ಠಾಣೆಯಲ್ಲಿ ಯುವಕನ ಗಡ್ಡ ಕತ್ತರಿಸಿ, ಮೂತ್ರ ಕುಡಿಸಿದ ಪೊಲೀಸ್.. ಏನಾಗ್ತಿದೆ ಬೆಂಗಳೂರಲ್ಲಿ?

Police Torture: ಯುವಕ ಪೊಲೀಸ್​ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನಗೆ ಕನಿಷ್ಠ 30 ಬಾರಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದರು. ಕುಡಿಯಲು ನೀರು ಕೇಳಿದಾಗ, ಅವರು ನನಗೆ ಮೂತ್ರ ಕುಡಿಯುವಂತೆ ಮಾಡಿದರು. ನನ್ನ ಗಡ್ಡವನ್ನೂ ಕತ್ತರಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪೊಲೀಸ್​ ದೌರ್ಜನ್ಯ (Police Brutality) ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ 23 ವರ್ಷದ ಅನ್ಯಧರ್ಮಿಯ  ಯುವಕನ (youth) ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿದ (making him drink urine) ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್​ನ (Police Sub Inspector ) ಅಮಾನತುಗೊಳಿಸಲಾಗಿದೆ(suspended). ಬ್ಯಾಟರಾಯನಪುರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹರೀಶ್​ರನ್ನು ಸಸ್ಪೆಂಡ್​​ ಮಾಡಲಾಗಿದೆ. 23 ವರ್ಷದ ಯುವಕನನ್ನು ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನೆರೆಹೊರೆಯವರೊಂದಿಗೆ ಜಗಳ ಮಾಡಿದ ಆರೋಪದ ಮೇಲೆ ಠಾಣೆಗೆ ಕರೆದೊಯ್ದಿದ್ದರು. ನಂತರ ಯುವಕನ ಬಿಡುಗಡೆಗೆ ಪೊಲೀಸರು ಹಣ ಕೇಳಿದರು ಎಂದು ಅವರ ತಂದೆ  ಆರೋಪಿಸಿದ್ದಾರೆ.  ಆದರೆ ಬಿಡುಗಡೆ ಮಾಡುವವರೆಗೂ ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸಿರುವುದು ನಮಗೆ ತಿಳಿದಿರಲಿಲ್ಲ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ. 

ಸ್ಟೇಷನ್​ ಚಾರ್ಚರ್​ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಯುವಕ

ಹರೀಶ್ ಮತ್ತು ಇತರ ಇಬ್ಬರು ಪೊಲೀಸ್ ಪೇದೆಗಳು, ಕ್ರೈಂ ಟೀಮ್‌ನ ಒಬ್ಬರು ಹೊಟ್ಟೆಗೆ ಬ್ಯಾಟ್‌ನಿಂದ ಹೊಡೆದರು. ಬಲವಂತವಾಗಿ ಗಡ್ಡವನ್ನು ಕತ್ತರಿಸಿ ಮೂತ್ರ ಕುಡಿಸಿದರು ಎಂದು ಯುವಕ ​ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನಗೆ ಕನಿಷ್ಠ 30 ಬಾರಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದರು. ಕುಡಿಯಲು ನೀರು ಕೇಳಿದಾಗ, ಅವರು ನನಗೆ ಮೂತ್ರ ಕುಡಿಯುವಂತೆ ಮಾಡಿದರು. ನನ್ನ ಗಡ್ಡವನ್ನೂ ಕತ್ತರಿಸಿದರು. ಇದು ನನ್ನ ನಂಬಿಕೆಯ ಭಾಗವಾಗಿರುವುದರಿಂದ ಹಾಗೆ ಮಾಡಬೇಡಿ ಎಂದು ನಾನು ಅವರನ್ನು ಬೇಡಿಕೊಂಡೆ. ಆದರೆ ಇದು  ಪೊಲೀಸ್ ಠಾಣೆ ಧಾರ್ಮಿಕ ಕೇಂದ್ರವಲ್ಲ ಎಂದು ಅವರು ಹೇಳಿದರು. ನಂತರ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವಂತೆ ಮಾಡಿದರು ಎಂದು ಯುವಕ ಆರೋಪಿಸಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

ಶಾಸಕ ಜಮೀರ್​ ಮಧ್ಯಸ್ಥಿಕೆಯಲ್ಲಿ ಬಿಡುಗಡೆ

ಶಾಸಕ ಜಮೀರ್ ಅಹಮದ್ ಖಾನ್ ಮಧ್ಯಸ್ಥಿಕೆಯಲ್ಲಿ ಯುವಕನನ್ನು ಬಿಡುಗಡೆಗೊಳಿಸಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ ಯುವಕನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ರು. ಬೆನ್ನು, ತೊಡೆಗಳು ಮತ್ತು ಅವನ ದೇಹದ ಇತರ ಭಾಗಗಳಲ್ಲಿ ಆಗಿರುವ ಗಾಯಗಳ ಚಿತ್ರಗಳನ್ನು ಸಹ ತೋರಿಸಿದರು. ಘಟನೆ ಸಂಬಂಧ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಂದ (ಎಸಿಪಿ) ವರದಿ ಕೇಳಿದ್ದ ಹಿನ್ನೆಲೆ ಡಿಸಿಪಿ ಪಾಟೀಲ್ ಸೋಮವಾರ ಸಂಜೆ ವರದಿ ಸಲ್ಲಿಸಿದ್ದಾರೆ.

ಟಾರ್ಚರ್​ ಕೊಟ್ಟ ಸಬ್ ಇನ್ಸ್‌ಪೆಕ್ಟರ್​ ಸಸ್ಪೆಂಡ್​​

ಪ್ರಕರಣ ಸಂಬಂಧ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ಸಂಜೀವ್ ಎಂ ಪಾಟೀಲ್ ತಿಳಿಸಿದ್ದಾರೆ. ಕರ್ತವ್ಯಲೋಪ, ಪೊಲೀಸ್ ಠಾಣೆಗೆ ವರದಿ ಮಾಡದ ಮತ್ತು ಪ್ರಕರಣವನ್ನು ದಾಖಲಿಸದ ಕಾರಣ ಹರೀಶ್ ಅವರನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತ ಯುವಕನ ಕುಟುಂಬದವರು ಮಾಡಿರುವ ಆರೋಪಗಳ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: 2 ವರ್ಷದ ಹಿಂದೆ ಮದುವೆ, 1 ವರ್ಷದ ಹೆಣ್ಣು ಮಗು.. ಬೀದಿ ಹೆಣವಾದ ಮನೆ ಮಗ!

ಇತ್ತೀಚೆಗೆ ವರದಿಯಾದ 3ನೇ ಪ್ರಕರಣ..!

ಕರ್ನಾಟಕದಲ್ಲಿ ಇತ್ತೀಚೆಗೆ ವರದಿಯಾದ ಮೂರನೇ ಪೊಲೀಸ್ ಚಿತ್ರಹಿಂಸೆ ಪ್ರಕರಣ ಇದಾಗಿದೆ. ಈ ತಿಂಗಳ ಆರಂಭದಲ್ಲಿ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ, ಕಸ್ಟಡಿ ಚಿತ್ರಹಿಂಸೆಯ ಘಟನೆಯಿಂದ ಸುದ್ದಿಯಾಗಿತ್ತು. ಘಟನೆಯಲ್ಲಿ, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ಅಕ್ರಮವಾಗಿ 22 ವರ್ಷದ ಯುವಕ ಬಂಧನದಲ್ಲಿಡಲಾಗಿತ್ತು.

ಪೊಲೀಸರು ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ನಂತರ ಬಲಗೈಯನ್ನು ಕತ್ತರಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ವರದಿಯ ನಂತರ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಪೊಲೀಸ್‌  ಅಪರಾಧ ತನಿಖಾ ವಿಭಾಗವು ದಲಿತ ವ್ಯಕ್ತಿಯೊಬ್ಬರಿಗೆ ಮೂತ್ರ ಕುಡಿಸಿದ ಆರೋಪದ ಮೇಲೆ ಗೋಣಿಬೀಡು ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅರ್ಜುನ್ ಹೊರಕೇರಿ ಅವರನ್ನು ಬಂಧಿಸಿತ್ತು.
Published by:Kavya V
First published: