ಬೆಂಗಳೂರು (ಆ. 24): ರಾಜ್ಯದಲ್ಲಿ ಕೊರೋನಾ ಹಿನ್ನಲೆ ಶಾಲೆಗಳೇ ನಡೆದಿಲ್ಲ. ಆದರೂ ಕೂಡ ನಟ ಕೋಮಲ್ (Actor Komal) ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ವಿತರಿಸುವ ಸ್ವೆಟರ್ ಟೆಂಡರ್ (Sweater Tender) ಪಡೆದು ಕೊಂಡು, ಹಣ ಪಡೆದು ಕೊಂಡಿದ್ದಾರೆ. ಈ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (DSS) ಪ್ರತಿಭಟನೆ ನಡೆಸಿದೆ. ತಮ್ಮ ಮೇಲೆ ಕೇಳಿ ಬಂದ ಗಂಭೀರ ಆರೋಪದ ಹಿನ್ನಲೆ ಪ್ರತಿಕ್ರಿಯಿಸಿರುವ ನಟ ಕೋಮಲ್, ನನಗೂ ಈ ಸ್ವೆಟರ್ ಟೆಂಡರ್ ಗೂ ಯಾವುದೇ ಸಂಬಂಧವಿಲ್ಲ. ಈ ಆರೋಪ ಕೇಳಿ ಬಂದ ಬಳಿಕ ನಾನು ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮೇಲೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಬಿಬಿಎಂಪಿ ಟೆಂಡರ್ಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಿಲ್ಲ. ಕರ್ನಾಟಕ ಹ್ಯಾಂಡ್ ಲೂಮ್ ಡೆವಲಪ್ಮೆಂಟ್ ಕಾರ್ಪೋರೇಶನ್ ಕಡೆಯಿಂದ ಟೆಂಡರ್ ತೆಗೆದು ಕೊಂಡು ಎಲ್ಲ ಶಾಲೆಗಳಿಗೂ ಸ್ವೆಟರ್ ಪೂರೈಕೆ ಮಾಡಿ ಬಿಲ್ ಕೊಟ್ಟಿರಬಹುದು. ಈ ಟೆಂಡರ್ಗೂ ನನಗೂ ಯಾವುದೇ ಸಂಬಂಧವಿಲ್ಲ. ಅನಾವಶ್ಯಕವಾಗಿ ಈ ವಿಚಾರದಲ್ಲಿ ನನ್ನ ಹೆಸರಿಗೆ ಕಳಂಕ ಬರುವ ಕಾರ್ಯ ನಡೆಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಏನಿದು ಪ್ರಕರಣ? (BBMP Sweater Scam)
ಬಿಬಿಎಂಪಿ ಪ್ರತಿವರ್ಷ ತನ್ನ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್ನ್ನು ವಿತರಿಸುತ್ತದೆ. ಈ ಸ್ವೆಟರ್ ವಿತರಣೆಗೆ ಟೆಂಡರ್ ಕರೆಯಲಾಗುತ್ತದೆ. ಈ ಟೆಂಡರ್ ಅನ್ನು ನಟ ಕೋಮಲ್ ಪಡೆದಿದ್ದಾರೆ. ಕಳೆದ ವರ್ಷ ಈ ಸ್ವೇಟರ್ ಟೆಂಡರ್ ಅನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಹಣವನ್ನು ಕೂಡ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ಕಳೆದ ವರ್ಷ ಶಾಲೆಗಳೆ ನಡೆದಿಲ್ಲ. ಆದರೂ ಕೂಡ ಸ್ವೇಟರ್ ವಿತರಣೆ ಮಾಡಿದ್ದೇವೆ ಎಂದು ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಇದನ್ನು ಓದಿ: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಎಫ್ಎಸ್ಎಲ್ ವರದಿಯಲ್ಲಿ ರಾಗಿಣಿ, ಸಂಜನಾ ಪಾಸಿಟಿವ್
ಈ ಸಂಬಂಧ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ವೇಟರ್ ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಕಮಿಷನರ್ ಕಚೇರಿ ಮುಂಭಾಗ ನೂರಾರು ಸ್ವೆಟರ್ ಗಳನ್ನು ಸುರಿದು ಒಂದು ಸ್ವೆಟರ್ 50 ಬೆಲೆ ನಿಗದಿ ಮಾಡಿ ಹರಾಜು ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ. ಎಸ್ ರಘು, ಕಳೆದ ವರ್ಷ ಶಾಲಾ ಕಾಲೇಜುಗಳ ತರಗತಿಗಳು ನಡೆದಿಲ್ಲ. ಆದರೂ ಮಕ್ಕಳಿಗೆ ಸ್ವೇಟರ್ ವಿತರಣೆ ಮಾಡಿದ್ದೇವೆ ಅಂತ ಹಣ ಬಿಡುಗಡೆ ಮಾಡಲಾಗಿದೆ. ಪಾಲಿಕೆ ಅಧಿಕಾರಗಳ ಮೇಲೆ ನಟ ಜಗ್ಗೇಶ್ ಸಚಿವ ಆರ್ ಅಶೋಕ್ ಮೂಲಕ ಜಗ್ಗೇಶ್ ಒತ್ತಡ ಹಾಕಿ ಸ್ವೆಟರ್ ವಿತರಣೆ ಗುತ್ತಿಗೆಯನ್ನು ಪಡೆದಿದ್ದು, ನಟ ಕೋಮಲ್ ಗೆ ಹಣ ಬಿಡುಗಡೆ ಮಾಡಲಾಗಿದೆ. ಮಕ್ಕಳಿಗೆ ಸ್ವೆಟರ್ ನೀಡಿದ್ದೇವೆ ಎಂದು ಒಂದು ಮುಕ್ಕಾಲು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಆರೀಪ ಮಾಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ