2 ಡೋಸ್ ಲಸಿಕೆ ಬಳಿಕವೂ ಕೊರೊನಾ ಬಂದಿದ್ದಕ್ಕೆ ಅಪಾರ್ಟ್​​​ಮೆಂಟ್​​ ನಿವಾಸಿಗಳ ಬೇಸರ.. ಡೆಲ್ಟಾ+ ಶಂಕೆ!

ಮಾಹಾಲಕ್ಷ್ಮೀ ಲೇಔಟ್​​ನ  ಅಪಾರ್ಟ್​​ಮೆಂಟ್​​ನಲ್ಲಿ ಕೊರೋನಾ 16 ಮಂದಿಗೆ ವಕ್ಕರಿಸಿತ್ತು. ಈಪೈಕಿ 12 ಮಂದಿಗೆ ಎರಡು ಡೋಸ್ ಲಸಿಕೆ ಪೂರ್ಣಗೊಂಡಿತ್ತು. ಹೀಗಿದ್ರೂ ಕೊರೋನಾ ಬಂದಿರೋದು ಈಗ ಪಾಲಿಕೆಯ ಆತಂಕಕ್ಕೆ ಕಾರಣವಾಗಿದೆ.

ಅಪಾರ್ಟ್​​ಮೆಂಟ್​ ಸೀಲ್​ಡೌನ್​ ಮಾಡುತ್ತಿರುವ ಅಧಿಕಾರಿಗಳು

ಅಪಾರ್ಟ್​​ಮೆಂಟ್​ ಸೀಲ್​ಡೌನ್​ ಮಾಡುತ್ತಿರುವ ಅಧಿಕಾರಿಗಳು

  • Share this:
ಬೆಂಗಳೂರು:  ಕೇರಳದಲ್ಲಿ ಕೊರೊನಾ 3ನೇ ಅಲೆ ಅಪ್ಪಳಿಸಿ ಜನರ ಬದುಕುಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇತ್ತ ರಾಜಧಾನಿಯಲ್ಲೂ ಒಂದೊಂದೇ ಅಪಾರ್ಟ್​​ಮೆಂಟ್​​ನಲ್ಲಿ ಕೊರೋನಾ ಬ್ಲಾಸ್ಟ್ ಆಗ್ತಿದೆ. ಇದರ ನಡುವೆಯೇ ಬೆಂಗಳೂರಿನ ಜನರ ನಿರ್ಲಕ್ಷ್ಯ ಮಿತಿ ಮೀರಿದೆ. ವಾರಾಂತ್ಯದ ಶಾಪಿಂಗ್ ವೇಳೆ ಕೊರೊನಾ ಅನ್ನೋದು ಇತ್ತು ಅನ್ನೋದೆ ಜನ ಮರೆತೋಗಿದ್ದಾರೆ. 

ಬೆಂಗಳೂರಿನಲ್ಲಿ ಎರಡನೇ ಅಲೆ ಆರಂಭದ ದಿನಗಳದು. ಒಂದೊಂದೇ ಅಪಾರ್ಟ್ಮೆಂಟ್ ನಲ್ಲಿ ಕೊರೋನಾ ಬ್ಲಾಸ್ ಆಗೋಕೆ ಶುರುವಾಗಿತ್ತು. ಒಂದು ತಿಂಗಳ ಅವಧಿಯಲ್ಲೇ 40 ರಿಂದ 50 ಅಪಾರ್ಟ್ಮೆಂಟ್ಗಳು ಕಂಟೈನ್ಮೆಂಟ್ ಝೋನಾಗಿ ಪರಿವರ್ತನೆ ಆಗಿದ್ವು. ಅದೇ ಎರಡನೇ ಅಲೆ ಆರಂಭದ ದಿನಗಳು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ರು. ಇದೀಗ ಬೆಂಗಳೂರಿನಲ್ಲಿ ಮತ್ತದೇ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ದಿನಕ್ಕೊಂದು ಅಪಾರ್ಟ್ಮೆಂಟ್ನಲ್ಲಿ ಕೊರೋನಾ ಬ್ಲಾಸ್ಟ್ ಆಗೋಕೆ ಶುರವಾಗಿದೆ.

ನಿನ್ನೆ ತಾನೇ ರೆನಾಸಾನ್ ಟೆಂಪಲ್ ರನ್ ಅಪಾರ್ಟ್ಮೆಂಟ್ನಲ್ಲಿ 16 ಮಂದಿಗೆ ವಕ್ಕರಿಸಿದ್ದ ಕೊರೋನಾ ಇಂದು ಬಿನ್ನಿಮಿಲ್ ಬಳಿ ಇರೋ ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ನಲ್ಲಿ ಸಿಡಿದಿದೆ. ಅಪಾರ್ಟ್ಮೆಂಟ್ನ 4ನೇ ಅಂತಸ್ತಿನ ಒಂದೇ ಕುಟುಂಬದ 6 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಹೀಗಾಗಿ ವಾರ್ಕ್ ವೆಸ್ಟ್ ಅಪಾರ್ಟ್ಮೆಂಟ್​​ಮ ಕಂಪ್ಲೀಟ್ ನಾಲ್ಕನೇ ಪ್ಲೋರನ್ನ ಸೀಲ್ಡೌನ್ ಮಾಡಲಾಗಿದೆ.

ಇನ್ನು ನಿನ್ನೆ  ಮಾಹಾಲಕ್ಷ್ಮೀ ಲೇಔಟ್​​ನ  ಅಪಾರ್ಟ್​​ಮೆಂಟ್​​ನಲ್ಲಿ ಕೊರೋನಾ 16 ಮಂದಿಗೆ ವಕ್ಕರಿಸಿತ್ತು. ಈಪೈಕಿ 12 ಮಂದಿಗೆ ಎರಡು ಡೋಸ್ ಲಸಿಕೆ ಪೂರ್ಣಗೊಂಡಿತ್ತು. ಹೀಗಿದ್ರೂ ಕೊರೋನಾ ಬಂದಿರೋದು ಈಗ ಪಾಲಿಕೆಯ ಆತಂಕಕ್ಕೆ ಕಾರಣವಾಗಿದೆ. ಕಾರಣ ಎರಡು ಡೋಸ್ ಪಡೆದ್ರೂ ಕೊರೋನಾ ಬಂದಿದೆ ಅಂದ್ರೆ ಅದು ಡೆಲ್ಟಾ ಪ್ಲಸ್ ಇರಬಹುದೆಂದು ಪಾಲಿಕೆ ಊಹಿಸಿದೆ. ಹೀಗಾಗಿ ಎಲ್ಲಾ 16 ಮಂದಿಯ ಸ್ಯಾಂಪಲ್ ಕಲೆಕ್ಟ್ ಮಾಡಿ ಜಿನೋಮಿಕ್ ಸೀಕ್ವೆಂನ್ಸಿಂಗ್ ಟೆಸ್ಟ್ ಗೆ ಕಳುಹಿಸಿಕೊಡಲಾಗಿದೆ. ಇನ್ನು ಎಂ ಬ್ಲಾಕ್ ನ 300 ಮಂದಿಯನ್ನ ಈಗಾಗಲೇ ಕೊರೋನಾ ಟೆಸ್ಟ್ ಗೆ ಒಳಪಡಿಸಿದ್ದು ಉಳಿದ 5 ಬ್ಲಾಕ್ ಗಳ ಮಂದಿಯನ್ನೂ ಟೆಸ್ಟ್ ಗೆ ಒಳಪಡಿಸೋಕೆ ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ: Corona Wave: ಬೆಂಗಳೂರಿನ ಒಂದೇ ಅಪಾರ್ಟ್ಮೆಂಟ್​ನಲ್ಲಿ 385 ಜನರ ಐಸೋಲೇಶನ್; ಇಡೀ ಬ್ಲಾಕ್ ಸೀಲ್ ಡೌನ್

ರಾಜಧಾನಿಯಲ್ಲಿ ಕೊರೋನಾ ಸಂಖ್ಯೆ ಏರುಗತಿ ಹಿಡಿದಿರೋದು ಮೂರನೇ ಅಲೆಯ ಮನ್ಸೂಚನೆ ಅನ್ನೋದನ್ನ ತಜ್ಞರು ಈಗಾಗಲೇ ಎಚ್ಚರಿಸ್ತಿದ್ದಾರೆ. ಹೀಗಿದ್ರೂ ಜನ ಮಾತ್ರ ಮೈಮರೆತು ಓಡಾಡ್ತಿದ್ದಾರೆ. ಇಂದು ಭಾನುವಾರ ಅಂತ ಜನರೆಲ್ಲಾ ಫುಲ್ ಶಾಪಿಂಗ್ ಮೂಡೆಗ್ಗೆ ಜಾರಿದ್ರು. ನಗರದ ಸಂಡೆ ಬಜಾರ್ ರಸ್ತೆಯಂತೂ ಜನಜಂಗುಳಿಯಿಂತ ತುಂಬಿ ತುಳುಕಾಡ್ತಿತ್ತು. ಮಾರ್ಕೇಟ್ ಚಿತ್ರಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಚಿಕ್ಕಪೇಟೆಯಲ್ಲೂ ಭಾನವಾರದ ಶಾಂಪಿಂಗ್ ಅಂತ ಸಾವಿರಾರು ಮಂದಿ ರಸ್ತೆಗಿಳಿಸಿದ್ರು. ರಸ್ತೆಗಿಳಿಯೋದು ಮಾತ್ರವಲ್ಲ ಮಾಸ್ಕ್, ಸಾಮಾಜಿಕ ಅಂತರವನ್ನೂ ಮರೆತಿದ್ರು.

ಈಗಾಗಲೇ ನಿಧಾನವಾಗಿ ಏರ್ತಿರೋ ಮೂರನೇ ಅಲೆಗೆ ಜನರ ಈ ವರ್ತನೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗೋದಂತೂ ಸತ್ಯ.ಇದೆಲ್ಲದರ ನಡುವೆ ಮಹಾರಾಷ್ಟ್ರ, ಕೇರಳ ರಾಜ್ಯದಲ್ಲಿ ಕೊರೋನಾ ತೀವ್ರಗತಿಯಲ್ಲಿ ಏರ್ತಿದೆ. ಹೀಗಾಗಿ ಹೊರ ರಾಜ್ಯದಿಂದ ನಗರಕ್ಕೆ ಸೋಂಕು ಹೊತ್ತು ಬರೋ ಜನ್ರನ್ನ ಕಂಟ್ರೋಲ್ ಮಾಡೋಕೆ ಸರ್ಕಾರ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿದೆ. ಆದ್ರೆ ನಗರದ ರೈಲ್ವೆ ನಿಲ್ದಾಣ ಬಸ್ ನಿಲ್ದಾಣದಲ್ಲಿ ನೆಪಮಾತ್ರಕ್ಕೆ ಹೊರ ರಾಜ್ಯದ ಪ್ರಯಾಣಿಕರಿಗೆ ಟೆಸ್ಟ್ ನಡೆಯುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ಕೇವಲ 500 ಮಂದಿಗೆ ಮಾತ್ರ ಕೊರೋನಾ ಟೆಸ್ಟ್ ನಡೆಸಲಾಗ್ತಿದೆ. ಹೀಗಾಗಿ ಸೋಂಕು ಬೇಗ ವ್ಯಾಪಿಸೋ ಭಯ ಹೆಚ್ಚಾಗ್ತಿದೆ. ಒಟ್ಟಿನಲ್ಲಿ ಮೂರನೇ ಅಲೆ ಬರುತ್ತೆ ಬರುತ್ತೆ ಅಂತಿರುವಾಗ್ಲೇ ಕೊರೋನಾ ಪೆಡಂಬೂತ ಮೂರನೇ ಅಲೆಯಾಗಿ ಬಂದಪ್ಪಳಿಸಿದೆ. ಜನ್ರ ನಿರ್ಲಕ್ಷ್ಯ ಅಲೆಯ ವೇಗವನ್ನ ಇನ್ನಷ್ಟು ಹೆಚ್ಚು ಮಾಡೋ ಎಲ್ಲಾ ಲಕ್ಷಣವನ್ನೂ ತೋರಿಸ್ತಿದೆ.
Published by:Kavya V
First published: