ವಾಹನಗಳಲ್ಲಿ (Vehicle) ಹಣ ಹಾಗೂ ಚಿನ್ನಾಭರಣ (Jewelry) ಇಟ್ಟುಕೊಂಡು ಸಂಚಾರ ಮಾಡುವವರೇ ಎಚ್ಚರ. ನಿಮ್ಮ ಗಮನ ಬೇರೆಡೆ ಸೆಳೆದು ಹಣ ದೋಚುವ ಓಜಿಕುಪ್ಪಂನ ಮತ್ತೊಂದು ಗ್ಯಾಂಗ್ (Gang) ಸಿಲಿಕಾನ್ ಸಿಟಿಯಲ್ಲಿ ಆಕ್ಟಿವ್ ಆಗಿದೆ. ನೋಡೋಕೆ ಬ್ರ್ಯಾಂಡೆಡ್ ಬಟ್ಟೆ, (Branded Cloth) ಶೂ ತೊಟ್ಟು ಸಂಭಾವಿತರಂತೆ ಕಾಣುವ ಇವರು, ಓಜಿಕುಪ್ಪಂ ಗ್ಯಾಂಗ್ ನ ಖತರ್ನಾಕ್ ಕಿಲಾಡಿಗಳು. ಇವರನ್ನ ನೋಡಿದ್ರೆ ಯಾರಿಗೂ ಇವರು ಕಳ್ಳರು (Thieves) ಅನ್ನೋ ಸಂಶಯ ಬರೋದೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ಲುಕ್ ಬದಲಾಯಿಸಿಕೊಂಡಿರುತ್ತಾರೆ.
ಗಮನ ಬೇರೆಡೆ ಸೆಳೆದು ಹಣ ದರೋಡೆ
ಮೂಲತಃ ಚೆನ್ನೈ ತರಗುಪ್ಪೆ ನಿವಾಸಿಗಳಾಗಿರುವ ಕಾರ್ತಿಕ್ ಅಲಿಯಾಸ್ ಪ್ರದೀಪ್ ಹಾಗೂ ಗೋಪಿ ಅಲಿಯಾಸ್ ಗಡ್ಡ ತಮ್ಮ ಮತ್ತಿಬ್ಬರು ಸಹಚರರ ಜೊತೆ ಸೇರಿ ದೊಡ್ಡ ಮೊತ್ತದ ಹಣದ ಜೊತೆ ಸಂಚರಿಸುವವರನ್ನ ಟಾರ್ಗೆಟ್ ಮಾಡ್ತಿದ್ರು. ರಸ್ತೆಯಲ್ಲಿ ಹೋಗುವಾಗ ನಾನಾ ರೀತಿಯಲ್ಲಿ ಅವರ ಗಮನ ಬೇರೆಡೆ ಸೆಳೆದು, ಅವರ ಬಳಿಯಿದ್ದ ಹಣವನ್ನು ದೋಚಿ ಪರಾರಿಯಾಗ್ತಿದ್ರು.
ಬ್ಯಾಂಕ್ನಿಂದ ಹಣ ತರೋರೆ ಇವರ ಟಾರ್ಗೆಟ್
ಬ್ಯಾಂಕ್ಗಳಿಂದ ಹಣ ತರೋರರನ್ನೆ ಟಾರ್ಗೆಟ್ ಮಾಡ್ತಿದ್ದ ಇವರು, ಶುಕ್ರವಾರ ಮತ್ತು ಸೋಮವಾರ ಮಾತ್ರ ಕಳವು ಮಾಡೋಕೆ ಪ್ಲಾನ್ ಮಾಡಿಕೊಳ್ತಿದ್ರು. 2 ದ್ವಿಚಕ್ರವಾಹನಗಳಲ್ಲಿ ನಾಲ್ಕು ಜನ ಕೆಲಸ ಆರಂಭ ಮಾಡಿ, ಮಾರ್ಗ ಮಧ್ಯೆ ಕಾರ್ ಪಂಚರ್ ಮಾಡಿ ಹಿಂಬಾಲಿಸುತ್ತಾ ಬರ್ತಾರೆ. ಕಾರು ಚಾಲಕ ಕೆಳಗಿಳಿಯುತ್ತಿದ್ದಂತೆಯೇ ಕಾರಿನಲ್ಲಿರುತ್ತಿದ್ದ ಹಣ ಕದ್ದು ಪರಾರಿಯಾಗ್ತಾರೆ.
ಇದನ್ನು ಓದಿ: ಬಿಎಸ್ವೈ ಆಯ್ತು, ಈಗ ಡಾ. ಕೆ.ಸುಧಾಕರ್ ಸರದಿ; ಸಿನಿಮಾದಲ್ಲಿ ಬಣ್ಣ ಹಚ್ಚಿದ ಆರೋಗ್ಯ ಸಚಿವ!
ಕಳ್ಳತನ ಮಾಡಿ ಚೆನ್ನೈಗೆ ಹಾರ್ತಿದ್ರು ಖದೀಮರು
ಆರೋಪಿಗಳು ತಮಿಳುನಾಡಿನಿಂದ ಬೆಂಗಳೂರಿಗೆ ಬಂದಾಗ ಫ್ರೆಶ್ ಆಗೋಕೆ ಅಂತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ರು. ಕಳವು ಮಾಡಿದ ನಂತ್ರ ಸೀದಾ ಚೆನ್ನೈಗೆ ಹೋಗ್ತಿದ್ರು. ಎಲ್ಲರೂ ಹಣವನ್ನು ಸಮಾನವಾಗಿ ಹಂಚಿಕೊಳ್ತಿದ್ರು. ನಂತರ ಬಾಂಬೆಯ ರೆಡ್ ಲೈಟ್ ಏರಿಯಾ ಹಾಗೂ ಗೋವಾದಲ್ಲಿ ಕೆಸಿನೋಗೆ ಹೋಗಿ ದುಡ್ಡು ಉಡಾಯಿಸ್ತಿದ್ರು. ದುಡ್ಡು ಖಾಲಿ ಆದ್ಮೇಲೆ ಮತ್ತೆ ಫೀಲ್ಡಿಗಿಳಿದು ಕಳ್ಳತನಕ್ಕೆ ಮುಂದಾಗ್ತಿದ್ರು.
ಇಬ್ಬರ ಖದೀಮರ ಬಂಧನ
ಮಾರ್ಚ್ 4ರಂದು ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐನೂರಕ್ಕೂ ಹೆಚ್ಚು ಸಿಸಿಟಿವಿ ಚೆಕ್ ಮಾಡಿ, ಕಾರ್ತಿಕ್ ಹಾಗೂ ಗೋಪಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
ಕಳ್ಳರನ್ನ ಹಿಡಿಯಲು ಪೊಲೀಸರ ಮಾಸ್ಟರ್ ಪ್ಲಾನ್
ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿ ತಮ್ಮದೆ ಒಂದು ಬಾಡಿಗೆ ಮನೆ ಮಾಡಿದ್ದರಂತೆ. ಕಳ್ಳತನಕ್ಕಾಗಿ ಬೆಂಗಳೂರಿಗೆ ಬಂದಾಗ ಆ ಮನೆಯಲ್ಲಿ ಮೊಕ್ಕಾಂ ಹೂಡುತ್ತಿದ್ರಂತೆ. ಬಳಿಕ ನಗರದಲ್ಲಿ ಟಾರ್ಗೆಟ್ ಮಾಡಿ ತಮ್ಮ ಕೆಲಸ ಶುರು ಮಾಡ್ತಿದ್ರಂತೆ. ಒಂದಷ್ಟು ಮಂದಿ ಬಳಿ ಹಣ ಆಭರಣ ಎಗರಿಸಿ ನಂತರ ಸಿಟಿ ಖಾಲಿ ಮಾಡ್ತಿದ್ರಂತೆ. ಇತ್ತೀಚಿಗೆ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಾಡಿಗೆ ಮನೆಗೆ ಈ ಗ್ಯಾಂಗ್ ಬರೋದನ್ನ ಖಚಿತ ಪಡಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಒಂದು ತಿಂಗಳ ಮೊದಲೇ ಅದೇ ಕಟ್ಟಡದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಒಂದು ತಿಂಗಳು ನೆಲೆಸಿದ್ದರಂತೆ. ನಂತರ ಓಜಿಕುಪ್ಪಂ ಗ್ಯಾಂಗ್ ಮನೆಗೆ ಬಂದು ಠಿಕಾಣಿ ಹೂಡಿದ್ದು ತಮ್ಮ ಕೈಚಳಕ ತೋರುವ ವೇಳೆಗೆ ಇಡೀ ಗ್ಯಾಂಗ್ ಗೆ ಬಲೆ ಬೀಸಿದ್ದಾರೆ.
ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿಯಲ್ಲಿ 5, ಚಂದ್ರಾಲೇಔಟ್ ಹಾಗೂ ಬಸವೇಶ್ವರ ನಗರದಲ್ಲಿ ತಲಾ ಒಂದೊಂದು ಕಳವು ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ 5.65 ಲಕ್ಷ ನಗದು, 2 ದ್ವಿಚಕ್ರ ವಾಹನ ಹಾಗೂ 2 ಮೊಬೈಲ್ ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ