KSR ರೈಲು ನಿಲ್ದಾಣದಲ್ಲಿ ನಮಾಜ್, ರೈಲ್ವೆ ಅಧಿಕಾರಿಗಳ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

Bengaluru railway station: ಹಿಂದೂ ಸಂಘಟನೆಗಳು ಮುಸ್ಲಿಮರು ನಮಾಜ್ ಮಾಡಿರುವುದನ್ನು ವಿರೋಧಿಸಿ ರೈಲು ನಿಲ್ದಾಣಕ್ಕೆ ಬಂದು ಗಲಾಟೆ ಮಾಡಿರುವುದನ್ನು ರೈಲು ನಿಲ್ದಾಣದಲ್ಲಿನ ಹಮಾಲಿಗಳು ವಿರೋಧ ಮಾಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿನ(Kranti Veera Sangolli Rayanna Railway Station) ಪ್ಲಾಟ್ಫಾರಂ (Platform)ಸಂಖ್ಯೆ 6ರಲ್ಲಿನ ಕೊಠಡಿ ಒಂದರಲ್ಲಿ ರೈಲು ನಿಲ್ದಾಣದಲ್ಲಿ(Railway Station) ಕೆಲಸ ಮಾಡುತ್ತಿದ್ದ ಮುಸ್ಲಿಮರು(Muslim) ನಮಾಜ್(Namaz) ಮಾಡುತ್ತಿದ್ದ ವಿಡಿಯೋ(Video) ಸೋಶಿಯಲ್ ಮೀಡಿಯಾದಲ್ಲಿ(Social Media) ಸಾಕಷ್ಟು ವೈರಲ್(Viral) ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಜನ ಜಾಗೃತಿ ಸಮಿತಿ, ಭಜರಂಗದಳ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷದ್‌ನ ಸದಸ್ಯರು ರೈಲು ನಿಲ್ದಾಣಕ್ಕೆ ನುಗ್ಗಿ ಗಲಾಟೆ ನಡೆಸಿದ್ದಾರೆ..

  ರೈಲು ನಿಲ್ದಾಣದಲ್ಲಿ ಮಸೀದಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ

  ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ರೈಲ್ವೆ ನಿಲ್ದಾಣದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣವಾಗುತ್ತಿದ್ದು, ಒಂದು ಸಮುದಾಯದ ಹಮಾಲಿಗಳು ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದಾರೆ. ಯಾವ ಆಧಾರದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಕೃತ್ಯ ರಾಷ್ಟ್ರೀಯ ಸುರಕ್ಷತಾ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಮುಸ್ಲಿಂ ಹಮಾಲರಿಗೆ ಪ್ರಾರ್ಥನೆ ಸಲ್ಲಿಸಲು ನಿಲ್ದಾಣದ ಹೊರ ಭಾಗಗಳಲ್ಲಿ ಹಲವಾರು ಮಸೀದಿಗಳಿವೆ. ಹೀಗಿದ್ದರೂ, ನಿಲ್ದಾಣದ ಫ್ಲಾಟ್‌ಫಾರ್ಮ್‌ಗಳ ಮಧ್ಯದಲ್ಲಿ ಅವಕಾಶ ನೀಡಿರುವುದು ಷಡ್ಯಂತ್ರವಾಗಿದೆ. ಮುಂದೊಂದು ದಿನ ಈ ಸ್ಥಳವನ್ನು ಮಸೀದಿಯನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಕೃತ್ಯಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

  ಇನ್ನು 2019 ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಮೊಹಮ್ಮದ್ ಅಕ್ರಮ್ ಎಂಬ ಭಯೋತ್ಪಾದಕನನ್ನು ಎನ್ಐಎ ಬಂಧಿಸಿತ್ತು. ಬೆಂಗಳೂರಿನ ಕಾಟನ್‌ಪೇಟೆ ಮಸೀದಿಯಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶ ಮೂಲದ ಜಮಾತ್ ಯುಐ ಮುಜಾಹಿದ್ದೀನ್‌ನ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರ್ಥನಾ ಸ್ಥಳಕ್ಕೆ ಅವಕಾಶ ನೀಡುವುದು ಎಷ್ಟು ಸೂಕ್ತ? ಹೀಗಾಗಿ ಅನಧಿಕೃತವಾಗಿ ಪ್ರಾರ್ಥನಾ ಸ್ಥಳಕ್ಕೆ ಅನುಮತಿ ನೀಡಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

  ನಮ್ಮಲ್ಲಿ ಸಾಮರಸ್ಯವಿದೆ ಒಡೆಯಬೇಡಿ ಎಂದ ಹಮಾಲಿಗಳು

  ಇನ್ನು ಹಿಂದೂ ಸಂಘಟನೆಗಳು ಮುಸ್ಲಿಮರು ನಮಾಜ್ ಮಾಡಿರುವುದನ್ನು ವಿರೋಧಿಸಿ ರೈಲು ನಿಲ್ದಾಣಕ್ಕೆ ಬಂದು ಗಲಾಟೆ ಮಾಡಿರುವುದನ್ನು ರೈಲು ನಿಲ್ದಾಣದಲ್ಲಿನ ಹಮಾಲಿಗಳು ವಿರೋಧ ಮಾಡಿದ್ದಾರೆ. ಬಗ್ಗೆ ಮಾತನಾಡಿರುವ ಹಮಾಲಿ ಒಬ್ಬರು ರೈಲು ನಿಲ್ದಾಣದಲ್ಲಿನ ನಾವೆಲ್ಲರೂ ಸಾಮರಸ್ಯದಿಂದ ಇದ್ದೇವೆ..
  ಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ನಾವು ಹಿಂದೂ-ಮುಸ್ಲಿಮ್ ಎಂದು ಎಂದಿಗೂ ಕಿತ್ತಾಡಿ ಇಲ್ಲ.. ಮುಸ್ಲಿಮರು ವಿಶ್ರಾಂತಿ ಮಾಡುವ ಕೋಣೆಗೆ ನಾವು ಎಂದಿಗೂ ಹೋಗುವುದಿಲ್ಲ.. ಅವರು ವಿಶ್ರಾಂತಿ ಮಾಡುವ ಕೋಣೆಯ ಪಕ್ಕದ ಇನ್ನೊಂದು ಕೋಣೆಯನ್ನು ನಾವು ಬಳಸುತ್ತಿದ್ದೇವೆ. ಅಲ್ಲಿ ನಾವು ಗಣೇಶ ಸೇರಿ ಹಲವು ದೇವರ ಫೋಟೋಗಳನ್ನು ಇಟ್ಟುಕೊಂಡಿದ್ದೇವೆ.. ನಮ್ಮ ಕೊಠಡಿಯಲ್ಲಿ ಗಣೇಶ ಚತುರ್ಥಿ ದೀಪಾವಳಿ ಆಯುಧಪೂಜೆ ಬೇರೆಲ್ಲಾ ಹಬ್ಬಗಳನ್ನು ಆಚರಣೆ ಮಾಡಿದ್ದೇವೆ.. ಅವರು ಅವರ ಹಬ್ಬಗಳನ್ನು ಆಚರಣೆ ಮಾಡಿದ್ದಾರೆ.. ನೀವು ನಮ್ಮಲ್ಲಿನ ಬಾಂಧವ್ಯವನ್ನು ಒಡೆಯಲು ನೋಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ನಂಬರ್ ಕೇಳ್ತಾರೆ, ಫೋಟೋ ಕೇಳ್ತಾರೆ ಆಮೇಲೆ ಹಣ ಕೀಳ್ತಾರೆ! ಆ್ಯಪ್‌ ಬಳಸೋ ಮಹಿಳೆಯರೇ ಹುಷಾರ್

  ಹಿಂದೂ ಸಂಘಟನೆಗಳ ಆರೋಪ ತಿರಸ್ಕರಿಸಿದ ಅಧಿಕಾರಿಗಳು

  ರೈಲ್ವೆ ನಿಲ್ದಾಣದ ಆವರಣದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂಬುದು ಸುಳ್ಳು. ರೈಲ್ವೆಯಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಹಮಾಲರಿದ್ದು, ಅವರು ವಿಶ್ರಾಂತಿ ಪಡೆಯಲು ಕೊಠಡಿಗಳನ್ನು ಒದಗಿಸಲಾಗಿದೆ. ಈ ಕೊಠಡಿಯಲ್ಲಿ ಎಲ್ಲ ಧರ್ಮದವರ ಫೋಟೋ ಈ ಕೊಠಡಿಗಳಲ್ಲಿ ಅಳವಡಿಸಿದ್ದು, ಸಹಬಾಳ್ವೆಯಿಂದ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅಲ್ಲದೆ, ಫ್ಲಾಟ್‌ಫಾರ್ಮ್‌ ಸಂಖ್ಯೆ 7ರಲ್ಲಿ ಹಿಂದೂ ದೇವರ ದೇವಾಲಯವಿದೆ. ಅಲ್ಲಿ ನಿತ್ಯ ಪೂಜೆಗಳು ನಡೆಯುತ್ತಿವೆ. ರೈಲ್ವೆ ನಿಲ್ದಾಣ ಸರ್ವ ಧರ್ಮಿಯರ ತಾಣವಾಗಿದ್ದು, ಒಂದು ಧರ್ಮದವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ..ಫ್ಲಾಟ್‌ಫಾರ್ಮ್‌ ಸಂಖ್ಯೆ 6ರಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ಮುಸ್ಲಿಮರು ನಮಾಜ್ ಮಾಡುತ್ತಿದ್ದಾರೆ.. ಇದರಲ್ಲಿ ಯಾವುದೇ ಹೊಸತನವಿಲ್ಲ
  ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
  Published by:ranjumbkgowda1 ranjumbkgowda1
  First published: