ಕಾಂಗ್ರೆಸ್ ಏನೇ ಮಾಡಿದ್ರೂ KS Eshwarappa ವಿರುದ್ಧ ದೇಶದ್ರೋಹದ ಕೇಸ್ ಹಾಕಲ್ಲ: Araga Jnanendra ಹೇಳಿಕೆ

ರಾಜೀನಾಮೆ ಕೊಡುವ ತಪ್ಪನ್ನು ಈಶ್ವರಪ್ಪ ಏನು ಮಾಡಿದ್ದಾರೆ? ತಪ್ಪು ಮಾಡಿದ್ರೆ ಅವರೇ ರಾಜೀನಾಮೆ ಕೊಡ್ತಾರೆ. ಅವರ ವಿರುದ್ಧ ಯಾಕೇ ದೇಶದ್ರೋಹ ಕೇಸ್ ಹಾಕಬೇಕು ಎಂದು ಪ್ರಶ್ನೆ ಮಾಡಿದರು.

ಅರಗ ಜ್ಞಾನೇಂದ್ರ ಮತ್ತು ಈಶ್ವರಪ್ಪ

ಅರಗ ಜ್ಞಾನೇಂದ್ರ ಮತ್ತು ಈಶ್ವರಪ್ಪ

  • Share this:
ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಅವರ ಕೇಸರಿ ಧ್ವಜ(Saffron Flag)ದ ಕುರಿತ ವಿವಾದಾತ್ಮಕ ಹೇಳಿಕೆ ಖಂಡಿಸಿ ರಾಜೀನಾಮೆಗೆ ಕಾಂಗ್ರೆಸ್ (Congress) ಆಗ್ರಹಿಸುತ್ತಿದೆ. ನಿನ್ನೆ ಸದನದಲ್ಲಿ ಈ ಸಂಬಂಧ ಜೋರು ಗಲಾಟೆಯೇ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President K S Eshwarappa) ಮತ್ತು ಈಶ್ವರಪ್ಪ ಪರಸ್ಪರ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಈ ನಡುವೆ ರಾಷ್ಟ್ರಧ್ವಜ (National Flag) ಹಿಡಿದು ಕಾಂಗ್ರೆಸ್ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿತ್ತು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು ಅರಗ ಜ್ಞಾನೇಂದ್ರ (Home Minister Araga Jnanendra) ಕಾಂಗ್ರೆಸ್ ವಿರುದ್ಧ ಕಿಡಿ ಕಾರುವ ಮೂಲಕ, ಈಶ್ವರಪ್ಪನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ರಾಜೀನಾಮೆ ಕೊಡುವ ತಪ್ಪನ್ನು ಈಶ್ವರಪ್ಪ ಏನು ಮಾಡಿದ್ದಾರೆ? ತಪ್ಪು ಮಾಡಿದ್ರೆ ಅವರೇ ರಾಜೀನಾಮೆ ಕೊಡ್ತಾರೆ. ಅವರ ವಿರುದ್ಧ ಯಾಕೇ ದೇಶದ್ರೋಹ ಕೇಸ್ ಹಾಕಬೇಕು ಎಂದು ಪ್ರಶ್ನೆ ಮಾಡಿದರು. ದೇಶದ್ರೋಹದ ಕೇಸ್ ಇವರ ವಿರುದ್ಧವೇ ಹಾಕಬೇಕು. ಯಾಕೆಂದರೆ ಸದನದ ಒಳಗೆ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಇವರೇ ರಾಷ್ಟಧ್ವಜಕ್ಕೆ ಅವಮಾನ ಮಾಡಿದ್ದಾರೆ

ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ಹಾಕಲ್ಲ

ಹಿಜಾಬ್ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ, ಬಿಸಿ ತುಪ್ಪವಾಗಿದೆ. ಇದರಿಂದ ಹೊರ ಬರಲು ಈಶ್ವರಪ್ಪ ಜಪ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಯಾವ ಹೋರಾಟ ಮಾಡಿದ್ರೂ ಸರಿಯೇ ನಾವಂತೂ ಯಾವುದಕ್ಕೂ ಜಗ್ಗುವುದಿಲ್ಲ.ಆದರೆ ಅವರು ಸುಮ್ಮನೆ ಸದನದ ಸಮಯ ಹಾಳು ಮಾಡ್ತಿದ್ದಾರೆ ಇದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ಏನು ಮಾಡಿದರೂ ನಾವಂತೂ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸೂ ಹಾಕಲ್ಲ, ರಾಜೀನಾಮೆಯೂ ಕೊಡಿಸಲ್ಲ ಎಂದ ಹೇಳಿದರು.



ಇದನ್ನೂ ಓದಿ:  Assembly: ಈಶ್ವರಪ್ಪ ವಿರುದ್ಧ ಮುಗಿಬಿದ್ದ 'ಕೈ' ಪಡೆ, ರಾಜೀನಾಮೆಗೆ ಪಟ್ಟು! ಸದನದಲ್ಲಿ ಕೋಲಾಹಲ

ಹಿಜಾಬ್ ಪ್ರಕರಣ, ಕೇಂದ್ರಕ್ಕೆ ಮಾಹಿತಿ

ದೇಶಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಇಂತಹ ದುಷ್ಟ ಶಕ್ತಿಗಳನ್ನು ಧಮನ ಮಾಡಿಲ್ಲ ಅಂದ್ರೆ ಮುಂದೆ ದೇಶಕ್ಕೆ ಅಪಾಯವಿದೆ. ತನಿಖಾ ವರದಿಯಲ್ಲಿ ಸಂಘಟನೆಗಳ ಕೈವಾಡದ ಬಗ್ಗೆ ಮಾಹಿತಿ ಇದೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ  ಮಾಹಿತಿ ಕಳುಹಿಸುವ ಕೆಲಸ ಆಗ್ತಿದೆ.



ಆ ಹೆಣ್ಮಗಳು ಮಾತು ಕೇಳಿ ಮನಸ್ಸಿಗೆ ನೋವಾಯ್ತು

ಕೆಂದ್ರ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇವರಿಂದ ನಮ್ಮ ಮಕ್ಕಳ ಮನಸ್ಥಿತಿ ಹಾಳಾಗಿದೆ. ಹಿಜಾಬ್ ಧರಿಸಿ ಶಾಲೆಗೆ ಬರ್ತೀನಿ ಅಂತಾ ಹೇಳೋರು, ನಾಳೆ ಸಿಲಬಸ್ ಚೈಂಜ್ ಮಾಡಿ ಅಂತಾ ಹೇಳಬಹುದು. ಇವರು ಮೂಲಭೂತವಾದಿಗಳು. ನಿನ್ನೆ ಒಂದು ಹೆಣ್ಣು ಮಗಳು ಕೋರ್ಟ್ ಆದೇಶ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾಳೆ. ಆ ಹೆಣ್ಣು ಮಗಳ ಮಾತು ಕೇಳಿ ನನಗೆ ಮನಸ್ಸಿಗೆ ನೋವು ಆಯ್ತು.

ಶಾಂತಿ ಬಯಸಲ್ಲ, ರಕ್ತಪಾತ ಬಯಸ್ತಾರೆ

ಇವರ ಹಿಂದಿರುವ ಮತಾಂದ ಶಕ್ತಿಗಳನ್ನು ಧಮನ ಮಾಡಬೇಕು. ಇದಕ್ಕೆ ಬೇಕಾದ ಎಲ್ಲಾ ಮಾಹಿತಿ ಗಳನ್ನು ಪೊಲೀಸರು ಕಲೆ ಹಾಕ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಈ ಮಾಹಿತಿಯನ್ನು ಕಳುಹಿಸಿ ಕೊಡುವ ಕೆಲಸ ಆಗ್ತಿದೆ. ಇದರ ಬಗ್ಗೆ ಬಹಳಷ್ಟು ತನಿಖೆ ಕೂಡ ನಡೆಯುತ್ತಿದೆ. ಈ ರೀತಿ ಎಲ್ಲಾ ನಡೀತ್ತಿದೆ ಅಂದಾಗ ಒಂದು ಸರ್ಕಾರ ಅಂದಾಗ ಸುಮ್ಮನೆ ಕುಳಿತು ಕೊಳ್ಳಲು ಆಗುವುದಿಲ್ಲ. ಇವರು ಶಾಂತಿ ಬಯಸಲ್ಲ, ರಕ್ತಪಾತವನ್ನು ಬಯಸ್ತಾರೆ ಎಂದು ಕೋಮುಶಕ್ತಿಗಳ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.

ಇದನ್ನೂ ಓದಿ:  Hijab Controversy: ಮಂಡ್ಯ ಬಳಿಕ ತುಮಕೂರಿನಲ್ಲಿ ಮಾರ್ದನಿಸಿದ ‘ಅಲ್ಲಾಹು ಅಕ್ಬರ್’ ಘೋಷಣೆ..!

ಈಶ್ವರಪ್ಪ ಮನೆಗೆ ಕಾಂಗ್ರೆಸ್ ಮುತ್ತಿಗೆ ಯತ್ನ

ಸಚಿವರ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಈಶ್ವರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯ್ತು. ಈ ವೇಳೆ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.



ಈ ವೇಳೆ ಮಾತನಾಡಿದ ಮನೋಹರ್, ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಸದನದಲ್ಲಿ ಅವರ ವರ್ತನೆ ಸರಿಯಿಲ್ಲ. ಏಕವಚನದಲ್ಲಿ ಈಶ್ವರಪ್ಪ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
Published by:Mahmadrafik K
First published: