡ್ಡಿ, ಎಸ್ ಮೆನನ್, ಅಮೃತ್ ಮತ್ತು ಎನ್ ವಿ ರೆಡ್ಡಿಯನ್ನು ಬಂಧಿಸಲಾಗಿದೆ.  ಎನ್ ಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
  Published by:Latha CG
  First published: