Bengaluru TecHalli: ಗಾರ್ಡನ್ ಸಿಟಿ, ಪೆನ್ಶನರ್ಸ್ ಪ್ಯಾರಡೈಸ್ ಎಂದೆಲ್ಲಾ ಕರೆಸಿಕೊಳ್ಳುವ ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ ಸಂಸ್ಥೆಗಳು ಹೆಚ್ಚಾದ ನಂತರ ಭಾರತದ ಸಿಲಿಕಾನ್ ವ್ಯಾಲಿ ಎಂದೆನಿಸಿಕೊಂಡು ಸಿಲಿಕಾನ್ ಸಿಟಿಯಾಯ್ತು. ಆದ್ರೆ ಮಹಿಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹಿಂದ್ರಾ ಟ್ವಿಟರ್ (Twitter) ಮೂಲಕ ಬೆಂಗಳೂರಿಗೆ ಹೊಸಾ ಹೆಸರನ್ನು ಸೂಚಿಸುವಂತೆ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಅನೇಕರು ಥರಾವರಿ ಹೆಸರು ಸೂಚಿಸಿದ್ದರು. ಕೊನೆಗೆ ಬೆಂಗಳೂರಿನವರೇ ಆದ ಉದ್ಯಮಿ ನಂದನ್ ನಿಲೇಕಣಿ ಜೊತೆ ಸೇರಿ ಒಂದು ಹೆಸರನ್ನು ಆಯ್ಕೆ ಮಾಡಿ ಘೋಷಿಸಿದ್ದಾರೆ- ಅದೇ ಟೆಕ್-ಹಳ್ಳಿ.
ಕನ್ನಡದಲ್ಲಿ ಹಳ್ಳಿ ಅಂದರೆ ಗ್ರಾಮ. ಟೆಕ್ ಅಂದ್ರೆ ತಂತ್ರಜ್ಞಾನದ ಗ್ರಾಮ ಎಂದು ಬೆಂಗಳೂರನ್ನು ಕರೆದಿದ್ದಾರೆ. TecHalli ಎನ್ನುವ ಈ ಇಂಗ್ಲಿಷ್ ಪದದಲ್ಲಿ ಮಧ್ಯದ H ಅಕ್ಷರವನ್ನು ಎರಡೂ ಪದಗಳಿಗೆ ಹೊಂದಿಕೆಯಾಗುವಂತೆ ಬಳಸಲಾಗಿದೆ. ಅಂದ್ಹಾಗೆ ಈ ಪದ ಸೂಚಿಸಿದವರು ಶ್ರೀನಿವಾಸ್ ಪಿ ರೆಡ್ಡಿ ಎನ್ನುವವರು. ಬೆಂಗಳೂರಿನ ಈ ಹೊಸಾ ಬಿರುದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಸೂಚಿಸಿದ್ದ ನಾನಾ ಬಗೆಯ ಹೆಸರುಗಳಲ್ಲಿ ಒಟ್ಟು 4 ಫೈನಲ್ ಲಿಸ್ಟ್ಗೆ ಹೋಗಿದ್ದವಂತೆ. ಅದರಲ್ಲಿ ಕೊನೆಯದಾಗಿ ಈ ಹೆಸರನ್ನು ಆನಂದ್ ಮಹಿಂದ್ರಾ ಮತ್ತು ನಂದನ್ ನೀಲೇಕಣಿ ಸೇರಿ ಆರಿಸಿದ್ದಾರೆ. ಟ್ವಿಟರ್ ಮೂಲಕ ಆನಂದ್ ಮಹಿಂದ್ರಾ ಇದನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಗೀತಾ ಮಿಸ್ನ್ನ ಮಿಸ್ ಮಾಡ್ಕೊಂಡ ಮಕ್ಕಳಿಗೆ ಸರ್ಪ್ರೈಸ್ ಲೆಟರ್, Viral ಆಗ್ತಿದೆ ಶಿಕ್ಷಕಿ ಬರೆದ ಪತ್ರ !
ಸಿಲಿಕಾನ್ ವ್ಯಾಲಿ ಎನ್ನುವ ಹೆಸರು ಬೆಂಗಳೂರಿಗೆ ಅಂಟಿಕೊಳ್ಳುವ ಬದಲು ನಮ್ಮದೇ ಆದ ಸ್ವಂತ ಹೆಸರಿದ್ದರೆ ಚೆನ್ನ ಎಂದು ಈ ವಿಚಾರದ ಚರ್ಚೆ ಆರಂಭಿಸಿದ್ದರು ಆನಂದ್ ಮಹಿಂದ್ರಾ. ಯಾರಾದರೂ ಸೂಚಿಸಿದ ಹೆಸರು ಆಯ್ಕೆಯಾದರೆ ಅವರಿಗೆ Pininfarina H2 Speed ಹೈಡ್ರೋಜನ್ ರೇಸ್ ಕಾರಿನ ಪ್ರತಿಕ್ರಿತಿ ಬಹುಮಾನವಾಗಿ ಸಿಗಲಿದೆ ಎಂದಿದ್ದರು. ಕೊಟ್ಟ ಮಾತಿನಂತೆ ಶ್ರೀನಿವಾಸ್ ಪಿ ರೆಡ್ಡಿಯವರಿಗೆ ವಿಳಾಸ ಕಳಿಸಿಕೊಡಲು ಹೇಳಿದ್ದಾರೆ.
We have a result: @NandanNilekani who agreed to be a co-judge shortlisted 4 entries and then we both converged on one entry from those that we thought was the most appropriate. And the winner is…(Drumroll please) ‘TecHalli’ submitted by @SrinivasPReddy 👏🏼👏🏼 (1/2) https://t.co/u6YQExBccL
— anand mahindra (@anandmahindra) June 4, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ