• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident in Bengaluru: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕಾರಿನಲ್ಲಿದ್ದ 7 ಮಂದಿ ದಾರುಣ ಸಾವು

Accident in Bengaluru: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕಾರಿನಲ್ಲಿದ್ದ 7 ಮಂದಿ ದಾರುಣ ಸಾವು

ಅಪಘಾತಕ್ಕೀಡಾದ ಕಾರು

ಅಪಘಾತಕ್ಕೀಡಾದ ಕಾರು

Accident in Bengaluru: ಮೃತರೆಲ್ಲರೂ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತರಲ್ಲಿ ದಂಪತಿ ಸಹ ಇದ್ದರು. ಕರುಣಾಸಾಗರ , ಬಿಂದು (28) - ದಂಪತಿ, ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತರು ಎಂದು ತಿಳಿದು ಬಂದಿದೆ.

  • Share this:

ಬೆಂಗಳೂರು(ಆ.31): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಸುಮಾರು 7 ಮಂದಿ ದುರಂತ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೋರಮಂಗಲದ 80 ಅಡಿ ರಸ್ತೆಯ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರಂತ ಘಟನೆ ನಡೆದಿದೆ. 


ಅಪಘಾತಕ್ಕೀಡಾದ ಕಾರು ಆಡಿ ಕ್ಯೂ ಎನ್ನಲಾಗಿದ್ದು, ವೇಗವಾಗಿ ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ತಡರಾತ್ರಿ ಬಹಳ ವೇಗವಾಗಿ ಬಂದ ಕಾರು ಫುಟ್​​ಪಾತ್​​ಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.


ಇದನ್ನೂ ಓದಿ:Fertility Issues: ಬಂಜೆತನ ಸಮಸ್ಯೆ ನಿವಾರಣೆಗೆ ಯೋಗಾಸನ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?


ಕಾರಿನ ಮುಂಬದಿ ಸೀಟಿನಲ್ಲಿ ಮೂವರು, ಹಿಂದೆ ನಾಲ್ವರು ಕುಳಿತಿದ್ದರು‌. ಮೃತರೆಲ್ಲರೂ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತರಲ್ಲಿ ದಂಪತಿ ಸಹ ಇದ್ದರು. ಕರುಣಾಸಾಗರ , ಬಿಂದು (28) - ದಂಪತಿ, ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತರು ಎಂದು ತಿಳಿದು ಬಂದಿದೆ. ಮೃತ ದೇಹಗಳನ್ನು ಸೇಂಟ್ ಜಾನ್ಸ್​​ ಆಸ್ಪತ್ರೆಗೆ ರವಾನಿಸಲಾಗಿದೆ.


ಅಕ್ಷಯ್ ಗೋಯಲ್ ಕೇರಳಾ ಮೂಲದವನು, ಉತ್ಸವ್ - ಹರ್ಯಾಣ, ರೋಹಿತ್ - ಹುಬ್ಬಳ್ಳಿ, ಕರುಣಾ ಸಾಗರ್- ಹೊಸೂರು ಮೂಲದವನು. ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.


ಇದನ್ನೂ ಓದಿ:Xiaomi: 5ನೇ ಬಾರಿಗೆ ದರ ಹೆಚ್ಚಿಸಿದ Redmi Note 10; ಈ ಸ್ಮಾರ್ಟ್​ಫೋನ್​ಗೆ ಅಷ್ಟೊಂದು ಬೇಡಿಕೆ ಇದೆಯಾ?

top videos


    ಕಾರಿನಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದು, 3 ಜನ ಯುವರಿಯರು ಹಾಗೂ 4 ಜನ ಹುಡುಗರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಮಧ್ಯರಾತ್ರಿ ಸುಮಾರು 1.30ಕ್ಕೆ ನಡೆದಿದ್ದು, ಸ್ಥಳಕ್ಕೆ ಆಡುಗೋಡಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.

    First published: