Auto Fare: ಬೆಂಗಳೂರಲ್ಲಿ ಶೀಘ್ರವೇ ಆಟೋ ಪ್ರಯಾಣ ದರ ದುಬಾರಿ: ಮಿನಿಮಮ್ 25 ರೂ.ಯಿಂದ ಎಷ್ಟಕ್ಕೆ ಏರಿಕೆ?

Soon Auto Fare increase in Bangalore: ಆಟೋ ಮೀಟರ್ ದರವನ್ನು ಕೊನೆಯದಾಗಿ 2013 ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇಲ್ಲಿಯವರೆಗೆ ಮತ್ತೆ ದರ ಹೆಚ್ಚಳ ಮಾಡಿಲ್ಲ. ಈ 8-9 ವರ್ಷದಲ್ಲಿ ಸಾಕಷ್ಟು ಬಾರಿ ಪೆಟ್ರೋಲ್ ಮತ್ತು ಗ್ಯಾಸ್ ದರ ಹೆಚ್ಚಳವಾಗಿದೆ.

Soon Auto Fare  increase in Bangalore: ಆಟೋ ಮೀಟರ್ ದರವನ್ನು ಕೊನೆಯದಾಗಿ 2013 ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇಲ್ಲಿಯವರೆಗೆ ಮತ್ತೆ ದರ ಹೆಚ್ಚಳ ಮಾಡಿಲ್ಲ. ಈ 8-9 ವರ್ಷದಲ್ಲಿ ಸಾಕಷ್ಟು ಬಾರಿ ಪೆಟ್ರೋಲ್ ಮತ್ತು ಗ್ಯಾಸ್ ದರ ಹೆಚ್ಚಳವಾಗಿದೆ.

Soon Auto Fare increase in Bangalore: ಆಟೋ ಮೀಟರ್ ದರವನ್ನು ಕೊನೆಯದಾಗಿ 2013 ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇಲ್ಲಿಯವರೆಗೆ ಮತ್ತೆ ದರ ಹೆಚ್ಚಳ ಮಾಡಿಲ್ಲ. ಈ 8-9 ವರ್ಷದಲ್ಲಿ ಸಾಕಷ್ಟು ಬಾರಿ ಪೆಟ್ರೋಲ್ ಮತ್ತು ಗ್ಯಾಸ್ ದರ ಹೆಚ್ಚಳವಾಗಿದೆ.

  • Share this:
ಬೆಂಗಳೂರು: ಮೊದಲ ಮತ್ತು ಎರಡನೇ ಹಂತದ ಕೊರೊನಾ ಲಾಕ್ ಡೌನ್ ನಿಂದ ಆಟೋ ಚಾಲಕರು ತತ್ತರಿಸಿ ಹೋಗಿದ್ದಾರೆ. ಜೀವನ ನಡೆಸೋದೆ ಕಷ್ಟ ಅಂತಿದ್ದಾರೆ, ಅದರಲ್ಲೂ ಪೆಟ್ರೋಲ್ ಬೆಲೆ ಹೆಚ್ಚಳದಿಂದ ಕಂಗಲಾಗಿದ್ದಾರೆ. ಈಗ ಮತ್ತೆ ಇಂದಿನಿಂದ ಆಟೋ ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಇದರಿಂದ ಬೆಂಗಳೂರಿಗರ ಸಾರಥಿಯ ಮೀಟರ್ ರೇಟ್ ಜಾಸ್ತಿ ಮಾಡುವಂತೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.  ಕೊರೊನಾ ಲಾಕ್ ಡೌನ್ ನಿಂದ ಜನರು ಜೀವನ ಮತ್ತು ಕೆಲಸ ಕಳೆದುಕೊಂಡಿದ್ದಾರೆ. ಪೆಟ್ರೋಲ್ ಡಿಸೇಲ್ ಗ್ಯಾಸ್ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಜೀವನ ನಡೆಸುವುದೆ ಕಷ್ಟ ಅಂತಿದ್ದಾರೆ ಅಂತಹದ್ರಲ್ಲಿ ಮತ್ತೆ ಈಗ ಆಟೋ ಮೀಟರ್ ದರ ಹೆಚ್ಚಿಸುವಂತೆ ಒತ್ತಡ ಕೇಳಿ ಬರ್ತಿದೆ.

ರಾಜ್ಯದಲ್ಲಿ ಮಿನಿಮಮ್ ಅಟೋ ದರ 25 ರೂಪಾಯಿ ಇದೆ. ಆದರೆ ಈಗ ಅದನ್ನು 30 ರುಪಾಯಿ ಮಾಡಬೇಕು ಅಂದರೆ 5 ರುಪಾಯಿ ಹೆಚ್ಚಳ ಮಾಡುವಂತೆ ಆಟೋ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್ ಗಳು ಸರ್ಕಾರದ ಬಳಿ ಮನವಿ ಮಾಡ್ತಿವೆ. ಈ ಬಗ್ಗೆ ಈಗಾಗಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಎರಡು ಸಭೆ ನಡೆದಿತ್ತು. ಈ ಸಭೆಯಲ್ಲಿ ಹಲವು ‌ಸಂಘಟನೆಗಳು ದರ ಹೆಚ್ಚಳ ಮಾಡುವಂತೆ ಒತ್ತಡ ಹೇರಿದ್ರು. ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು, ಕಾರಣ ಕೊರೊನಾ ದಿಂದ ಜನರ ಬಳಿ ಹಣವಿಲ್ಲ ಬೆಲೆ ಏರಿಕೆಯಿಂದ ಜನರು ಕಂಗಲಾಗಿದ್ದಾರೆ. ಜನರು ಯಾರು ಆಟೋದಲ್ಲಿ ಪ್ರಯಾಣ ಮಾಡ್ತಿಲ್ಲ ಓಲಾ ಊಬರ್ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ ಸದ್ಯ ಬೇಡ ಮುಂದಿನ ವರ್ಷ ಬೇಕಾದ್ರೆ ಈ ಬಗ್ಗೆ ಚಿಂತನೆ ಮಾಡೋಣ ಅಂದಿದ್ದರು.

ಆದರೆ ನಿನ್ನೆ ಗ್ಯಾಸ್ ದರ ಹೆಚ್ಚಳವಾಗಿದೆ ಇದರಿಂದ ಮತ್ತೆ ಆಟೋ ಮೀಟರ್ ಹೆಚ್ಚಳ ಮಾಡುವಂತೆ ಕೂಗು ಕೇಳಿ ಬರ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಿದ್ದಾರೆ. ಆದೇಶ ಹೊರಬೀಳಬೇಕಿರೋದು ಬಾಕಿ ಅಂತಿದ್ದಾರೆ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ.

ಇನ್ನೂ ಆಟೋ ಮೀಟರ್ ದರವನ್ನು ಕೊನೆಯದಾಗಿ 2013 ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇಲ್ಲಿಯವರೆಗೆ ಮತ್ತೆ ದರ ಹೆಚ್ಚಳ ಮಾಡಿಲ್ಲ. ಈ 8-9 ವರ್ಷದಲ್ಲಿ ಸಾಕಷ್ಟು ಬಾರಿ ಪೆಟ್ರೋಲ್ ಮತ್ತು ಗ್ಯಾಸ್ ದರ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಚಾಲಕರು ಆಟೋ ಓಡಿಸುವುದು ಕಷ್ಟ ಆಗ್ತಿದೆ, ಲೋನ್ ಕಟ್ಟಲು ಅಗ್ತಿಲ್ಲ, ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಆಗದೆ ಚಾಲಕರು ಪರದಾಡುವಂತಾಗಿದೆ ಅನ್ನೊದು ಚಾಲಕರ ವಾದ. 

1.8 ಕಿಮೀ ಗೆ ಸದ್ಯ 25 ರುಪಾಯಿ ಅಂದರೆ ಮಿನಿಮಮ್ ಚಾರ್ಜ್ ತೆಗೆದುಕೊಳ್ಳಲಾಗ್ತಿದೆ. ಅದನ್ನು ಈಗ 30 ರುಪಾಯಿ ಮಾಡಿ ಅಂತ ಇವತ್ತು ಪಟ್ಟು ಹಿಡಿದಿದ್ದಾರೆ. ಲೀಟರ್ ಗ್ಯಾಸ್ ಗೆ ಮೊನ್ನೆಯವರೆಗೆ 50 ರುಪಾಯಿ ಇತ್ತು. ಈಗ ಒಂದು ಲೀಟರ್ ಗ್ಯಾಸ್ ಇಂದಿನಿಂದ 55 ರುಪಾಯಿ ಆಗಿದೆ ಪೆಟ್ರೋಲ್ ಇಂದು ಬೆಂಗಳೂರಿನಲ್ಲಿ 105 . 80 ಪೈಸೆ ಇದೆ ಈ ಹಿನ್ನೆಲೆಯಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲೇ ಬೇಕು. ಇಲ್ಲಾಂದ್ರೆ ಬೆಂಗಳೂರಿನ ಆಟೋ ಚಾಲಕರು ಅನಿರ್ದಿಷ್ಟವದಿ ಮುಷ್ಕರ ಮಾಡ್ತಿವಿ ಅಂತ ಆದರ್ಶ ಆಟೋ ಚಾಲಕ‌ ಸಂಘದ ಅಧ್ಯಕ್ಷ‌ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಒಟ್ಟಿನಲ್ಲಿ ಗ್ಯಾಸ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಆಟೋ ಚಾಲಕರು ದರ ಹೆಚ್ಚಳ ಮಾಡಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಈ ವಾರದಲ್ಲಿ ಯಾವ ಕ್ರಮ ತೆಗದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
Published by:Kavya V
First published: