ಭಾವುಕ ಕ್ಷಣ..ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಲೇ ಕಾವೇರಿ ನಿವಾಸಕ್ಕೆ ದೌಡಾಯಿಸಿದ ಬಿಎಸ್​ವೈ ಕುಟುಂಬ!

BS Yediyurappa Family: ನಿರ್ಗಮಿತ ಸಿಎಂ ಆಗಿರುವ ಬಿಎಸ್​ವೈ ಸದ್ಯದಲ್ಲೇ ಕಾವೇರಿಯನ್ನು ತೊರೆಯಬೇಕು. ಕೊನೆ ಕ್ಷಣದಲ್ಲಿ ಯಡಿಯೂರಪ್ಪರನ್ನು ಕಾಣಲು ಇಡೀ ಕುಟುಂಬ ಕಾವೇರಿಗೆ ಬಂದಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ಬಿಎಸ್​ವೈ ಕುಟುಂಬ

ಬಿಎಸ್​ವೈ ಕುಟುಂಬ

  • Share this:
ಬೆಂಗಳೂರು: ಬಿ.ಎಸ್​.ಯಡಿಯೂಪರಪ್ಪ ತಮ್ಮ ಸರ್ಕಾರದ 2ನೇ ಸಾಧನಾ ಸಮಾವೇಶದಲ್ಲಿ ಗದ್ಗದಿತ ದನಿಯಲ್ಲೇ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ ಬಿಎಸ್​ವೈ ಮುಖ್ಯಮಂತ್ರಿಯ ಅಧಿಕೃತ ನಿವಾಸ ಕಾವೇರಿಗೆ ಮರಳಿದರು. ನಿರ್ಗಮಿತ ಸಿಎಂ ಆಗಿರುವ ಬಿಎಸ್​ವೈ ಸದ್ಯದಲ್ಲೇ ಕಾವೇರಿಯನ್ನು ತೊರೆಯಬೇಕು. ಕೊನೆ ಕ್ಷಣದಲ್ಲಿ ಯಡಿಯೂರಪ್ಪರನ್ನು ಕಾಣಲು ಇಡೀ ಕುಟುಂಬ ಕಾವೇರಿಗೆ ಬಂದಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ಪುತ್ರರಾದ ಬಿ.ವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ, ಪುತ್ರಿ ಅರುಣಾದೇವಿ ಕುಟುಂಬ ಆಗಮಿಸಿತು. ಮಕ್ಕಳು, ಮೊಮ್ಮಕ್ಕಳನ್ನು ಬರಮಾಡಿಕೊಂಡ ಬಿಎಸ್​ವೈ ಕೆಲವೊಂದಷ್ಟು ಕ್ಷಣ ಫ್ಯಾಮಿಲಿ ಜೊತೆ ಕಳೆದರು. ಅಧಿಕಾರದಿಂದ ಕೆಳಗಿಳಿದ ಬಳಿಕ ಸಂಪೂರ್ಣ ಕುಟುಂಬ ಮೊದಲ ಬಾರಿಗೆ ಭೇಟಿ ಆಯಿತು. ಮಕ್ಕಳು, ಮೊಮ್ಮಕ್ಕಳೊಂದಿಗೆ ವಿಷಾದಬೆರತ ನಗೆಯೊಂದಿಗೆ ಬಿಎಸ್​ವೈ ಮಾತನಾಡಿದರು ಎನ್ನಲಾಗುತ್ತಿದೆ. ಕೆಲವೊತ್ತು ಮಾತುಕತೆ ನಂತರ ಜೊತೆಯಾಗಿ ಎಲ್ಲರೂ ಫೋಟೋಗೆ ಫೋಸ್​ ಕೊಟ್ಟರು. ಸಿಎಂ ಅಧಿಕೃತ ನಿವಾಸದಲ್ಲಿ ಕುಟುಂಬದೊಂದಿಗೆ ಯಡಿಯೂರಪ್ಪರ ಕೊನೆ ಫೋಟೋ ಇದಾಗಿದೆ.

ನಂತರ ಹಂಗಾಮಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಮಾಜಿ ಸಚಿವರು ಮತ್ತು ಶಾಸಕರು ಆಗಮಿಸಿದರು. ಎಲ್ಲರಿಗಿಂತ ಗಮನ ಸೆಳೆದಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭೇಟಿ. ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಸಲ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಕೊನೆಗೂ ಅಧಿಕಾರದಿಂದ ಇಳಿದ ನಂತರವೇ ರಮೇಶ್ ಭೇಟಿಗೆ ಬಿಎಸ್​ವೈ ಮುಂದಾದರ ಎಂಬ ಮಾತು ಕೇಳಿ ಬಂತು. ಬಿಎಸ್​ವೈನ ಭೇಟಿಯಾದ ರಮೇಶ್ ಜಾರಕಿಹೊಳಿ ಸಮಧಾನದ ಮಾತುಗಳನ್ನು ಹೇಳಿದರಂತೆ.

ಇದನ್ನೂ ಓದಿ: ಯಡಿಯೂರಪ್ಪರ ಇಂದಿನ ಸ್ಥಿತಿಗೆ ಪುತ್ರ ವಿಜಯೇಂದ್ರನ ದುರಹಂಕಾರವೇ ಕಾರಣ: ಎಚ್.ವಿಶ್ವನಾಥ್ ಆರೋಪ

ಇನ್ನು ಯಡಿಯೂರಪ್ಪ ರಾಜೀನಾಮೆಯಿಂದ ಸಂಪುಟವೇ ವಿಸರ್ಜನೆಯಾಗಿದೆ. ಹೀಗಾಗಿ ಸಿಎಂ ಹಾಗೂ ಸಚಿವರ ಕಚೇರಿಗಳು ಇಂದು ಬಣಗುಟ್ಟಿದವು. ಸದಾ ಸಿಎಂ, ಸಚಿವರು ಹಾಗೂ ಭದ್ರತಾ ಸಿಬ್ಬಂದಿ ಗಳಿಂದ ಗಿಜುಗುಡತ್ತಿದ್ದ ವಿಧಾನಸೌಧದಲ್ಲಿ ಕೊಠಡಿಗಳು ಖಾಲಿ ಖಾಲಿಯಾಗಿ ಕಂಡವು. ದಿನದ ಕೊನೆಗೆ ನಿರ್ಗಮಿತ ಸಿಎಂ ಬಿ.ಎಸ್​.ಯಡಿಯೂರಪ್ಪ ಕಾವೇರಿಯನ್ನು ತೊರೆದು ಪುತ್ರರ ಸಮೇತ ತಾಜ್​​ವೆಸ್ಟ್​​ ಎಂಡ್​​ ಹೋಟೆಲ್​ಗೆ ತೆರಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: