Heart Checkup: ಪುನೀತ್ ಅಕಾಲಿಕ ಮರಣ ನಂತರ ಆತಂಕದಲ್ಲಿ ಕನ್ನಡಿಗರು; ಹೃದ್ರೋಗ ಆಸ್ಪತ್ರೆಗಳು ಭರ್ತಿ

ಜಯದೇವ ಆಸ್ಪತ್ರೆ ತುಂಬಿ ತುಳುಕುತ್ತಿದೆ. ಜಿಮ್ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್​ ತಿಳಿಸಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್(puneeth rajkumar)​ ಹೃದಯಾಘಾತದಿಂದ (heart attack ) ಅಕಾಲಿಕ ಮರಣ ಹೊಂದಿರುವುದು ಕನ್ನಡಿಗರಲ್ಲಿ ಆತಂಕ (Panic) ಮೂಡಿಸಿದೆ. ಸದೃಢ ಮೈಕಟ್ಟು ಹೊಂದಿದ್ದ, ಚಿಕ್ಕ ವಯಸ್ಸಿನ ಅಪ್ಪು ಸಾವಿನ ಮನೆ ಸೇರಿರುವುದು ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆತಂಕಕ್ಕೆ ಒಳಗಾಗಿರುವ ಯುವಜನತೆ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹೃದಯ ತಪಾಸಣೆ(heart check up) ನಡೆಸುತ್ತಿರುವುದು ಕಂಡು ಬಂದಿದೆ. ಪುನೀತ್​ ನಿಧನದ ನಂತರ ಜಯದೇವ ಆಸ್ಪತ್ರೆಗೆ (jayadeva hospital) ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಇಂದು ಹೃದಯ ತಪಾಸಣೆ ನಡೆಸುತ್ತಿರುವವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಯದೇವ ಆಸ್ಪತ್ರೆಯ ಓಪಿಡಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಧೀಡಿರ್ ಏರಿಕೆಯಾಗಿದೆ.

ಎಷ್ಟು ವಯಸ್ಸಿನ ನಂತರ ತಪಾಸಣೆ ಸೂಕ್ತ?

ಇಂದು ಮಧ್ಯಾಹ್ನ 1 ಗಂಟೆ 1,400 ಮಂದಿ OPD ಚಿಕಿತ್ಸೆಗೆ ಬಂದಿದ್ದಾರೆ. ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಜಯದೇವ ಆಸ್ಪತ್ರೆ ತುಂಬಿ ತುಳುಕುತ್ತಿದೆ. ಜಿಮ್ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್​ ತಿಳಿಸಿದರು. ಈಗಾಗಲೇ ಜಯದೇವ ಆಸ್ಪತ್ರೆಯಲ್ಲಿ ಸುಮಾರು 1,500ಕ್ಕೂ  ಹೆಚ್ಚು ಹೊರರೋಗಿಗಳು ಅಪಾಯಿಂಟ್​ಮೆಂಟ್​​ ಪಡೆದುಕೊಂಡಿದ್ದಾರೆ. 35 ವರ್ಷ ಮೇಲ್ಪಟ್ಟ ಗಂಡಸರು ಹಾಗೂ 45 ವರ್ಷ ಮೇಲ್ಪಟ್ಟ ಹೆಂಗಸರು ವರ್ಷಕ್ಕೆ ಒಂದು ಬಾರಿ ತಪಾಸಣೆ ಮಾಡಿದರೆ ಒಳ್ಳೆಯದು. ಈಗಾಗಲೇ ಭಾರತದಲ್ಲಿ 50% ಸೋಂಬೇರಿ ಜನ ಹೆಚ್ಚಾಗಿದ್ದಾರೆ ಎಂದು ಡಾ.ಮಂಜುನಾಥ್​ ತಿಳಿಸಿದರು.

ತೂಕ ಎತ್ತುವುದರ ಬಗ್ಗೆ ಇರಲಿ ಎಚ್ಚರ

ಎರಡು ಮೂರು ದಿನದಿಂದ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ.20ರಿಂದ 25 ಜನ ಯುವಕರು ಇದ್ದಾರೆ. ಸಾಮಾನ್ಯ ದಿನಗಳಲ್ಲಿ 1000-1200 ಜನ ಬರುತ್ತಿದ್ದರು. ಆದರೆ ಇಂದು ಹೆಚ್ಚು ಜನ ಬಂದಿದ್ದಾರೆ, ಸುಮಾರು 1500 ಮಂದಿ ಬಂದಿದ್ದಾರೆ. ವ್ಯಾಯಾಮ ಮಾಡುವವರು ತಮ್ಮ ದೇಹದ ತೂಕಕ್ಕೆ ತಕ್ಕನಾಗಿ ವ್ಯಾಯಾಮ ಮಾಡಬೇಕು. ಹೆಚ್ಚಿಗೆ ತೂಕ ಎತ್ತುವ ಪ್ರಯತ್ನ ಮಾಡಬಾರದು. ವರ್ಷಕ್ಕೊಮ್ಮೆ ಎಲ್ಲರು  ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಜಯದೇವ ಆಸ್ಪತ್ರೆಯ ಡೈರೆಕ್ಟರ್ ಡಾ.ಮಂಜುನಾಥ್​ ಸಲಹೆ ನೀಡಿದರು.

ಇದನ್ನೂ ಓದಿ: Reason for Heart Attacks: ಯುವಜನರಲ್ಲೇ ಹೃದಯಾಘಾತ ಏಕೆ ಹೆಚ್ಚಾಗಿ ಸಂಭವಿಸುತ್ತಿದೆ? ಇಲ್ಲಿದೆ ಕಾರಣ

ಸಕ್ಕರೆನಾಡಿನ ಜನರಲ್ಲೂ ಭೀತಿ

ಇನ್ನು ಬೆಂಗಳೂರು ಮಾತ್ರವಲ್ಲ ಮಂಡ್ಯ ಜಿಲ್ಲೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮಂಡ್ಯದ ಅಶೋಕ್ ನಗರದಲ್ಲಿನ ಹಾರ್ಟ್ ಕೇರ್ ಸೆಂಟರ್ ಭರ್ತಿಯಾಗಿದೆ. ಕಳೆದೆರಡು ದಿನಗಳಿಂದ ಪುರುಸೊತ್ತಿಲ್ಲದೆ ಖ್ಯಾತ ಹೃದ್ರೋಗ ತಜ್ಞರಾಗಿರುವ ಡಾ. ಪ್ರಶಾಂತ್ ರೋಗಿಗಳ ತಪಾಸಣೆಯಲ್ಲಿ ತೊಡಗಿದ್ದಾರೆ. ಮನೆಗೆ ತೆರಳಲಾಗದಷ್ಟು ರೋಗಿಗಳು ಬರ್ತಿದ್ದಾರೆ. ಜನರ ಆತಂಕಕ್ಕೆ ಕಾರಣವಾಯ್ತು ಪುನೀತ್ ಹಠಾತ್ ನಿಧನದ ಬಳಿಕ ಆತಂಕದಿಂದ ಆಸ್ಪತ್ರೆಗೆ ಬರ್ತಿದ್ದಾರೆ ಎಂದು ಖುದ್ದು ವೈದ್ಯರು ತಿಳಿಸಿದರು. ಪುನೀತ್ ಸಾವಿನ ಬಳಿಕ 2 ರಿಂದ 3 ಪಟ್ಟು ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಮಂಡ್ಯದ ಪ್ರಿಯದರ್ಶಿನಿ ಹಾರ್ಟ್ ಕೇರ್ ಸೆಂಟರ್‌ ಕೂಡ ಜನರಿಂದ ತುಂಬಿದೆ. ಹೃದಯ ಸಂಬಂಧಿ ರೋಗಿಗಳ ಪೈಕಿ 70% ಯುವಜನರೆ ಇದ್ದಾರೆ.

ಹೃದಯ ಸಂಬಂಧಿ ಕಾಯಿಲೆ ತಡೆಗಟ್ಟುವಿಕೆ ಹೇಗೆ?

ಮೊದಲು ನೀವು ಜೀವನಶೈಲಿಯಲ್ಲಿ ಅಳವಡಿಸಿಕೊಂಡಿರುವ ಅಪಾಯಕಾರಿ ಅಂಶಗಳು ಯಾವುವು ಎಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅಧಿಕ ರಕ್ತದೊತ್ತಡ, ಸೊಂಟದ ಸುತ್ತಳತೆ, ಅನಾರೋಗ್ಯಕರ ಬಿಎಂಐ. ಅವುಗಳನ್ನು ಮೊದಲೇ ಸರಿಪಡಿಸಿಕೊಳ್ಳುವತ್ತ ಎಚ್ಚರವಹಿಸಿ.  ನಾವು ನಮಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ಉತ್ತಮ ಅಭ್ಯಾಸಗಳನ್ನು ಹೊಂದಿಸಬೇಕಾಗಿದೆ, ವಿಶೇಷವಾಗಿ ಬಾಲ್ಯದ ಸ್ಥೂಲಕಾಯತೆಯ ಮೇಲೆ ನಿಗಾ ಇಡಬೇಕಾಗುತ್ತದೆ ಮತ್ತು ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ನಮ್ಮ ಸಾಕಷ್ಟು ಯುವಜನರು ತಮ್ಮ ಅಪಾಯಕಾರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ನಾವು ಅಪಾಯಕಾರಿ ಅಂಶಗಳ ಮಾರ್ಪಾಡುಗಳ ಬಗ್ಗೆ ಯೋಚಿಸಲೇಬೇಕು. ಇಲ್ಲವಾದಲ್ಲಿ ಯುವ ಜನರಲ್ಲಿ ಹೃದಯಾಘಾತದ ಪ್ರಮಾಣವು ಏರುತ್ತಲೇ ಇರುತ್ತದೆ.
Published by:Kavya V
First published: