Accused Arrested: ಅಪ್ರಾಪ್ತನ ಜೊತೆ ಗೃಹಿಣಿಯ ಸರಸ; ಯುವಕನಿಗೆ ಅವಳು ಬೇಡವಾದಾಗ ನಡೆಯಿತು ಅನಾಹುತ!

Banashankari Women Murder Twist: ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದೆ. ಗಂಡನ ಕಿರುಕುಳ ತಾಳಲಾರದೆ ಬಾಲಕನಿಗೆ ಎಲ್ಲಾದರೂ ದೂರ ಹೋಗೋಣ ಎಂದು  ಹೇಳುತ್ತಿದ್ದಳಂತೆ. ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸಿದ್ದ.

ಮೃತ ಗೃಹಿಣಿ

ಮೃತ ಗೃಹಿಣಿ

  • Share this:
ಬೆಂಗಳೂರು: ಬನಶಂಕರಿ ಠಾಣಾ ವ್ಯಾಪ್ತಿಯ (banashankari police station) ಯಾರಬ್ ನಗರದಲ್ಲಿ(yarab nagar) ನಡೆದಿದ್ದ ಮಹಿಳೆಯ ಕೊಲೆಗೆ ಟ್ವಿಸ್ಟ್ ಸಿಕ್ಕಿದೆ. ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಕೆಲವೇ ಗಂಟೆಗಳಲ್ಲಿ ಬನಶಂಕರಿ ಪೊಲೀಸರು  ಹಂತಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಯಾರಬ್ ನಗರದ ಮನೆಯೊಂದರಲ್ಲಿ ನಿನ್ನೆ ಸಂಜೆ 28 ವರ್ಷದ ಅಫ್ರೀಂ ಖನಂ ಎಂಬುವರ ಹತ್ಯೆಯಾಗಿತ್ತು‌.‌  ಮೆಲ್ನೋಟಕ್ಕೆ ಮಹಿಳೆಯ ಕೊಲೆಯನ್ನ ಪತಿಯೇ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದರು‌‌.

ಫಸ್ಟ್​​ ಪಿಯು ಓದುತ್ತಿದ್ದ ಯುವಕನ ಜೊತೆ ಗೃಹಿಣಿಯ ಸಲುಗೆ

ಈ ಸಂಬಂಧ ವಿಚಾರಣೆ ನಡೆಸಿದ್ದ ಇನ್ ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಮಹಿಳೆಯ ಪತಿ ಹಾಗೂ ಸಂಬಂಧಿಕರನ್ನು ಪ್ರಶ್ನಿಸಿದಾಗ ಹತ್ಯೆಗೆ ಗಂಡನಲ್ಲ, ಸಂಬಂಧಿಕನೇ ಕಾರಣ ಎಂಬುದು ಬಯಲಾಗಿದೆ. ಮಹಿಳೆಯ ಸಂಬಂಧಿಕನಾಗಿದ್ದ 17 ವರ್ಷದ ಬಾಲಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ಬಾಲಕ‌ ಖಾಸಗಿ ಕಾಲೇಜಿನಲ್ಲಿ ಫಸ್ಟ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.  ನಾಲ್ಕು ವರ್ಷಗಳಿಂದ ಮೃತ ಮಹಿಳೆ ಅಫ್ರೀಂ ಖಾನಂ ಈಕೆಯ ಪತಿ ಲಾಲು ವಾಸವಾಗಿದ್ದರು. ಪತಿ ಟಿಂಬರ್ ಯಾರ್ಡ್ ನಲ್ಲಿ ಕೆಲಸ‌ ಮಾಡುತ್ತಿದ್ದ‌. ದಂಪತಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು‌ ಮಕ್ಕಳಿದ್ದಾರೆ. ಕಳೆದ‌‌ ಆರು ತಿಂಗಳಿಂದ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗುತಿತ್ತು. ಪತ್ನಿಯು ಬೇರೆಯವರೊಂದಿಗೆ ಸಂಬಂಧ ಹೊಂದಿರುವುದಾಗಿ ಪತಿ ಗಲಾಟೆ ಮಾಡುತ್ತಿದ್ದ.

ಇಬ್ಬರ ನಡುವೆ ಅಕ್ರಮ ಸಂಬಂಧ..!? 

ಇದೇ ವಿಚಾರವಾಗಿ ಸೋಮವಾರ ಇಬ್ಬರು ನಡುವೆ ಜಗಳವಾಗಿತ್ತು. ಮೊಮ್ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಅತ್ತೆಗೆ ಅಳಿಯ ಲಾಲು ಸೂಚಿಸಿ ಕೆಲಸಕ್ಕೆ ಹೋಗಿದ್ದ. ಯಾರು ಇಲ್ಲದಿರುವುದನ್ನು ಮನಗಂಡಿದ್ದ ಸಂಬಂಧಿಕನಾಗಿದ್ದ ಬಾಲಕ‌ ಮಹಿಳೆ ಮನೆಗೆ ಬಂದಿದ್ದ. ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದೆ. ಗಂಡನ ಕಿರುಕುಳ ತಾಳಲಾರದೆ ಬಾಲಕನಿಗೆ ಎಲ್ಲಾದರೂ ದೂರ ಹೋಗೋಣ ಎಂದು  ಹೇಳುತ್ತಿದ್ದಳಂತೆ. ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸಿದ್ದ.

ಇದನ್ನೂ ಓದಿ: Banashankari Women Murder Twist: 17 ವರ್ಷದ ಬಾಲಕನೊಂದಿಗೆ ಲವ್ವಿಡವ್ವಿ; ಆಂಟಿ ಪ್ರೀತ್ಸೆ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ!

ಓಡಿ ಹೋಗಲು ಇಷ್ಟವಿಲ್ಲದೆ ಕೊಲೆ..!? 

ಮೊನ್ನೆ ಮಧ್ಯಾಹ್ನ ಸಹ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ. ಇಬ್ಬರು ಹೊಡೆದಾಡಿಕೊಂಡಿದ್ದಾರೆ.  ಈ ವೇಳೆ ಮನೆಯಲ್ಲಿದ್ದ ಚಾಕು ಹಾಗೂ ಕತ್ತರಿಯಿಂದ ಮನಬಂದಂತೆ ಚುಚ್ಚಿದ್ದಾನೆ‌. ತೀವ್ರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾಳೆ. ಸಹಜ ಸಾವು ಎಂದು ಬಿಂಬಿಸಲು ಹಾಸಿಗೆಗೆ ಬೆಂಕಿ ಹತ್ತಿಸಿದ್ದಾನೆ. ಆತಂಕದಿಂದಲೇ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡಿದ್ದಾನೆ.

ಅಪ್ರಾಪ್ತನನ್ನು ಬಂಧಿಸಿದ ಪೊಲೀಸರು 

ಹಾಸಿಗೆ ಬೆಂಕಿ ಕಿಡಿ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡಿತ್ತು. ಬಳಿಕ ಮನೆಯಿಂದ ಹೊಗೆ ಬರುತ್ತಿರುವುದನ್ನು‌ ಕಂಡು ಸ್ಥಳೀಯರು ಹಾಗೂ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆ ಪ್ರಕರಣ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಮಹಿಳೆಯ ಪತಿ ಲಾಲು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಮೃತ ಮಹಿಳೆಯ ಸಹೋದರಿ ಆಗಾಗ ಬಾಲಕ ಮನೆಗೆ ಬಂದು ಹೋಗುತ್ತಿದ್ದ ಎಂದು ಹೇಳಿಕೆ ನೀಡಿದ್ದರು. ಈ ಸುಳಿವನ್ನು ಆಧರಿಸಿ ಪೊಲೀಸರಿಗೆ ಶಂಕಿತನ ಕರೆ ವಿವರ ಹಾಗೂ ಕೃತ್ಯ ನಡೆಯುವಾಗ ಎಲ್ಲಿದ್ದ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಸಿದಾಗ ಬಾಲಕ ಮೆಲ್ನೋಟಕ್ಕೆ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ‌. ಬಳಿಕ ಕೋಣನಕುಂಟೆ ವಾಸವಾಗಿದ್ದ ಮನೆಯಲ್ಲಿ ಬಾಲಕನನ್ನ ವಶಕ್ಕೆ‌ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಗ್ಗೆ ಬಾಯ್ಬಿಟ್ಟಿದ್ದಾನೆ‌ ಎಂದು ಪೊಲೀಸರು ತಿಳಿಸಿದ್ದಾರೆ‌.
Published by:Kavya V
First published: