ಐಷಾರಾಮಿ ಕಾರುಗಳು, ಮೋಜು-ಮಸ್ತಿಗಾಗಿ ಕಳ್ಳತನಕ್ಕೆ ಇಳಿದಿದ್ದವನು ಸಿಕ್ಕಿಬಿದ್ದಿದ್ದೇ ರೋಚಕ!

ದೊಡ್ಡ ಬಡಾವಣೆಗಳ ಮೇಲೆ ಕಣ್ಣಿಟ್ಟ ಅಸಾಮಿ ಒಂಟಿ ಮನೆಗಳನ್ನ ಗಮನಿಸಿ ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿದ್ದ ಹಣ ಆಭರಣ ಎತ್ತೊಯ್ದು ಅದರಲ್ಲಿ ಐಷಾರಾಮಿ ಕಾರುಗಳನ್ನ ಖರೀದಿ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ.

ಕದ್ದ ಆಭರಣ, ನಗದು

ಕದ್ದ ಆಭರಣ, ನಗದು

 • Share this:
  ಬೆಂಗಳೂರು: ಇತನಿಗೆ ಐಷಾರಾಮಿ ಜೀವನ ನಡೆಸೋ ಕನಸು, ಕೈಯಲ್ಲಿ ಕೆಲಸ ಇಲ್ಲದೆ ಇದ್ರು ಹೇಗಾದರು ಮಾಡಿ ಹಣ ಮಾಡಬೇಕು ಅನ್ನೋ ಹಪಾಹಪಿ. ಕೊನೆಗೆ ಹಣ ಮಾಡಲು ಇತ ಹಿಡಿದಿದ್ದು ಮಾತ್ರ ಅಡ್ಡದಾರಿ. ಜೀವನ ನಡೆಸಲು ಏನೇನೂ ಸರ್ಕಸ್ ಮಾಡಿದ ಆತ ಕೊನೆಗೆ ಕಳ್ಳತನ ಮಾಡೋದನ್ನ ಕಸುಬಾಗಿಸಿಕೊಂಡಿದ್ದ. ಹೀಗೆ ಮೂರು ರಾಜ್ಯಗಳಲ್ಲಿ ಕಳ್ಳತನ ಮಾಡ್ತಿದ್ದ ಚೋರನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

  ಸಿಸಿಬಿ ಬಲೆಗೆ ಬಿದ್ದಿರುವ ಈತನ ಹೆಸರು ಬಸವರಾಜ ಪ್ರಕಾಶ್ ಅಲಿಯಾಸ್ ಜಂಗ್ಲಿ. ಮೈಸೂರು ರಸ್ತೆಯ ಬಿಡದಿ ಮೂಲದ ಈ ಬಸವರಾಜ ಪ್ರಕಾಶ್ ಗೆ ಮೋಜಿನ ಜೀವನ ನಡೆಸಬೇಕು ಅನ್ನೋ ಖಯಾಲಿ ಸದಾ ಕಾಡುತ್ತಿತ್ತು. ಅದರೆ ಐಷಾರಾಮಿ ಜೀವನ ನಡೆಸಲು ಹಣಕಾಸು ಮತ್ತು ಸಂಪಾದನೆ ಇಲ್ಲದೆ ಇದ್ದರಿಂದ ಬಸವರಾಜ ಅಲಿಯಾಸ್ ಜಂಗ್ಲಿ ಕಳ್ಳತನ ಮಾಡುವ ವಾಮಮಾರ್ಗಕ್ಕೆ ಇಳಿದಿದ್ದ.

  ಹೀಗೆ ನಗರದಲ್ಲಿ ದೊಡ್ಡ ಬಡಾವಣೆಗಳ ಮೇಲೆ ಕಣ್ಣಿಟ್ಟ ಅಸಾಮಿ ಒಂಟಿ ಮನೆಗಳನ್ನ ಗಮನಿಸಿ ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿದ್ದ ಹಣ ಆಭರಣ ಎತ್ತೊಯ್ದು ಅದರಲ್ಲಿ ಐಷಾರಾಮಿ ಕಾರುಗಳನ್ನ ಖರೀದಿ ಮಾಡಿ ಮೋಜಿನ ಜೀವನ ನಡೆಸಲು ಮುಂದಾಗಿದ್ದ. ಹೀಗೆ ಬೆಂಗಳೂರು, ಹೈದರಾಬಾದ್, ತಮಿಳುನಾಡು ಸೇರಿ ಹಲವೆಡೆ ಕಳ್ಳತನ ಮಾಡಲು ಮುಂದಾಗಿದ್ದ ಬಸವರಾಜ್ ಪ್ರತಿ ಬಾರಿ ಒಂದೊಂದು ಐಷಾರಾಮಿ ಕಾರಿನಲ್ಲಿ ನಗರದಲ್ಲಿ ಓಡಾಡುತ್ತಿದ್ದನಂತೆ. ಅದ್ರೆ ಇತ್ತೀಚಿಗೆ ಆತನ ಮೇಲೆ ನಿಗಾ ಇಟ್ಟಿದ್ದ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ತಮ್ಮ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಇದನ್ನೂ ಓದಿ: ನೀರಿಗೆ ಬಿದ್ದಿದ್ದ ನಾಲ್ವರು ಸಹೋದರರು ಶವವಾಗಿ ಪತ್ತೆ; ಮೂರು ದಿನಗಳ ಕಾರ್ಯಾಚರಣೆ ದುರಂತ ಅಂತ್ಯ

  ಇನ್ನೂ ಆರೋಪಿ ಬಸವರಾಜನಿಗಾಗಿ ಆಂಧ್ರ ಮತ್ತು ಬೆಂಗಳೂರು ಪೊಲೀಸರು ಶೋಧ ನಡೆಸಿದ್ದರು. ಬರೋಬ್ಬರಿ ಒಂದು ವರ್ಷದಿಂದ ಬೆಂಗಳೂರು ಸಿಸಿಬಿ ಪೊಲೀಸರು ಆತನಿಗೆ ಹುಡುಕಾಟ ನಡೆಸಿದ್ರು ಆತ ಮಾತ್ರ ಪೊಲೀಸರ ಕಣ್ತಪ್ಪಿಸಿ ಮೂರು ರಾಜ್ಯಗಳಲ್ಲಿ ರೌಂಡಿಂಗ್ ಮಾಡುತ್ತಲೇ ಇದ್ದ. ಅದ್ರೆ ಸಿಸಿಬಿ ಪೊಲೀಸರ ನಿರಂತರ ಪ್ರಯತ್ನದಿಂದಾಗಿ ಬಸವರಾಜ್ ಬೆಂಗಳೂರಿನಲ್ಲೆ ಖಾಕಿ ಬಲೆಗೆ ಬಿದ್ದಿದ್ದಾನೆ.

  ಇನ್ನೂ ಆರೋಪಿ ಬಸವರಾಜ್ ಬಂಧನದಿಂದ 10 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆಯೂ ಸಹ ಬೆಂಗಳೂರು ಪೊಲೀಸರು 11 ಬಾರಿ ಬಂಧಿಸಿ ಜೈಲಿಗಟ್ಟಿದ್ದಾರೆ. ಪುನಃ ಜೈಲಿನಿಂದ ಬಿಡುಗಡೆಯಾಗಿ ಹೊರ ಬರ್ತಿದಂತ್ತೆ ಮತ್ತೆ ತನ್ನ ಹಳೇ ಚಾಳಿ ಆರಂಭಿಸಿ ಕಳ್ಳತನಕ್ಕೆ ಇಳಿಯುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಬಸವರಾಜನಿಂದ 80 ಲಕ್ಷ ಮೌಲ್ಯದ 1 ಕೆಜಿ 347 ಗ್ರಾಂ ಚಿನ್ನಾಭರಣ, ಒಂದೂವರೆ ಲಕ್ಷ ನಗದು ಹಾಗೂ ಎರಡು ಕಾರುಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  ವರದಿ: ಮುನಿರಾಜು
  Published by:Kavya V
  First published: