Cheating Case: ಸೈಟ್ ಮಾರಾಟ ಮಾಡಿಕೊಡೋದಾಗಿ ಬೆಂಗಳೂರಿನ ನಿವೃತ್ತ ಎಸಿಪಿಗೆ ವಂಚನೆ; FIR ದಾಖಲು

ಲಕ್ಷ್ಮೀ ನಾರಾಯಣ್ ಜೊತೆಗೆ ಶಶಿ ಎಸ್ ಪಾಟೀಲ್ ಎಂಬುವವರ ಮೇಲೆಯೂ ಸಹ ದೂರು ನೀಡಿದ್ದಾರೆ. 55 ಲಕ್ಷ ಹಣವನ್ನು ನಿವೃತ್ತ ಎಸಿಪಿ ಎಷ್ಟು ಬಾರಿ ಕೇಳಿದ್ರು ಲಕ್ಷ್ಮಿನಾರಾಯಣ್ ನೀಡುತ್ತಿಲ್ಲ ಎಂದು ನಿವೃತ್ತ ಎಸಿಪಿ ಆರೋಪಿಸಿದ್ದಾರೆ.

ನಿವೃತ್ತ ಎಸಿಪಿ ಲವಕುಮಾರ್

ನಿವೃತ್ತ ಎಸಿಪಿ ಲವಕುಮಾರ್

  • Share this:
ಬೆಂಗಳೂರು(ಸೆ.19): ಸೈಟು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಆರೋಪ ಕೇಳಿಬಂದಿದೆ. ಖುದ್ದು ನಿವೃತ್ತಿ ಎಸಿಪಿ ಲವಕುಮಾರ್ ಅಶೋಕನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಈಗ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದಾರೆ.

ದೂರುದಾರರಾದ ನಿವೃತ್ತಿ ಎಸಿಪಿ ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿ ಬಳಿಯ ರಾಜಪುರ ಹಳ್ಳಿಯ ನವ್ಯ ಲೇ ಔಟ್​​ನಲ್ಲಿ ಸೈಟ್ ನಂಬರ್ 252, 253 ಹಾಗೂ 356 ನಂಬರಿನ ಮೂರು ಸೈಟ್ ಗಳನ್ನು ಹೊಂದಿದ್ದು, ಇತ್ತೀಚೆಗೆ ಅವುಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಈ ವೇಳೆ ತನ್ನ ಪರಿಚಯಸ್ಥರ ಮೂಲಕ ಶೆಲ್ಟರ್ಸ್ ಕಂಪೆನಿಯ ಮ್ಯಾನೇಜಿಂಗ್ ಡೈರಕ್ಟರ್ ಲಕ್ಷ್ಮೀ ನಾರಾಯಣ್ ಎಂಬುವವರನ್ನು ಸಂಪರ್ಕ ಮಾಡಿದ್ದು, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಟೊಯೊಟಾ ಶೋ ರೂಂ ಬಳಿಕ ಜಮೀನಿಗೆ ಸಬಂಧಿಸಿದ ದಾಖಲೆಗಳನ್ನು ನೀಡಿರುತ್ತಾರೆ.

ಇದನ್ನೂ ಓದಿ:BJP Core Committee Meeting: ಇಂದು ದಾವಣಗೆರೆಯಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ; ಈ ವಿಷಯಗಳ ಬಗ್ಗೆ ಚರ್ಚೆ

ಅದ್ರಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕ ಸುಮಾರು 85 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿರುತ್ತಾರೆ ಆದ್ರೆ ನನ್ನ ಅಕೌಂಟ್ ಗೆ ಕೇವಲ 30 ಲಕ್ಷ ಹಣವನ್ನು ಮಾತ್ರ ಡೆಪಾಸಿಟ್ ಮಾಡಿದ್ದು ಉಳಿದ ಹಣವನ್ನು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಅಂತ ನಿವೃತ್ತ ಎಸಿಪಿ ಲವಕುಮಾರ್ ನೀಡಿರೋ ಎಫ್ ಐ ಆರ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ಆರೋಪಿ


ಇನ್ನು ಮೂರು ನಿವೇಶನಗಳ ಇವತ್ತಿನ ಮಾರುಕಟ್ಟೆಯ ಬೆಲೆ 90 ಲಕ್ಷ ರೂಪಾಯಿ ಆಗಿದ್ದು, ಅದ್ರಲ್ಲೂ ಕಡಿಮೆಗೆ ಮಾರಾಟ ಮಾಡಿರೋದು ಅಲ್ಲದೆ ಅದ್ರಲ್ಲೂ ಕೇವಲ30 ಲಕ್ಷ ಹಣವನ್ನು ಮಾತ್ರ ನಿವೃತ್ತ ಎಸಿಪಿ ಲವಕುಮಾರ್ ಗೆ ನೀಡಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ‌‌. ಇನ್ನು ಲಕ್ಷ್ಮೀ ನಾರಾಯಣ್ ಜೊತೆಗೆ ಶಶಿ ಎಸ್ ಪಾಟೀಲ್ ಎಂಬುವವರ ಮೇಲೆಯೂ ಸಹ ದೂರು ನೀಡಿದ್ದಾರೆ. 55 ಲಕ್ಷ ಹಣವನ್ನು ನಿವೃತ್ತ ಎಸಿಪಿ ಎಷ್ಟು ಬಾರಿ ಕೇಳಿದ್ರು ಲಕ್ಷ್ಮಿನಾರಾಯಣ್ ನೀಡುತ್ತಿಲ್ಲ. ಸಾಕಷ್ಟು ಬಾರಿ ಕೊಡುವುದಾಗಿ ಭರವಸೆ ನೀಡಿದ್ರು. ಆದ್ರೆ ಇದುವರೆಗೂ ಯಾವುದೇ ಹಣವನ್ನು ಸಹ ಅವರು ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ನಿವೃತ್ತ ಎಸಿಪಿ‌ ಲವಕುಮಾರ್ ಆರೋಪಿಸಿದ್ದಾರೆ.

ಇದನ್ನೂ ಓದಿ:Karnataka Dams Water Level: ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ? ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ತನಗೆ ಅಷ್ಟೇ ಅಲ್ಲದೆ ಇನ್ನು ಹಲವರಿಗೆ ಇದೇ ತರ ಮೋಸ ಮಾಡಿರೋ ಸಾಧ್ಯತೆ ಇದೆ, ನನಗಾದ ಮೋಸ ಬೇರೆಯವರಿಗೆ ಆಗದಿರಲಿ ಅಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ನಿವೃತ್ತ ಎಸಿಪಿ ಲವಕುಮಾರ್ ಬೆಂಗಳೂರು, ಬೆಂ.ಗ್ರಾಮಾಂತರ ಸೇರಿ ಹಲವು ಜಿಲ್ಲೆಯಲ್ಲಿ ಕೆಲಸ ಮಾಡಿ ಎಸಿಪಿ ಆದ ಬಳಿಕ ನಿವೃತ್ತಿ ಹೊಂದಿದ್ದರು.

ಸದ್ಯ ಅಶೋಕನಗರ ಪೊಲೀಸರು ಈಗ ಈ ಬಗ್ಗೆ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದು, ನಿವೃತ್ತ ಎಸಿಪಿ ಲವಕುಮಾರ್ ರಿಂದ ಸ್ಟೇಟ್ ಮೆಂಟ್ ಸಹ ತಗೊಂಡಿದ್ದು  ಸದ್ಯ ಐಪಿಸಿ ಸೆಕ್ಷನ್ 406, 420ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Published by:Latha CG
First published: