• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Assembly Session: ನಾಳೆಯಿಂದ ವಿಧಾನ ಮಂಡಲ ಅಧಿವೇಶನ; ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಪ್ರತಿಪಕ್ಷಗಳ ಪ್ರಮುಖ ಅಸ್ತ್ರ

Assembly Session: ನಾಳೆಯಿಂದ ವಿಧಾನ ಮಂಡಲ ಅಧಿವೇಶನ; ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಪ್ರತಿಪಕ್ಷಗಳ ಪ್ರಮುಖ ಅಸ್ತ್ರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದರ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

  • Share this:

ಬೆಂಗಳೂರು (ಸೆ. 12) ನಾಳೆಯಿಂದ ವಿಧಾನಮಂಡಲ ಅಧಿವೇಶನ (Karnataka Assembly Session ) ಆರಂಭವಾಗುತ್ತಿದ್ದು,  ಬಸವರಾಜ ಬೊಮ್ಮಾಯಿ  ಸಿಎಂ ಆದ ಬಳಿಕ ಮೊದಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆ,  ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ (congress) ತಂತ್ರ ರೂಪಿಸಿದೆ. ಇದರ ಜೊತೆಗೆ ಜೆಡಿಎಸ್ ಕೂಡ ಇದೇ ವಿಚಾರವಾಗಿ ಸರ್ಕಾರದ ವಿರುದ್ದ ಹರಿಹಾಯಲು ತಯಾರಿ ನಡೆಸಿದೆ.  ಸಿಎಂ ಆದ ಬಳಿಕ ನಾಳೆ ಮೊದಲ ಅಧಿವೇಶನದಲ್ಲಿ ಭಾಗಿಯಾಗುತ್ತಿರುವ ಬಸವರಾಜ ಬೊಮ್ಮಾಯಿ (CM Basavaraja Bommai) ಕೂಡ ವಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ  ಸಮರ್ಥವಾಗಿ ಎದುರಿಸಲು ತಯಾರಿ ನಡೆಸಿದ್ದಾರೆ. 


ಎತ್ತಿನ ಬಂಡಿಯಲ್ಲಿ ಸದನಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ


ನಾಳೆಯಿಂದ ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ, ಪೆಟ್ರೋಲ್, ಡಿಸೆಲ್, ಎಲ್‌ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ‌ ಸದನದಲ್ಲೂ ಪ್ರಸ್ತಾಪವಾಗಲಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದರ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನಿಸಿದೆ.


ಕೋವಿಡ್​ ಲೆಕ್ಕಕ್ಕೆ ಪಟ್ಟು


ಕೋವಿಡ್‌ನಂತಹ ವಿಷಮ‌ ಪರಿಸ್ಥಿತಿ ಈಗಲೂ ಮುಂದುವರೆಯುತ್ತಿದೆ‌. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ. ಖಾಲಿ‌ ಖಜಾನೆ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಸಂಕಷ್ಟ ಕಾಲದಲ್ಲೂ ಕೋವಿಡ್ ಪರಿಕರಗಳ ಖರೀದಿಯಲ್ಲಿ ಅಕ್ರಮ‌ ನಡೆದಿದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಪಿಸಿತ್ತು. ಈ ಬಗ್ಗೆ ಸರ್ಕಾರ ಲೆಕ್ಕ ನೀಡುವಂತೆ ಸದನದಲ್ಲಿ ಕಾಂಗ್ರೆಸ್ ಪಟ್ಟು ಹಿಡಿಯಲಿದೆ.


ರಾಷ್ಟ್ರೀಯ ಶಿಕ್ಷಣಮೈಸೂರು ಮಹಾರಾಜರ ಫೋಟೋಗಳನ್ನು ತೆರವುಗೊಳಿಸಿ ವಿವಾದಕ್ಕೆ ಗುರಿಯಾದ ಚಾಮರಾಜನಗರ ಜಿಲ್ಲಾಡಳಿತ ನೀತಿ


ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಬಗ್ಗೆಯೂ ವಿರೋಧ ವ್ಯಕ್ತಪಡಿಸಿ, ಹಿಂಪಡೆಯುವವರೆಗೂ ಸದನದಲ್ಲಿ ಪಟ್ಟು ಹಿಡಿಯಲು ಯೋಜನೆ ರೂಪಿಸಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸದನದಲ್ಲೂ ಸದ್ದುಗದ್ದಲಕ್ಕೆ‌ ಕಾರಣವಾಗಬಹುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಅಂತ ಸರ್ಕಾರದ ವಿರುದ್ಧ ವಾಕ್‌ಪ್ರಹಾರ ನಡೆಯುವ ಸಾಧ್ಯತೆ‌ ಇದೆ.


ಇದನ್ನು ಓದಿ: ನಿಮ್ಮ ಸಾಧನೆ ಮೂಲಕ ಸೋಲಿನ ಮನಸ್ಥಿತಿಯನ್ನು ಗೆದ್ದಿದ್ದೀರಾ: ಪ್ರಧಾನಿ ಮೋದಿ


ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳು ಕೂಡ ಸದನದಲ್ಲಿ ಪ್ರಸ್ತಾಪವಾಗಲಿವೆ. ಅದರಲ್ಲೂ ಕೆಲ ಸಚಿವರ‌ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು, ಅವರನ್ನ ಸಂಪುಟದಿಂದ ಕೈಬಿಡಲು ಒತ್ತಡವೂ ವಿಪಕ್ಷಗಳಿಂದ ಬರುವ ನಿರೀಕ್ಷೆ‌ ಇದೆ.


ಕೋವಿಡ್ ಸಾವು ನೋವು ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತ ಬಂದಿದೆ ಅಂತ ಸಿದ್ದರಾಮಯ್ಯ ಅವರು ಅನೇಕ ಬಾರಿ ಆರೋಪಿಸಿದ್ದಾರೆ. ಸದನದಲ್ಲಿ ಸರ್ಕಾರವನ್ನು ಕಿವಿ ಹಿಂಡಲು ಇದನ್ನೂ ಅಸ್ತ್ರವಾಗಿ ಬಳಸಿಕಕೊಳ್ಳಲಿದ್ದಾರೆ.


ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ತಾಲೀಮು ನಡೆಸಿದೆ‌. ವಿಪಕ್ಷಗಳ ಆರೋಪಗಳನ್ನು ಸುರಿಮಳೆ ಎದುರಿಸಲು ಬೊಮ್ಮಾಯಿ ಸರ್ಕಾರ ಕೂಡ ಸಿದ್ಧವಾಗುತ್ತಿದೆ. ಕಾನೂನು ಮತ್ತು ಸಂಸದೀಯ ಖಾತೆ ವಹಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಬೊಮ್ಮಾಯಿ‌ಗೆ ಆಪತ್ಭಾಂಧವ ಆಗಲಿದ್ದಾರೆ. ಸರ್ಕಾರದ ವಿರುದ್ಧದ ಎಲ್ಲ ಟೀಕಾಸ್ತ್ರಗಳಿಗೆ ಸಮರ್ಥ ಉತ್ತರ ನೀಡಲು ಸಾಥ್ ನೀಡಲಿದ್ದಾರೆ.‌ ಸದನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಬೇಕೆನ್ನುವ ಆಶಯ ಯಾವಾಗಲೂ ಇರುತ್ತದೆ. ಆದರೆ ಬಹುತೇಕ‌ ಬಾರಿ ಸರ್ಕಾರ‌ ಮತ್ತು ಆಡಳಿತ ಪಕ್ಷಗಳ ನಡುವಣ ತಿಕ್ಕಾಟಕ್ಕೆ ವೇದಿಕೆ ಯಾಗುತ್ತದೆ. ಈ ಬಾರಿಯೂ ಅದೇ ಪುನರಾವರ್ತನೆಯಾಗುವ ಎಲ್ಲ‌ ಲಕ್ಷಗಳು ಗೋಚರಿಸುತ್ತಿವೆ. ಬೆಲೆ ಏರಿಕೆ‌ ಎಂಬ ಪ್ರಬಲ‌ ಅಸ್ತ್ರ ವಿಪಕ್ಷಗಳ ಕೈಗೆ ಸಿಕ್ಕಂತಾಗಿದೆ. ಇದನ್ನ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ೞುತ್ತದೆ ನೋಡಬೇಕಿದೆ.

top videos
    First published: