Auto Fare Hike: ಬೆಂಗಳೂರಲ್ಲಿ ಡಿ.1ರಿಂದ ಆಟೋ ಪ್ರಯಾಣ ದುಬಾರಿ; Minimum Meter Rate ಎಷ್ಟಾಗಿದೆ ನೋಡಿ!

Auto travel rates to go up in Bangalore : ಡಿ.1ರಿಂದ Minimum Meter Rate 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಕಿಲೋ ಮೀಟರ್​ಗೆ 13 ರೂಪಾಯಿಯಿಂದ 15 ರೂಪಾಯಿಗೆ ಏರಿಕೆಯಾಗಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ರಾಜ್ಯ ರಾಜಧಾನಿ ಬೆಂಗಳೂರು (Bengaluru) ಲೈಫ್​ ನಾಳೆಯಿಂದ (ಡಿ.1) ಮತ್ತಷ್ಟು ದುಬಾರಿಯಾಗಲಿದೆ. ಸಿಲಿಕಾನ್​ ಸಿಟಿ ಆಟೋ ಪ್ರಯಾಣ ನಿಮ್ಮ ಜೇಬು ಸುಡಲಿದೆ. ಡಿಸೆಂಬರ್​​ 1ರಿಂದ ಆಟೋ ಚಾರ್ಜ್​ (Auto Fare) ಏರಿಕೆಯಾಗಿದ್ದು, ಹೊಸ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ನಾಳೆಯಿಂದ ಬೆಂಗಳೂರು ಜನರಿಗೆ ಆಟೋ ಪ್ರಯಾಣ ದುಬಾರಿಯಾಗಲಿದೆ. ಕೊರೋನಾ ಹೊಡೆತ, ಗ್ಯಾಸ್ ದರ ಏರಿಕೆಯಿಂದ ನಲುಗಿದ್ದ ಆಟೋ ಚಾಲಕರಿಗೆ ಕೊನೆಗೂ ಸರ್ಕಾರ ಕೊಂಚ ರಿಲೀಫ್​ ನೀಡಿದೆ. ಡಿ.1ರಿಂದ ಆಟೋ ಮೀಟರ್ ದರ (Auto Meter Rate)ಹೆಚ್ಚಳ ಆದೇಶ ಅಧಿಕೃತ ಜಾರಿಯಾಗಲಿದೆ.

  ಪರಿಷ್ಕೃತ ಆಟೋ ದರ ಹೋಗಿದೆ

  • - ಮೊದಲ 2 kmಗೆ 30 ರೂಪಾಯಿ ನಿಗದಿ

  • - ನಂತರದ ಪ್ರತಿ 1 km ಗೆ 15 ರೂಪಾಯಿ

  • - ಮೊದಲ ಐದು ನಿಮಿಷ ಕಾಯುವಿಕೆ ಉಚಿತ

  • - ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.

  • - 20 kg ವರೆಗೆ ಲಗೇಜ್ ಸಾಗಣೆ ಉಚಿತ

  • - 21 kg ಇಂದ 50 kg ವರೆಗೆ 5 ರೂ. ದರ ನಿಗದಿ

  • - ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15)


  ಯಾವುದರ ರೇಟ್​ ಎಷ್ಟಾಗಿದೆ?

  ಇನ್ಮುಂದೆ ಮೊದಲ 2 km ಗೆ 30 ರೂಪಾಯಿ ನಿಗದಿಯಾಗಲಿದೆ. ಒಮ್ಮೆ ಆಟೋ ಏರಿದರೆ 30 ರೂಪಾಯಿ ಕೊಡಲೇಬೇಕು. ಇಲ್ಲಿಯವರೆಗೆ 25 ರೂಪಾಯಿ ಕನಿಷ್ಟ ದರವಾಗಿತತ್ತು. 2 ಕಿಲೋ ಮೀಟರ್​ ಬಳಿಕ ಪ್ರತಿ 1 km ಗೆ 15 ರೂಪಾಯಿಯಂತೆ ಚಾರ್ಜ್​​ ಬೀಳಲಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತ ಇರಲಿದೆ.  ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ. ತೆರಬೇಕಾಗುತ್ತದೆ. ಆಟೋದಲ್ಲಿ 20 kg ವರೆಗೆ ಲಗೇಜ್ ಸಾಗಣೆ ಉಚಿತ ಇರಲಿದೆ. 21 kgಯಿಂದ 50 kg ವರೆಗೆ 5 ರೂ. ದರ ನಿಗದಿಯಾಗಿದೆ.  ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15 ರೂ.) ಇರಲಿದೆ.

  ಪ್ರಯಾಣಿಕರು ಸಹಕರಿಸಬೇಕೆಂದು ಮನವಿ

  ಕೊರೊನಾ-ಲಾಕ್​ಡೌನ್ ಹೊಡೆತದಿಂದ ​ ಆರ್ಥಿಕ ನಷ್ಟ ಎದುರಿಸಿದ್ದ ಸವಾರರು ಈಗ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಡಿ.1ರಿಂದ ಮಿನಿಮಮ್​​ ಆಟೋ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಕಿಲೋ ಮೀಟರ್​ಗೆ 13 ರೂಪಾಯಿಯಿಂದ 15 ರೂಪಾಯಿಗೆ ಏರಿಕೆಯಾಗಲಿದೆ. ಜನಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳು, ಸೇವೆಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ದರವನ್ನು ಏರಿಕೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸಬೇಕೆಂದು ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿಕೊಂಡರು.

  ಆಟೋ ದರ ಏರಿಕೆ ಆದೇಶ


  ಹೋಟೆಲ್​ ಆಹಾರವೂ ದುಬಾರಿ 

  ಇನ್ನು ಇತ್ತೀಚೆಗೆ ನವೆಂಬರ್​ 8ರಿಂದ ಹೋಟೆಲ್​ ಆಹಾರ ಬೆಲೆಯೂ ಏರಿಕೆಯಾಗಿದೆ. ಹೋಟೆಲ್ ಉದ್ಯಮಿಗಳು ಶೇ.5 ರಿಂದ ಶೇ.10ವರೆಗೆ ಬೆಲೆ ಏರಿಕೆ ಮಾಡಿದ್ದಾರೆ. ದೋಸೆ, ರೈಸ್ ಬಾತ್ ದರವನ್ನು 5% ರಷ್ಟು, ಊಟ, ಇತರೆ ಚೈನೀಸ್ ಪದಾರ್ಥಗಳ ಬೆಲೆ ಶೇ.10 ರಷ್ಟು ಏರಿಕೆ ಮಾಡಲಾಗುತ್ತಿದೆ. ಇನ್ನೂ ಕಾಫಿ ಮತ್ತು ಟೀ ಬೆಲೆ ಸಹ 2 ರೂಪಾಯಿ ಏರಿಕೆ ಆಗಿದೆ. ಇತ್ತೀಚೆಗೆ ತರಕಾರಿ, ದವಸ-ಧಾನ್ಯಗಳ ಬೆಲೆ ಏರಿಕೆಯಾಗಿದೆ. ಹೋಟೆಲ್ ಗಳಲ್ಲಿ ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,000 ರೂಪಾಯಿಯಿಂದ 2 ಸಾವಿರ ರೂಪಾಯಿ ಗಡಿ ಮುಟ್ಟಿದೆ. ಹೀಗಾಗಿ ಹೋಟೆಲ್ ಆಹಾರ ಬೆಲೆ ಏರಿಕೆ ಅನಿವಾರ್ಯವಾಗಿದೆ ಅಂತಾರೆ ಹೋಟೆಲ್ ಉದ್ಯಮಿಗಳು.ಇತ್ತೀಚೆಗೆ ತರಕಾರಿ, ದವಸ-ಧಾನ್ಯಗಳ ಬೆಲೆ ಏರಿಕೆಯಾಗಿದೆ. ಹೋಟೆಲ್ ಗಳಲ್ಲಿ ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,000 ರೂಪಾಯಿಯಿಂದ 2 ಸಾವಿರ ರೂಪಾಯಿ ಗಡಿ ಮುಟ್ಟಿದೆ. ಹೀಗಾಗಿ ಹೋಟೆಲ್ ಆಹಾರ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು.
  Published by:Kavya V
  First published: