Bengaluru Power Cut: ಮಳೆಯಿಂದ ಫೀಡರ್​ಗಳಿಗೆ ಹಾನಿ - ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್

Bengaluru Power Cut: ವಿದ್ಯುತ್ ವಲಯದ ಸಂಶೋಧನಾ ವಿಜ್ಞಾನಿ ನೀಡಿರುವ ಮಾಹಿತಿ ಪ್ರಕಾರ, ಬೆಸ್ಕಾಂ ಸೇರಿದಂತೆ ಇತರೆ ವಿತರಣಾ ವಲಯದ ವ್ಯವಸ್ಥೆ ದುರ್ಬಲವಾಗಿದೆ. ಸರಿಯಾದ ವಿತರಣಾ ಮೂಲಸೌಕರ್ಯದ ಕೊರತೆ, ಅದರ ಅಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಈ ಪವರ್ ಕಟ್ ಮಾಡಲು ಮೂಲಕ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ನಗರದಲ್ಲಿ ಧಾರಕಾರ ಮಳೆ (Rainfall)  ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಪರದಾಡುವಂತಾಗಿತ್ತು. ಮಧ್ಯೆ ಬೆಸ್ಕಾಂ(BESCOM) ಸಹ ಪವರ್ ಕಟ್ (Power Cut)ಮಾಡುತ್ತಿದ್ದು ಜನರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್​ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಇಂದು ಸಹ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದ್ದು, ಯಾವ್ಯಾವ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂಬ ಲಿಸ್ಟ್ ನೀಡಿದೆ.

ಎಲ್ಲೆಲ್ಲಿ ಪವರ್ ಕಟ್ ?

ಜಕ್ಕಸಂದ್ರ ಎಕ್ಸ್​ಟೆನ್ಷನ್, ಕೋರಮಂಗಲ 1ನೆ ಬ್ಲಾಕ್ ನಲ್ಲಿ ಎಫ್ 21 ಫೀಡರ್ ವಿಫಲವಾಗಿದ್ದು, ಕೇಂಬ್ರಿಡ್ಜ್ ಲೇಔಟ್ ಎಫ್ 6 ಫೀಡರ್,  ಕಾಳೆನ ಅಗ್ರಹಾರ, ಬನ್ನೇರು ಘಟ್ಟ ರೋಡ್ , ಬಸವನಪುರ, ಗೊಟ್ಟಿಗೆರೆ ಎಫ್ 4 ಫಿಡರ್  ಹಾಗೂ  ಮಾರೇನಹಳ್ಳಿ, ವಿಜಯನಗರ ಎಫ್ 7 ಫೀಡರ್ ಹಾನಿಗೊಳಗಾಗಿದೆ. ಅದರ ನಿರ್ವಹಣೆ ಹಿನ್ನಲೆ ಈ ಏರಿಯಾಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸಮಸ್ಯೆ ಉಂಟಾಗಲಿದೆ ಎಂದು ಬೆಸ್ಕಾ ಮಾಹಿತಿ ನೀಡಿದೆ.

ಅಂಬೇಡ್ಕರ್ ನಗರ, ಯಶವಂತಪುರ ಎಫ್ 9 ಫಿಡರ್ 250 ಕೆವಿವ ಟ್ರಾನ್ಸ್​ಫಾರ್ಮರ್ ಸಂಖ್ಯೆ 106, 11 ಸುಟ್ಟು ಹೋಗಿದ್ದು, ಮಲ್ಲತಹಳ್ಳಿ, ಬಾಲಾಜಿ ಲೇಔಟ್ 15 ನೇ ಕ್ರಾಸ್, ಏಪ್ 8 ಫೀಡರ್ ದೊಡ್ಡಬಿದ್ರಕಲ್ಲು, ಎಫ್ 9 ಫೀಡರ್ ಜಂಪ್ ಕಟ್  ಆಗಿದ್ದರೆ, ಜಕ್ಕೂರ್, ಆರ್​. ಕೆ. ಹೆಗ್ಡೆ ನಗರ ಎಪ್ 20 ಫೀಡರ್ ಹಾಳಾಗಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಇದನ್ನೂ ಓದಿ: ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ- ವಿವಿಧ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ತ್ಯಾಗರಾಜ್ ಲೇಔಟ್, ಮಂಗನ ಪಾಳ್ಯ, ರಾಜೀವ್ ಗಾಂಧಿ ನಗರ, ಮುನೇಶ್ವರ ಲೇಔಟ್, ಹೊಂಗಸಂದ್ರ, ಗಾರೆಬಾವಿ ಪಾಳ್ಯ,ತಾವರೆಕೆರೆ, ಚಿಕ್ಕ ಆಡುಗೋಡಿ, ಎಸ್​ಜಿ ಪಾಳ್ಯ, ವಿನಾಯಕ ನಗರ, ಶಾಂತಿ ನಗರ, ಟೀ ದಾಸರ ಹಳ್ಳಿ, ಪ್ರಶಾಂತ್ ನಗರ, ರಮೇಶ್ ರೋಡ್ . ಪಿ ಆ್ಯಮಟ್ ಟಿ ಕ್ವಾಟರ್ಸ್ , ಕಾವರ್ ಬೈರಸಂದರ, ವಿರಾಟ ನಗರ, ರೂಪೇನ್ ನಗರ, ನಾಡಮ್ಮ ಲೇಔಟ್, ಬೊಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಕೆಲವು ಕಡೆ ಟ್ರಾನ್ಸ್​ಫಾರ್ಮರ್ ಹಾಳಾಗಿದ್ದರೆ ಮತ್ತೊಂದೆಡೆ ಫೀಡರ್ ಸಮಸ್ಯೆಯಾಗಿದ್ದು, ಜನರು ಸಮಸ್ಯೆ ಎದುರಿಸಬೇಕಾಗಿದೆ.

ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?

ವಿದ್ಯುತ್ ವಲಯದ ಸಂಶೋಧನಾ ವಿಜ್ಞಾನಿ ನೀಡಿರುವ ಮಾಹಿತಿ ಪ್ರಕಾರ, ಬೆಸ್ಕಾಂ ಸೇರಿದಂತೆ ಇತರೆ ವಿತರಣಾ ವಲಯದ ವ್ಯವಸ್ಥೆ ದುರ್ಬಲವಾಗಿದೆ. ಸರಿಯಾದ ವಿತರಣಾ ಮೂಲಸೌಕರ್ಯದ ಕೊರತೆ, ಅದರ ಅಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಈ ಪವರ್ ಕಟ್ ಮಾಡಲು ಮೂಲಕ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.  ಅಲ್ಲದೇ,  ಕಳಪೆ ನೆಟ್‌ವರ್ಕ್ , ಓವರ್‌ಲೋಡ್‌ನಿಂದಾಗಿ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಪದೇ ಪದೇ ಕೈಕೊಡುತ್ತಿವೆ ಎನ್ನಲಾಗುತ್ತಿದೆ.

ಜನರ ಪರದಾಟ ಒಂದೆರೆಡಲ್ಲ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಬೆಸ್ಕಾಂನ ಸಾಮಾಜಿಕ ಜಾಲತಾಣಗಳಲ್ಲಂತೂ ಪೂರ್ತಿಯಾಗಿ ದಿನನಿತ್ಯ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ಮಾಹಿತಿಯೇ ತುಂಬಿರುತ್ತದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.

ಹಾಗೆಯೇ ಎಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: 15 ಕೋಟಿ ರೂ. ಬೆಲೆಯ ಕಡಲೆ ಕಾಳಿಗೆ ಹುಳು ಕಾಟ : ಉಗ್ರಾಣದಲ್ಲೇ ಹಾಳಾಗುತ್ತಿದೆ 3,330 ಮೆಟ್ರಿಕ್ ಟನ್ ಕಡಲೆ

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ. ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Sandhya M
First published: