Bagalagunte Children Missing case: ಮೂವರು ಬಾಲಕರು ಪತ್ತೆ; ಪೇಪರ್​ ಆಯುವನ ಬಳಿ ಕೆಲಸ ಕೇಳಿದ್ದ ಮಕ್ಕಳು

ಶನಿವಾರ ಬೆಳಗ್ಗೆ ಎಂದಿನಂತೆ ಜಾಗಿಂಗ್ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ 5.30 ಕ್ಕೆ ಮನೆಯಿಂದ ಹೊರಟ್ಟಿದ್ದ ಮಕ್ಕಳು ನಾಪತ್ತೆಯಾಗಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಅ. 10): ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ 7 ಜನ ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಮೂವರು ಮಕ್ಕಳು ಪತ್ತೆ ಆಗಿದ್ದಾರೆ. ಬಾಗಲಗುಂಟೆ ಠಾಣ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ನಾಪತ್ತೆಯಾಗಿದ್ದ ಮೂರು ಜನ ಮಕ್ಕಳು ಇಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಳಿ ಪತ್ತೆಯಾಗಿದ್ದಾರೆ. ಉಪ್ಪಾರಪೇಟೆ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ.‌ ಎಸ್.ಎಸ್.ಎಲ್.ಸಿ ವ್ಯಾಸಾಂಗ ಮಾಡುತ್ತಿದ್ದ ನಂದನ್, ಕಿರಣ್ ,ಪರೀಕ್ಷಿತ್ ಮೂವರು ವಿದ್ಯಾರ್ಥಿಗಳನ್ನು ಉಪ್ಪಾರಪೇಟೆ ಪೊಲೀಸ್ ಠಾಣೆ ರಕ್ಷಿಸಿದ್ದು ಮಕ್ಕಳ‌ ಪೋಷಕರು ಹಾಗೂ ಬಾಗಲಗುಂಟೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಜಾಗಿಂಗ್​ ಹೋಗುವುದಾಗಿ ಹೇಳಿ ನಾಪತ್ತೆ

ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಸಹಪಾಠಿಗಳು ಶುಕ್ರವಾರ ಶಾಲೆಯಲ್ಲಿಯೇ ಮನೆ ಬಿಡುವ ನಿರ್ಧಾರ ಮಾಡಿದ್ದರು.  ಪೂರ್ವ ನಿರ್ಧಾರದಂತೆ ಶನಿವಾರ ಬೆಳಗ್ಗೆ ಎಂದಿನಂತೆ ಜಾಗಿಂಗ್ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ 5.30 ಕ್ಕೆ ಮನೆಯಿಂದ ಹೊರಟ್ಟಿದ್ದರು. ಮನೆಯಿಂದ ಹೊರಗೆ ಬಂದಿದ್ದ ಮೂವರು ಮಕ್ಕಳು ತಲಾ ಒಂದೊಂದು ಸಾವಿರ ಹಣ ತಂದಿದ್ದರು ಎನ್ನಲಾಗಿದೆ.

ದಸರಾ ನೋಡಲು ತೆರಳಿದ್ದ ಮಕ್ಕಳು

ಮನೆಯಿಂದ ಹೊರಟ ಮಕ್ಕಳು ನಡೆದುಕೊಂಡೆ 8 ನೇ ಮೈಲಿ‌ ಜಂಕ್ಷನ್ ತಲುಪಿತ್ತಾರೆ, ಮಕ್ಕಳ ಚಲನವಲನ ಸಹ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾತ್ರಿ ಇಡೀ ಬಾಗಲಗುಂಟೆ ಪೊಲೀಸರು ಮಕ್ಕಳ‌ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೊದಲು ಮಂಗಳೂರಿಗೆ ಹೋಗುವುದಾಗಿ ಯೋಜನೆ ರೂಪಿಸಿದ್ದಾರೆ. ಆದರೆ ಹಣದ ಅಭಾವ ಇರುವುದರಿಂಧ ಮಂಗಳೂರಿಗೆ ಹೋಗಿ ಬರುವುದಕ್ಕೆ ಹಣ‌ ಸಾಕಾಗುವುದಿಲ್ಲವೆಂದು ಪ್ಲಾನ್​​ ಬದಲಾಯಿಸಿದ್ದಾರೆ. ಬಳಿಕ ಹೇಗೂ ಮೈಸೂರಿನಲ್ಲಿ ದಸರಾ ನಡೆಯುತ್ತಿದೆ, ಅಲ್ಲಿಗೆ ಹೋಣ ಎಂದು ಪ್ಲಾನ್ ಮಾಡುತ್ತಾರೆ. ಅದರಂತೆ 8 ನೇ ಮೈಲಿಯಿಂದ ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ‌ ಬಿಎಂ‌ಟಿಸಿ ಬಸ್ ಮುಖಾಂತರ ತಲುಪಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳಸಿ ಶನಿವಾರ ಮತ್ತು ಭಾನುವಾರ ದಸರಾ ನೋಡಿದ್ದಾರೆ.

ಪೇಪರ್​ ಆಯುವವರ ಬಳಿ ಕೆಲಸ ಕೇಳಿದ್ದ ಮಕ್ಕಳು

ದಸರಾ ನೋಡಿದ ನಂತರ ಜೇಬು ಖಾಲಿ ಮಾಡಿಕೊಂಡು ಸ್ವಲ್ಪ ಹಣ ಮಾತ್ರ ಇಟ್ಟುಕೊಂಡಿದ್ದ ಮಕ್ಕಳು ಮೈಸೂರಿನಿಂದ ಭಾನುವಾರ ರಾತ್ರಿ ಟ್ರೈನ್ ಹತ್ತಿ ಇಂದು ಮುಂಜಾನೆ ಬೆಂಗಳೂರಿಗೆ ತಲುಪಿದ್ದಾರೆ, ರೈಲು ನಿಲ್ದಾಣದಿಂದ ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದು ಪೇಪರ್ ಆಯುವ ವ್ಯಕ್ತಿ ಬಳಿ ಕೆಲಸ ಕೇಳಿದ್ದಾರೆ. ನೆನ್ನೆ ಇಡೀ ದಿನ ಮಕ್ಕಳ‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ಬಗ್ಗೆ ಮಾಹಿತಿ ತಿಳಿದಿದ್ದ ಪೇಪರ್ ಆಯುವ ವ್ಯಕ್ತಿ ತಕ್ಷಣ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಮುಂಜಾನೆ ವಾಕಿಂಗ್ ಹೋಗಿದ್ದ 7 ಮಕ್ಕಳು ನಿಗೂಢವಾಗಿ ನಾಪತ್ತೆ

ಉಪ್ಪಾರಪೇಟೆ ಪೊಲೀಸರಿಂದ ರಕ್ಷಣೆ

ಇನ್ನು ಈ ಹುಡುಗರಿಗೆ ಕಬ್ಬಡಿಯಲ್ಲಿ ಹೆಚ್ಚು ಆಸಕ್ತಿ ಇದ್ದ ಹಿನ್ನೆಲೆ ಬೆಂಗಳೂರಿಗೆ ಬಂದಿಳಿದ ಕೂಡಲೆ ಕಂಠೀರವ ಕ್ರೀಡಾಂಗಣಕ್ಕೆ ತೆರಳಿದ್ದರು, ಇಲ್ಲಿಯೇ ಕಬ್ಬಡಿಗೆ ಸೇರಿಕೊಳ್ಳುವ ಬಗ್ಗೆ ಆಲೋಚನೆ ನಡೆಸಿದ್ದರು, ನಂತರ ಆನಂದ್ ಸರ್ಕಲ್‌ ಬಳಿ ಬರುತ್ತಿದ್ದಾಗ ಉಪ್ಪಾರಪೇಟೆ ಪೊಲೀಸರು ರಕ್ಷಿಸಿದ್ದು ಸದ್ಯ ಮಕ್ಕಳ ಬಳಿ ಹೇಳಿಕೆ‌ ಪಡೆದಿಯುತ್ತಿರುವ ಪೊಲೀಸರು ಮಕ್ಕಳನ್ನ ಪೋಷಕರಿಗೆ ಒಪ್ಪಿಸಿದ್ದಾರೆ.

ಉಳಿದ ಮಕ್ಕಳಿಗೆ ಶೋಧ

ಮತ್ತೊಂದು ಪ್ರಕರಣದಲ್ಲಿ ನಾಪತ್ತೆಯಾಗಿರುವ ನಾಲ್ವರು ಮಕ್ಕಳ ಪತ್ತೆಗೆ ತಂಡ ನಿರಂತರ ಶೋಧ ನಡೆಸಿದೆ. ಬಿಸಿಎ ವಿದ್ಯಾರ್ಥಿನಿ ವರ್ಷಿಣಿ ಜೊತೆ ಹೆಚ್ಚು ಆತ್ಮೀಯವಾಗಿದ್ದ ಈ ಮಕ್ಕಳು ಆಕೆಯ ಮಾರ್ಗದರ್ಶನದಂತೆ ಮನೆ ಬಿಟ್ಟಿದ್ದಾರೆ ಎನ್ನಲಾಗಿದೆ. ಮನೆ ಬಿಡುವ ಮುನ್ನ ಅದಕ್ಕಾಗಿ ಯೋಜನೆ ರೂಪಿಸಿದ್ದಾರೆ. ಮನೆ ಬಿಡುವ ಮುನ್ನ ಏನು ಬೇಕಾಗ ಬಹುದು ಎಂಬ ಕುರಿತು ಕೂಡ ಒಂದು ಪಟ್ಟಿ ತಯಾರಿಸಿದ್ದಾರೆ.ಈ ಪಟ್ಟಿ ಕೂಡ ಈಗ ಲಭ್ಯವಾಗಿದೆ.
Published by:Seema R
First published: