HOME » NEWS » State » BENGALURU URBAN AMBULANCES FACING PROBLEM DUE TO CM HOME ROAD BLOCKING AND CONGRESS URGES TO REMOVE BARRICADES KVD

ಸಿಎಂ ನಿವಾಸ ರಸ್ತೆ ಬಂದ್​​ನಿಂದ ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಆರೋಪ; ರಸ್ತೆ ತೆರವಿಗೆ ಕಾಂಗ್ರೆಸ್ ಪಟ್ಟು

ಬ್ಯಾರಿಕೇಡ್ ಅಳವಡಿಸಿರುವುದರಿಂದ ಆಂಬ್ಯುಲೆನ್ಸ್‌ಗಳು ಸೇರಿದಂತೆ ಹಲವು ವಾಹನಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಬ್ಯಾರಿಕೇಡ್ ತೆರವುಗೊಳಿಸುವಂತೆ ಕಾಂಗ್ರೆಸ್  ಕಾರ್ಯಕರ್ತರು ಒತ್ತಾಯಿಸಿದರು.

Kavya V | news18-kannada
Updated:May 22, 2021, 4:18 PM IST
ಸಿಎಂ ನಿವಾಸ ರಸ್ತೆ ಬಂದ್​​ನಿಂದ ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಆರೋಪ; ರಸ್ತೆ ತೆರವಿಗೆ ಕಾಂಗ್ರೆಸ್ ಪಟ್ಟು
ಸಿಎಂ ನಿವಾಸ ರಸ್ತೆ ಬಂದ್​
  • Share this:
ಬೆಂಗಳೂರು: ಕೊರೋನಾ 2ನೇ ಅಲೆ ಅಬ್ಬರದಿಂದ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ, ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಎದುರು ಬಂದು ನೆರವಿಗಾಗಿ ಸೋಂಕಿತರು ಬೇಡಿಕೊಂಡಿದ್ದರು. ಇದನ್ನು ತಪ್ಪಿಸಲು ಕಳೆದ ಕೆಲ ವಾರಗಳಿಂದ ಸಿಎಂ ನಿವಾಸದ ರಸ್ತೆಯನ್ನು ಬ್ಯಾರಿಕೇಡ್​​ ಮೂಲಕ ಬಂದ್​ ಮಾಡಲಾಗಿದೆ. ಮುಖ್ಯಮಂತ್ರಿಗಳ ಮನೆಯಿರುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಇಂದು ಬ್ಯಾರಿಕೇಡ್​ ತೆರವುಗೊಳಿಸುವಂತೆ ಒತ್ತಾಯಿಸಿದರು.

ಕೆ.ಕೆ ಗೆಸ್ಟ್ ಹೌಸ್ ರಸ್ತೆ ಸುಗಮ ಸಂಚಾರಕ್ಕೆ ಕಾಂಗ್ರೆಸ್ ಆಗ್ರಹಿಸಿತು. ಬ್ಯಾರಿಕೇಡ್ ಅಳವಡಿಸಿರುವುದರಿಂದ ಆಂಬ್ಯುಲೆನ್ಸ್‌ಗಳು ಸೇರಿದಂತೆ ಹಲವು ವಾಹನಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಬ್ಯಾರಿಕೇಡ್ ತೆರವುಗೊಳಿಸುವಂತೆ ಕಾಂಗ್ರೆಸ್  ಕಾರ್ಯಕರ್ತರು ಒತ್ತಾಯಿಸಿದರು. ಈ ಸಂಬಂಧ ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಸಿಎಂ ಬಿ.ಎಸ್​.ಯಡಿಯೂರಪ್ಪಗೆ ಮನವಿ ಸಲ್ಲಿಸಲು ಮುಂದಾದರು.

ಆದರೆ ಕಾಂಗ್ರೆಸ್​ ಕಾರ್ಯಕರ್ತರನ್ನು ಸಿಎಂ ನಿವಾಸದ ಮುಂಭಾಗದಲ್ಲೇ ಪೋಲಿಸರು ತಡೆದರು. ಈ ವೇಳೆ ಸಿಎಂ ನಿವಾಸದ ಮುಂಭಾಗದ ರಸ್ತೆಯನ್ನ ಇವರು ಯಾಕೆ ಬಂದ್ ಮಾಡಿದ್ದಾರೆ? ಇದು ಪಬ್ಲಿಕ್ ರಸ್ತೆ ಇಲ್ಲಿ ಯಾಕೆ ಇವರು ಬಂದ್ ಮಾಡಿದ್ದಾರೆ ಎಂದು ಮಾಜಿ ಮೇಯರ್ ರಾಮಚಂದ್ರಪ್ಪ ಪ್ರಶ್ನಿಸಿದರು.

ಸಿಎಂ ನಿವಾಸದ ಮುಂಭಾಗದ ರಸ್ತೆಯನ್ನ‌ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಆಂಬ್ಯುಲೆನ್ಸ್ ಈ ಮಾರ್ಗದಲ್ಲಿ ಬಂದು ನಂತರ ವಾಪಸ್ ಹೋಗುತ್ತಿವೆ. ಅದಕ್ಕೆ ರಸ್ತೆ ತೆರವು ಮಾಡುವಂತೆ ಮನವಿ ಕೊಡಲು ಬಂದೆವು. ಆದರೆ ನಮ್ಮ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಇದು ಸಾರ್ವಜನಿಕ‌ ರಸ್ತೆ ಇದು ನಮ್ಮ ರಸ್ತೆ. ಸಿಎಂ ಬೇಕಾದರೆ ಅವರ ಸ್ವಂತ ಮನೆಗೆ ಹೋಗಲಿ. ಇಲ್ಲಿ ಬ್ಯಾರಿಕೇಡ್ ಹಾಕಿಕೊಂಡು ಬಂದ್ ಮಾಡಿದ್ರೆ ಹೇಗೆ. ಇಲ್ಲಿ ಆಂಬ್ಯುಲೆನ್ಸ್ ಸುತ್ತಾಡಿಕೊಂಡು ಹೋಗಬೇಕು. ಪ್ರಾಣ ಹಾನಿಯಾದರೆ ಯಾರು ಹೊಣೆಯಾಗ್ತಾರೆ? ಆ್ಯಂಬುಲೆನ್ಸ್‌ಗೆ ಎಲ್ಲ ಕಡೆ ಮುಕ್ತ ಅವಕಾಶವಿದೆ. ಇಲ್ಲಿ ಸಿಎಂ ಇದ್ದಾರೆ ಅಂತ ಈ ರಸ್ತೆ ಬಂದ್ ಮಾಡಿದ್ರೆ ಹೇಗೆ..? ಯಾರ ಪ್ರಾಣ ಬೇಕಾದ್ರೂ ಹೋಗಬಹುದಾ ಎಂದು ಮಾಜಿ ಮೇಯರ್ ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕ್ಯಾಮರಾ ನೋಡಿಕೊಂಡು ಅಳುವುದು ಅದ್ಭುತ ನಟನೆ; ಪ್ರಧಾನಿ ಮೋದಿ ಕಣ್ಣೀರಿಗೆ ಕಾಂಗ್ರೆಸ್ ವ್ಯಂಗ್ಯ

ಇನ್ನು ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,57,299 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಒಂದೇ ದಿನ 4,194 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,95,525ಕ್ಕೆ ಏರಿಕೆ ಆಗಿದೆ. ಈವರೆಗೆ 2,30,70,365 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 29,23,400 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್​ ನಿಯಮವಾದ ಮಾಸ್ಕ್​​ ಧಾರಣೆ, ಸಾಮಾಜಿಕ ಅಂತರವನ್ನು ತಪ್ಪದೇಪಾಲಿಸಬೇಕಿದೆ. ಇನ್ನು ಲಸಿಕೆ ಪಡೆದು ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಬೇಕಿದೆ.
Published by: Kavya V
First published: May 22, 2021, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories