• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!

Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!

ಆರೋಪಿ ನಾಗೇಶ್​

ಆರೋಪಿ ನಾಗೇಶ್​

ಹುಡುಗಿ ಅಣ್ಣ ಅಂತಾ ಕರೆದಾಗ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದೆ. ಅದ್ರೆ ಅಪಪ್ರಚಾರ ಮಾಡ್ತಾವ್ರೆ ಅಂತಾ ಆಸಿಡ್ ಹಾಕಿದೆ ಎಂದು ನಾಗೇಶ್ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

 • Share this:

Bengaluru Acid Attack Case : ಎಸ್ಕೇಪ್ ಆಗಲು ಪ್ರಯತ್ನಿಸಿ ಗುಂಡೇಟು ತಿಂದು ಆಸಿಡ್ ನಾಗ (Accused Acid Naga) ಬಿಜಿಎಸ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಬಂಧನದ ಬಳಿಕ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದು, ಈ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಆಸಿಡ್ ನಾಗೇಶನ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ಶಾಕ್ ಆಗದ್ದರು ಎಂದು ತಿಳಿದು ಬಂದಿದೆ. ಆಸಿಡ್ ಹಾಕುವಾಗ ನಾಗೇಶ್ ಕೈಗೆ ಗಾಯ (Wound) ಮಾಡಿಕೊಂಡಿದ್ದನು. ತನ್ನ ಕೈ ನೋಡಿದಾಗಲೆಲ್ಲ ಯುವತಿ (Victim) ಅಳೋದು ನೆನಪಾಗಬೇಕು ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ಏನು ಕೈ ಗಾಯ ಅಂದ್ರೆ, ನನ್ನ ಕೈ ನೋಡಿಕೊಂಡಾಗ ಅವಳು ಅಳೋದು ನೆನಪಾಗುತ್ತೆ ಎಂದು ತನ್ನ ವಿಕೃತ ಮನಸ್ಸಿನ ಭಾವನೆಯನ್ನ ತೆರೆದಿಟ್ಟಿದ್ದಾನೆ.


ಆಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದೆ. ಆದರೆ ಅವಳು ನನ್ನನ್ನು ಅಣ್ಣ ಎಂದು ಕರೆದು ಮದುವೆ ನಿಶ್ಚಯವಾಗಿದೆ ಎಂದು ಹೇಳಿದಳು. ಇದರಿಂದ ನನಗೆ ಕೋಪ ಬಂತು. ಅಂದೇ ಅಂಗಡಿಗೆ ಹೋಗಿ ಆಸಿಡ್ ಖರೀದಿ ಮಾಡಿದೆ ಎಂದು ಹೇಳಿದ್ದಾನೆ.


ಜೈಲಿನಲ್ಲಿ ಮೂರು ಹೊತ್ತು ಊಟ ಹಾಕ್ತಾರೆ ಸರ್


ಆದ್ರೆ ನನಗೆ ಆಸಿಡ್ ಹಾಕಬೇಕು ಅಂತ ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆಗ ಹಾಕಿದೆ. ನೀವು ಹುಡುಕ್ತಿರ್ತೀರಾ ಅಂತಾ ಗೊತ್ತಿತ್ತು ಸರ್. ಮೂರು ಹೊತ್ತು ಊಟ ಜೈಲಲ್ಲಿದ್ರೂ ಹಾಕ್ತಾರೆ. ಧ್ಯಾನ ಮಾಡ್ಕೊಂಡು ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದೆ.


ತಿರುಮಣ್ಣಾಮಲೈಗೆ ಹೋಗಿ ಜೀವನ ಮಾಡೋಣ ಅಂತ ಪ್ಲಾನ್ ಮಾಡಿದ್ದೆ. ಹುಡುಗಿ ಅಣ್ಣ ಅಂತಾ ಕರೆದಾಗ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದೆ. ಅದ್ರೆ ಅಪಪ್ರಚಾರ ಮಾಡ್ತಾವ್ರೆ ಅಂತಾ ಆಸಿಡ್ ಹಾಕಿದೆ ಎಂದು ನಾಗೇಶ್ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.


ಇದನ್ನೂ ಓದಿ:  Acid Attack: ನಾಪತ್ತೆಯಾಗಿದ್ದ ಆಸಿಡ್ ನಾಗ ಪೊಲೀಸರಿಗೆ ಸಿಕ್ಕಿದ್ದೇ ರೋಚಕ; ಇಲ್ಲಿದೆ ತನಿಖೆಯ ಇನ್ ಸೈಡ್ ಸ್ಟೋರಿ


ನನ್ನ ಅಣ್ಣ ನನಗೆ ಬೈದಿದ್ದ


ನಾನು ಆಸಿಡ್ ಹಾಕಬಾರದು ಅಂತಲೇ ಇದ್ದೆ. ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆಸಿಡ್ ಹಾಕ್ತೀನಿ ಎಂದಿದ್ದೆ.  ಆದ್ರೆ ಯುವತಿ ಅದನ್ನ ಅವರ ಪೋಷಕರಿಗೆ ಹೇಳಿದ್ದಾಳೆ. ಅವರ ತಂದೆ ನನ್ನ ಅಣ್ಣನಿಗೆ ಹೇಳಿದ್ರು. ನನ್ನ ಅಣ್ಣ ನನಗೆ ಬೈದಿದ್ದ ಎಂದು ಹೇಳಿದ್ದಾನೆ.


ಸಂತ್ರಸ್ತೆ ತಾಯಿ ಲಕ್ಷಮ್ಮ ಹೇಳಿಕೆ


ಅವನಿಗೆ ಕಾಲಿಗೆ ಗುಂಡೇಟು ಹಾಕಿದ್ದು ಸಮಾಧಾನ ತಂದಿಲ್ಲ. ನನ್ನ ಮಗಳಿಗೆ ಎಷ್ಟು ನೋವು ಅನುಭವಿಸಿದ್ದಾಳೆ. ಅಂಥದೇ ನೋವು ಅವನು ಅನುಭವಿಸಬೇಕು. ಅವನು ನರಳಿ ನರಳಿ ಸಾಯಬೇಕು. ಗುಂಡು ಹೊಡೆಯೋದು ಬೇಡ. ಅವನಿಗೆ ಗುಂಡು ಹೊಡೆದಿದ್ದು ನನಗೆ ಸಮಾಧಾನ ತಂದಿಲ್ಲ. ಮಗಳಿಗೆ ಮೂರು ಸರ್ಜರಿ ಆಗಿದೆ. ಇವತ್ತು ನಾಲ್ಕನೇ ಸರ್ಜರಿಗೆ ಕರೆದುಕೊಂಡು ಹೋಗ್ತಿದ್ದಾರೆ ಎಂದು ಸಂತ್ರಸ್ತೆ ತಾಯಿ ಲಕ್ಷಮ್ಮ ಕಣ್ಣೀರು ಹಾಕುತ್ತಾರೆ.


ನನ್ನ ಮಗಳು ನೋವು ತಿಂದಂತೆ ಅವನು ನೋವು ತಿನ್ನಬೇಕು. ಮಗಳಿಗೆ ಅವತ್ತೇ ಆರೋಪಿ ನಾಗೇಶ್ ಸಿಕ್ಕಿದ್ದಾನೆ ಅಂತ ಹೇಳಿದ್ದೀವಿ. ಈಗ ಸಿಕ್ಕಿದ್ದಾನೆ ಅಂತ ಹೇಳಿದ್ರೆ ಅವಳಿಗೆ ನೋವಾಗುತ್ತದೆ. ಅದಕ್ಕೆ ನಾವು ಏನೂ ಹೇಳಿಲ್ಲ. ಈ ರೀತಿ ಪ್ರಕರಣಗಳು ಇಲ್ಲಿಗೆಯೇ ಕೊನೆ ಆಗಬೇಕು.


ಇದನ್ನೂ ಓದಿ:  Acid Naga: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ; ಆಸಿಡ್ ನಾಗನ ಕಾಲಿಗೆ ಗುಂಡೇಟು


ದೇವರು ಮೋಸ ಮಾಡಲ್ಲ

top videos


  ಇವತ್ತು ಸರ್ಜರಿ ಮಾಡಿದ ಬಳಿಕ  ನೋಡಬೇಕು. ಅವನು ದೇವರ ಜಪ ಮಾಡೋಕೆ ಆಶ್ರಮಕ್ಕೆ ಹೋಗಿದ್ದ ಅನ್ನಿಸುತ್ತೆ. ಆದ್ರೆ ದೇವರು ಮೋಸ ಮಾಡಲ್ಲ. ಅದರಿಂದಲೇ ಆತ ಸಿಕ್ಕಿ ಬಿದ್ದಿದ್ದಾನೆ.  ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಅವನು ನನ್ನ ಮಗಳು ಹೇಗೆ ನೋವು ಅಂತ ನರಳುತ್ತಿದ್ದಾಳೋ ಅವನೂ ನರಳಬೇಕು ಅಷ್ಟೇ ನಾವು ಕೇಳಿಕೊಳ್ಳುವುದು ಎಂದು ಕೈ ಮುಗಿದರು.

  First published: