HOME » NEWS » State » BENGALURU URBAN AMIT SHAH MISSING COMPLAIN REGISTER IN DELHI BY KARNATAKA MAN KVD

ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿದ್ದವರು ಈಗ ಎಲ್ಲಿ? ಅಮಿತ್ ಶಾ ಕಾಣೆಯಾಗಿದ್ದಾರೆಂದು ದೂರು ದಾಖಲು!

ಚುನಾವಣೆಯಷ್ಟೇ ಕೇಂದ್ರ ಗೃಹ ಸಚಿವರ ಆದ್ಯತೆಯೇ, ದೇಶ ಕೊರೋನಾದಿಂದ ನರಳುತ್ತಿರುದಕ್ಕೆ ಅವರು ಸ್ಪಂದಿಸುವುದಿಲ್ಲವೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Kavya V | news18-kannada
Updated:May 12, 2021, 6:22 PM IST
ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿದ್ದವರು ಈಗ ಎಲ್ಲಿ? ಅಮಿತ್ ಶಾ ಕಾಣೆಯಾಗಿದ್ದಾರೆಂದು ದೂರು ದಾಖಲು!
ಅಮಿತ್​ ಶಾ ಕಾಣೆಯಾಗಿದ್ದಾರೆಂದು ದೂರು
  • Share this:
ಬೆಂಗಳೂರು: ದೇಶದಲ್ಲಿ 2ನೇ ಅಲೆ ವಿಷಮಸ್ಥಿತಿಯನ್ನು ನಿರ್ಮಿಸಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಈಗ ಎಲ್ಲಿದ್ದಾರೆ ಎಂದು NSUI ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಪ್ರಶ್ನಿಸಿದ್ದಾರೆ. ಜೊತೆ ಬಿಜೆಪಿ ಚಾಣುಕ್ಯ ಅಮಿತ್​ ಶಾ ಅವರು ಕಾಣೆಯಾಗಿದ್ದಾರೆ ಎಂದು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಂಪ್ಲೇಂಟ್​ ಸ್ವೀಕರಿಸಿರುವುದಾಗಿ ದೆಹಲಿ ಪೊಲೀಸರು ನಾಗೇಶ್​ ಅವರಿಗೆ ಸ್ಪಂದಿಸಿದ್ದಾರೆ.

ಆನ್​ಲೈನ್​ ಮೂಲಕ ದೂರು ಸಲ್ಲಿಸಿರುವ ನಾಗೇಶ್ ಕರಿಯಪ್ಪ ವಿಡಿಯೋ ಮೂಲಕ ಅಮಿತ್​ ಶಾ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ತಿಂಗಳು ಗೃಹ ಸಚಿವ ಅಮಿತ್​ ಶಾ ಚುನಾವಣೆ ನಡೆದ ರಾಜ್ಯಗಳಲ್ಲಿ ಬೃಹತ್​ ಱಲಿಗಳನ್ನು ಆಯೋಜಿಸಿದ್ದರು. ಪಶ್ಚಿಮ ಬಂಗಾಳದಲ್ಲಂತೂ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ ಚುನಾವಣಾ ಫಲಿತಾಂಶ ಬಂದ ಬಳಿಕ ಅಮಿತ್​  ಶಾ ಅವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಚುನಾವಣೆಯಷ್ಟೇ ಕೇಂದ್ರ ಗೃಹ ಸಚಿವರ ಆದ್ಯತೆಯೇ, ದೇಶ ಕೊರೋನಾದಿಂದ ನರಳುತ್ತಿರುದಕ್ಕೆ ಅವರು ಸ್ಪಂದಿಸುವುದಿಲ್ಲವೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಚುನಾವಣಾ ಫಲಿತಾಂಶ ಹೊರ ಬಿದ್ದು 15 ದಿನಗಳಾದರೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ದೂರು ದಾಖಲಿಸಿರುವುದಾಗಿ ನಾಗೇಶ್​ ಕರಿಯಪ್ಪ ತಿಳಿಸಿದರು. ಗೃಹ ಸಚಿವ ಅಮಿತ್ ಶಾರನ್ನು ಹುಡುಕಿಕೊಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಕೊರೊನಾ ಸಂಕಷ್ಟದಲ್ಲಿ ಜನರ ಕಷ್ಟಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಚುನಾವಣೆಗಷ್ಟೇ ಪ್ರತ್ಯಕ್ಷವಾಗಿ ಮತ್ತೆ ಮಾಯವಾಗುತ್ತಾರೆ. ಗೃಹಸಚಿವರನ್ನು ಹುಡುಕಿಕೊಂಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿರುವ ದೆಹಲಿ ಪೊಲೀಸರು ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
Youtube Video

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರುವರೆ ಲಕ್ಷದಷ್ಟು ಜನ ಸೋಂಕು ಪೀಡಿತರಾಗುತ್ತಿದ್ದಾರೆ.

ಮಂಗಳವಾರ 3,48,421 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,55,338 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,33,40,938ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಮಂಗಳವಾರ  4,205 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,54,197ಕ್ಕೆ ಏರಿಕೆ ಆಗಿದೆ.

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
Published by: Kavya V
First published: May 12, 2021, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories