Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ.. ನಿಮ್ಮ ಏರಿಯಾ ಕೂಡಾ ಈ ಲಿಸ್ಟ್ ನಲ್ಲಿ ಇದೆಯಾ ನೋಡಿ..

Bengaluru Power Cut:ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿನ್ನೆ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಕೆಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಜನರು ಒಂದೆಡೆ ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಬೆಸ್ಕಾಂ(BESCOM) ಪವರ್ ಕಟ್ (Power Cut)ಮಾಡಿ ಜನರ ಸಂಕಷ್ಟವನ್ನು ಹೆಚ್ಚು ಮಾಡುತ್ತಿದೆ. ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಆಗುತ್ತಿದ್ದು, ಜನರು ಪರದಾಡುತ್ತಿದ್ದರೆ. ಇನ್ನು ಈ ಮಧ್ಯೆ ಸಹ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದ್ದು, ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

 ಎಲ್ಲೆಲ್ಲಿ ಪವರ್ ಕಟ್

ದೇವನಹಳ್ಳಿ ಟೌನ್, ಪ್ರಸನಹಳ್ಳಿ, ಬೂದಿಹಳ್ಳ, ಸೌತೆಗೌಡನಹಳ್ಳಿ, ಬಿನ್ನಮಂಗಲ, ಕಾಮಸಮುದ್ರ, ಡಿಪಿ ಹಳ್ಳಿ ಗೌಡನಪಾಳ್ಯ ಎಫ್ 15 ಬಸ್ ನಿಲ್ದಾಣ ಸೇರಿದಂತೆ  ಕುಮಾರಸ್ವಾಮಿ ಲೇಔಟ್, ಅಂಜನಾಪುರ, ತಲಘಟ್ಟಪುರ, ಹರಿ ಕಾಲೋನಿ, ಇಲಿಯಾಸ್ ನಗರ, ಇಸ್ರೋ ಲೇಔಟ್, ಜನಪ್ರಿಯ ಟೌನ್ ಶಿಪ್, ಮಾಚೋಹಳ್ಳಿ, ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆ ಎದುರಾಗಲಿದೆ.

ಭವಾನಿ ನಗರ, ದೊಡ್ಡಬಿದರಕಲ್ಲು, ಗೋಪಿ ಶಾಲಾ ರಸ್ತೆ, ಮೀನಾಕ್ಷಿನಗರ, ಕಾಮಾಕ್ಷಿಪಾಳ್ಯ, ಪಾಪರೆಡ್ಡಿ ಪಾಳ್ಯ ಹಾಗೂ ನಾಗರಭಾವಿ 2 ನೇ ಹಂತ, ಮಾರಗೊಂಡನಹಳ್ಳಿ, ಅಕ್ಷಯ್ ನಗರ, ಕೆಪಿಸಿ ಲೇಔಟ್, ಕಸವನಹಳ್ಳಿ, ವಡೇರಹಳ್ಳಿ ಸೇರಿದಂತೆ ಕನಕಪುರ ಮುಖ್ಯ ರಸ್ತೆ, ಕಗ್ಗಲೀಪುರ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಬಿಎಸ್‌ಕೆ 3 ನೇ ರಸ್ತೆ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇದನ್ನೂ ಓದಿ:  ರಾಜ್ಯದಲ್ಲಿ ಅಕ್ಟೋಬರ್ 12ವರೆಗೆ ಮಳೆ ನಿರೀಕ್ಷೆ- ಇಂದು ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಸ್ಕಾಂ ಕ್ರಮದಿಂದ ಜನ ಗರಂ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ. ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ. ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: