ಬೆಂಗಳೂರು (ಅ. 14): ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು (Honey Trap In Bengaluru) ಹೆಚ್ಚಾಗುತ್ತಲೇ ಇದೆ. ಕಳೆದ ಮೂರು ದಿನಗಳ ಹಿಂದಷ್ಟೇ ಟೆಕ್ಕಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಹೈ ಟೆಕ್ ಹನಿಟ್ರ್ಯಾಪ್ (hitech Honeytrap) ಮಾಡುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ (annapuraneshwari nagar police) ಪೊಲೀಸರು ಬಂಧಿಸಿದ್ದಾರೆ. ವಿಐಪಿ, ಅಧಿಕಾರಿ ವರ್ಗ ಕಾಂಟ್ರಾಕ್ಟರ್ನಂತಹ ಭಾರೀ ಮನುಷ್ಯರನ್ನೇ ಈಕೆ ಹನಿಟ್ರ್ಯಾಪ್ಗೆ ಕೆಡವುತ್ತಿದ್ದಳು ಎಂಬುದು ತನಿಖೆ ವೇಳೆ ಬಯಲಾಗಿದೆ.
ಏನಿದು ಘಟನೆ
ನಗರದಲ್ಲಿ ಹೈಟೆಕ್ ಹನಿಟ್ರ್ಯಾಪ್ ನಡೆಸುತ್ತಿದ್ದ ಮಹಿಳೆಯೊಬ್ಬಳಿಂದ ವಂಚನೆಗೊಳ್ಳಗಾದ ಕಂಟ್ರಾಕ್ಟರ್ ಒಬ್ಬರು ಈ ಸಂಬಂಧ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತೆಯನ್ನು ವಿದ್ಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸಿವಿಲ್ ಕಾಂಟ್ರಾಕ್ಟರ್ ಲೋಹಿತ್ ಎಂಬುವವರು ಈಕೆ ವಿರುದ್ಧ ದೂರು ನೀಡಿದ್ದರು. ಫೋಟೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ.
ಹರ್ಬಲ್ ಲೈಫ್ ಪ್ರಾಡಕ್ಟ್ ಹೆಸರಿನಲ್ಲಿ ಪರಿಚಯ
ಹರ್ಬಲ್ ಲೈಫ್ ಪ್ರಾಡಕ್ಟ್ ಹೆಸರಿನಲ್ಲಿ ಸಿವಿಲ್ ಕಂಟ್ರಾಕ್ಟರ್ ಲೋಹಿತ್ ಅವರನ್ನು ಇಬ್ಬರು ಹುಡುಗರು ಭೇಟಿಯಾಗಿದ್ದರು. ಈ ವೇಳೆ ತಮ್ಮ ಉತ್ಪನ್ನದ ಕುರಿತು ತಿಳಿಸಿದ ಅವರು ಈ ಪ್ರೋಡಕ್ಟ್ ಬೇಕಿದ್ದರೆ, ಈ ನಂಬರ್ಗೆ ಕರೆ ಮಾಡಿ ಎಂದು ವಿದ್ಯಾ ನಂಬರ್ ಕೊಟ್ಟಿದ್ದರು. ಈ ವೇಳೆ ಕರೆ ಮಾಡಿದಾಗ, ಆರೋಪಿತೆ ವಿದ್ಯಾ ಜೊತೆ ಹರ್ಬಲ್ ಲೈಫ್ ಪ್ರೊಡಕ್ಟ್ ಖರೀದಿ ವಿಚಾರವಾಗಿ ಲೋಹಿತ್ಗೆ ಸ್ನೇಹ ಬೆಳೆದಿದೆ. ಇದಾದ ಬಳಿಕ ಇಬ್ಬರ ನಡುವಿನ ಸಂಭಾಷಣೆ ಸ್ನೇಹಕ್ಕೆ ತಿರುಗಿದೆ.
ಇದನ್ನು ಓದಿ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ ಸೌಂದರ್ಯ ತದ್ರೂಪಿ; ಯಾರು ಈಕೆ?
ಪರಿಚಯದ ಸಲಿಗೆ ಮೇರೆಗೆ ಲೋಹಿತ್ ಆಕೆಯನ್ನು ರೆಸಾರ್ಟ್ ವೊಂದರಲ್ಲಿ ಪಾರ್ಟಿಗೆ ಕರೆದೊಯದ್ದಿದ್ದಾರೆ. ಇದಾದ ಬಳಿಕ ವಿದ್ಯಾ ತಾವಿಬ್ಬರು ರೆಸಾರ್ಟ್ನಲ್ಲಿ ಜೊತೆಗಿದ್ದ ಪೋಟೋವನ್ನು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್
ರೆಸಾರ್ಟ್ನಲ್ಲಿ ಜೊತೆಗಿದ್ದ ಪೋಟೊವನ್ನು ತೋರಿಸಿ 1 ಕೋಟಿ ರೂ ಹಣ ನೀಡುವಂತೆ ಗೆಳೆಯನೊಂದಿಗೆ ಬಂದಿ ವಿದ್ಯಾ ಲೋಹಿತ್ಗೆ ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಪೆನ್ಡ್ರೈವ್ ಅನ್ನು ನೀಡಿದ್ದಾರೆ. ಅದಲರಲ್ಲಿ ಕೂಡ ಕಾಂಟ್ರಾಕ್ಟರ್ ಲೋಹಿತ್ ಹಾಗೂ ವಿದ್ಯಾ ಜೊತೆಗಿದ್ದ ಫೋಟೊಗಳಿದ್ದವು. ಇಷ್ಟಕ್ಕೂ ಲೋಹಿತ್ ಜಗ್ಗದಿದ್ದಾಗ ವಿದ್ಯಾ ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಇದಾದ ಬಳಿಕ ಲೋಹಿತ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: ಸಿದ್ದರಾಮಯ್ಯ ಭೇಟಿ ವೇಳೆಯೇ ಕಲಬುರಗಿಯ ಗಡಿಕೇಶ್ವರದಲ್ಲಿ ಕಂಪಿಸಿದ ಭೂಮಿ
ಇನ್ನು ಆರೋಪಿತೆ ವಿದ್ಯಾ ಇದೇ ರೀತಿ ಅನೇಕರಿಗೆ ಹನಿಟ್ರ್ಯಾಪ್ ಮಾಡಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈಕೆ ತಾನು ತಮಿಳುನಾಡು ಕಾಂಗ್ರೆಸ್ ಸದಸ್ಯೆ ಎಂದು ಹೇಳಿಕೊಂಡು ವಂಚಿಸಿರುವುದು ತನಿಖೆ ವೇಳೆ ಬಯಲಾಗಿದೆ.
ಮೂರು ದಿನದ ಹಿಂದೆಯಷ್ಟೇ ಹನಿಟ್ರ್ಯಾಪ್ ಗ್ಯಾಂಗ್ ಬಂಧನ
ಸೂಪರ್ ಮಾರ್ಕೆಟ್ ಗೆ ತರಕಾರಿ ತರಲು ಹೋಗಿದ್ದ ಟೆಕ್ಕಿಗೆ ಆ ವೇಳೆ ಮಹಿಳೆಯ ಪರಿಚಯ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಯ ರೂಮ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಟೆಕ್ಕಿಯ ಪೋಟೊ ಕ್ಲಿಕ್ ಮಾಡಿ ಆನಂತರ ಬ್ಲಾಕ್ ಮೇಲ್ ಮಾಡಿದ್ದಾರೆ. ಹತ್ತು ಲಕ್ಷ ನೀಡುವಂತೆ ಧಮ್ಕಿ ಹಾಕಿದ್ದಾರೆ. ಹಣ ನೀಡದಿದ್ದಲ್ಲಿ ಪೋಟೊ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಹಣ ಕೊಡಲು ಒಪ್ಪದಿದ್ದಾಗ ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಸೇರಿ ಐಫೋನ್ ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಟೆಕ್ಕಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮೈಕೋ ಲೇಔಟ್ ಪೊಲೀಸರು, ಐವರ ಗ್ಯಾಂಗ್ ಬಂಧಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ