ಬಹಿರಂಗ ಹೇಳಿಕೆಗಳನ್ನು ಸಹಿಸಲ್ಲ: ಯತ್ನಾಳ್, ಬೆಲ್ಲದ್​ಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಅರುಣ್ ಸಿಂಗ್

ಶಾಸಕರಾದ ಯತ್ನಾಳ್, ಬೆಲ್ಲದ್ ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದು. ಇದರ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ. ಯಾರೂ ಬಹಿರಂಗವಾಗಿ ಸ್ಟೇಟ್ ಮೆಂಟ್ ಕೊಡಬಾರದು.

ಅರುಣ್​ ಸಿಂಗ್​

ಅರುಣ್​ ಸಿಂಗ್​

  • Share this:
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಿರುಗಾಳಿ ಜೋರಾಗಿ ಬೀಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅರುಣ್​​ ಸಿಂಗ್​ ಅವರು ನಾಯಕತ್ವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಲಿಲ್ಲ ಎಂದರು. ಸಿಎಂ ,ಸಚಿವರ ಜೊತೆ ಸಭೆ ಮಾಡಿದ್ದೇನೆ. ಕೋವಿಡ್ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದೇನೆ. ಸಚಿವರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆ ಕೆಲಸ ಮಾಡಬೇಕು. ಅಧಿಕಾರಿಗಳ ಜೊತೆ ಸಂಪರ್ಕಸಾದಿಸಿ ಕೆಲಸ ಮಾಡಬೇಕು. ಶಾಸಕರು,ಕಾರ್ಯಕರ್ತರು ಜನಸಾಮಾನ್ಯರ ಸೇವೆ ಸಲ್ಲಿಸಬೇಕು ಎಂದರು.

ಪ್ರತಿವಾರ ಗುರುವಾರ ಒಂದು ದಿನ ಭೇಟಿ ನೀಡಬೇಕು. ಪ್ರಸ್ತುತ ಕೊರೊನಾದಿಂದ ಮೃತಪಟ್ಟ ಬಡವರ ಕುಟುಂಬಕ್ಕೆ ೧ ಲಕ್ಷ ಪರಿಹಾರ ಘೋಷಿಸಲಾಗಿದೆ. ಇದು ಸಂಬಂದಪಟ್ಟವರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಬಡವರ ಸಮಸ್ಯೆ ಪರಿಹರಿಸಬೇಕು. ಪ್ರಧಾನಿ ಮಂತ್ರಿ ಅವಾಸ್ ಯೋಜನೆ, ಗರೀಬ್ ಕಲ್ಯಾಣ ಯೋಜನೆ ಬಗ್ಗೆ ಮನವರಿಕೆ ಮಾಡಬೇಕು ಎಂಬ ಬಗ್ಗೆ ಸಚಿವರಿಗೆ ಸೂಚಿಸಲಾಗಿದೆ.

ಈ ಸಭೆಯಲ್ಲಿ ಕೋವಿಡ್, ಪಕ್ಷ ಸಂಘಟನೆ, ಶಾಸಕರ ಸಮಸ್ಯೆ ಆಲಿಸುವ ಬಗ್ಗೆ ಮಾತ್ರ ಚರ್ಚೆ ಆಗಿದೆ. ನಾಯಕತ್ವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿಲ್ಲ. ಪಕ್ಷದ ಶಾಸಕರಾಗಲಿ, ಕಾರ್ಯಕರ್ತರಾಗಲಿ ಪಕ್ಷಕ್ಕೆ ಧಕ್ಕೆ ತರುವ ಹೇಳಿಕೆ ಕೊಡಬಾರದು. ಬಹಿರಂಗ ಹೇಳಿಕೆ ಕೊಡದಂತೆ ಸೂಚಿಸಿದ್ದೇವೆ ಎಂದರು.

ಶಾಸಕರಾದ ಯತ್ನಾಳ್, ಬೆಲ್ಲದ್ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದು. ಇದರ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ. ಯಾರೂ ಬಹಿರಂಗವಾಗಿ ಸ್ಟೇಟ್ ಮೆಂಟ್ ಕೊಡಬಾರದು. ಶಾಸಕರು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಬಹುದು. ಎಲ್ಲರಿಗೂ ಮುಕ್ತ ಚರ್ಚೆಗೆ ಅವಕಾಶವಿದೆ. ಶಾಸಕರು ತಮ್ಮ ಸಮಸ್ಯೆಯನ್ನ ಹೇಳಿಕೊಳ್ಳಬಹುದು. ಆದರೆ ಪಕ್ಷಕ್ಕೆ ಧಕ್ಕೆ ಬರುವಂತೆ ಬಹಿರಂಗ ಹೇಳಿಕೆಗಳನ್ನು ನೀಡುವುದು ಬೇಡ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಹೊರಗಿನಿಂದ ಬಂದವರಿಂದಲೇ ಗೊಂದಲ: ಈಶ್ವರಪ್ಪ ಹೇಳಿಕೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿರುಗೇಟು!

ಶಾಸಕ ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಎರಡು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ ಎಂದ ಅರುಣ್ ಸಿಂಗ್, ಏನು ಕ್ರಮ ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದೇ ಮಾಧ್ಯಮಗಳಿಂದ ನುಣುಚಿಕೊಂಡರು.

ಇನ್ನು ಬಂಡಾಯ ನಾಯಕ ಸಚಿವ ಸಿ.ಪಿ.ಯೋಗೇಶ್ವರ್​ ಪ್ರತ್ಯೇಕವಾಗಿ ಅರುಣ್​ ಸಿಂಗ್​ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಲಿದ್ದಾರೆ. ಕೇವಲ ಸಚಿವರಿಗೆ ಸಲಹೆ ನೀಡಿದ್ದಷ್ಟೇ ಅರುಣ್ ಸಿಂಗ್ ಕೆಲಸ. ನಾಳೆ ಒನ್ ಟು ಒನ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಎನ್ನಲಾಗುತ್ತಿದೆ. ನಾಳೆ ಶಾಸಕರ ಜೊತೆ,ಸಚಿವರಿಗೂ ಅವಕಾಶ ನೀಡಿ ನಾಯಕತ್ವ ಬದಲಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಹೈಕಮಾಂಡ್​ಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಅರುಣ್​ ಸಿಂಗ್​ ನೇತೃತ್ವದ ಸಭೆ ಹಿನ್ನೆಲೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ, ಆ ಪ್ರಶ್ನೆಯೇ ಉದ್ಭವಿಸಲ್ಲ. ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Published by:Kavya V
First published: